Advertisement

Head Coach; ರಾಹುಲ್ ದ್ರಾವಿಡ್ ಬಳಿಕ ಕೋಚ್ ಹುದ್ದೆ ನಿರಾಕರಿಸಿದ ಟೀಂ ಇಂಡಿಯಾ ದಿಗ್ಗಜ

11:38 AM May 16, 2024 | Team Udayavani |

ಮುಂಬೈ: ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗಾಗಿ ಬಿಸಿಸಿಐ ಹುಡುಕಾಟ ಆರಂಭಿಸಿದೆ. ಮುಂಬರುವ ಟಿ20 ವಿಶ್ವಕಪ್ ಬಳಿಕ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಅಂತ್ಯವಾಗುವ ಕಾರಣದಿಂದ ಹೊಸ ಕೋಚ್ ಆಯ್ಕೆಗೆ ಬಿಸಿಸಿಐ ಮುಂದಾಗಿದೆ.

Advertisement

ಬಿಸಿಸಿಐ ಜಾಹೀರಾತಿನ ಪ್ರಕಾರ, ಜುಲೈ 1 ರೊಳಗೆ ಹೊಸ ಕೋಚ್ ಅಧಿಕಾರ ವಹಿಸಿಕೊಳ್ಳಲು ಯೋಜಿಸಿದೆ. ಹೊಸ ಕೋಚ್ 2027 ರ ಅಂತ್ಯದವರೆಗೆ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. 2025 ರ ಚಾಂಪಿಯನ್ಸ್ ಟ್ರೋಫಿ ಮತ್ತು ಮತ್ತು 2027ರ ಏಕದಿನ ವಿಶ್ವಕಪ್ ತಂಡವನ್ನು ಮಾರ್ಗದರ್ಶನ ಮಾಡುವ ಜವಾಬ್ದಾರಿಯು ಅವರ ಮೇಲಿರುತ್ತದೆ.

ವರದಿಗಳ ಪ್ರಕಾರ ಭಾರತೀಯ ಕ್ರಿಕೆಟ್ ತಂಡವು ಬಹಳ ಸಮಯದ ನಂತರ ವಿದೇಶದಲ್ಲಿ ಕೋಚ್ ನ್ನು ಹೊಂದಬಹುದು.

2023ರ ಏಕದಿನ ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ಅವರ ಮೊದಲ ಅವಧಿ ಅಂತ್ಯವಾಗಿತ್ತು. ಆದರೆ ಬಿಸಿಸಿಐ ಕೋರಿಕೆಯ ಮೇರೆಗೆ ಮತ್ತೆ ಒಂದು ವರ್ಷ ಮುಂದುವರಿದಿದ್ದರು. ಟಿ20 ವಿಶ್ವಕಪ್ ಅವರ ಕೊನೆಯ ಯೋಜನೆಯಾಗಿರಲಿದೆ. ವೈಯಕ್ತಿಕ ಕಾರಣದಿಂದ ರಾಹುಲ್ ಅವರು ಕೋಚ್ ಹುದ್ದೆಯಲ್ಲಿ ಮುಂದುವರಿಯಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಕೆಲವು ಹಿರಿಯರು ಟೆಸ್ಟ್ ತಂಡದಲ್ಲಿ ಮುಂದುವರಿಯುವಂತೆ ಮನವಿ ಮಾಡಿದರು, ಆದರೆ ಅವರು ನಿರಾಕರಿಸಿದರು ಎಂದು ವರದಿಯಾಗಿದೆ.

Advertisement

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ ಸಿಎ) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ಮುಂದಿನ ಕೋಚ್ ಆಗಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಅವರು ಕೂಡಾ ನಿರಾಕರಿಸಿದ್ದಾರೆ ಎನ್ನಲಾಗಿದೆ.

ನ್ಯೂಜಿಲ್ಯಾಂಡ್ ನ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು ಭಾರತ ತಂಡದ ಮುಖ್ಯ ಕೋಚ್ ಹುದ್ದೆಯ ರೇಸ್ ನಲ್ಲಿದ್ದಾರೆ ಎನ್ನಲಾಗಿದೆ. ಫ್ಲೆಮಿಂಗ್ ಅವರ ಮ್ಯಾನೇಜ್‌ಮೆಂಟ್ ಕೌಶಲ್ಯ ಕಾರಣದಿಂದ ಬಿಸಿಸಿಐ ಅವರನ್ನು ‘ಸೂಕ್ತ ಅಭ್ಯರ್ಥಿ’ ಎಂದು ಪರಿಗಣಿಸುತ್ತದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆದರೆ ಸಿಎಸ್ ಕೆ ಫ್ರಾಂಚೈಸಿ ಅಂತಹ ಯಾವುದೇ ವದಂತಿಗಳನ್ನು ನಿರಾಕರಿಸಿದೆ. ಸಿಇಒ ಕಾಸಿ ವಿಶ್ವನಾಥನ್ ಅವರು ಫ್ಲೆಮಿಂಗ್ ಮತ್ತು ಫ್ರಾಂಚೈಸಿ ನಡುವೆ ಯಾವುದೇ ರೀತಿಯ ಸಂವಹನ ನಡೆದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next