Advertisement
ಇಲ್ಲಿಯ ಶಿವಬಸವ ನಗರದ ದಿ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರ್ಸ್(ಇಂಡಿಯಾ) ಸಭಾಂಗಣದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಪ್ತಸ್ವರ ಸಂಗೀತ ಕಲಾ ಬಳಗ ವತಿಯಿಂದ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ರವಿವಾರ ಕನ್ನಡಕ್ಕಾಗಿ ನಾವು ಅಭಿಯಾನದಡಿಯಲ್ಲಿ ಗಡಿ ಕನ್ನಡ ಸಾಂಸ್ಕೃತಿಕ ಉತ್ಸವ, ಕವಿಗೋಷ್ಠಿ ಹಾಗೂ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಉತ್ಸವದ ಸರ್ವಾಧ್ಯಕ್ಷ, ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ಮಾತನಾಡಿ, ಈ ಭಾಗದ ಬಹುದಿನಗಳ ಬೇಡಿಕೆ ಆಗಿದ್ದ ಮುಂಬೆ„ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಮರುನಾಮಕರಣ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿದ್ದಾರೆ. ಕೇವಲ ಹೆಸರು ಬದಲಾದರೆ ಸಾಲದು. ಕಿತ್ತೂರು-ಕರ್ನಾಟಕ ಭಾಗದ ಅಭಿವೃದ್ಧಿ ಆಗಬೇಕು. ಅಂದಾಗ ಮಾತ್ರ ಈ ಪ್ರದೇಶ ಮುಂಚೂಣಿಗೆ ಬರಲು ಸಾಧ್ಯ ಎಂದು ಹೇಳಿದರು.
ಸಾಹಿತಿ ಯ.ರು. ಪಾಟೀಲ ಮಾತನಾಡಿ, ಮಕ್ಕಳಲ್ಲಿ ಕನ್ನಡದ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಯಾವುದೇ ಪ್ರದೇಶದಲ್ಲಿ ಮಕ್ಕಳು ಬಳಸಿದರೆ ಮಾತ್ರ ಆ ಭಾಷೆ ಬೆಳವಣಿಗೆಯಾಗುತ್ತದೆ. ಪ್ರತಿ ಮನೆ ಮನೆಯಲ್ಲಿಯೂ ಕನ್ನಡ ಉಳಿಸಿ, ಬೆಳೆಸುವ ಅಭಿಯಾನ ಆರಂಭವಾಗಬೇಕು ಎಂದು ತಿಳಿಸಿದರು. ಸಾಹಿತಿ ಪಿ.ಎಸ್. ವಂಟಗೋಡಿ ಮಾತನಾಡಿ, ಪಶ್ಚಾತ್ಯ ಸಂಸ್ಕೃತಿಯಿಂದ ಹೊರ ಬಂದು ಕನ್ನಡ ಬೆಳೆಸುವ ಕೆಲಸಆಗಬೇಕು. ನಾವೂ ಎಲ್ಲ ಭಾಷೆಗಳನ್ನೂ ಪ್ರೀತಿಸಬೇಕು. ಆದರೆ ಕನ್ನಡವನ್ನು ಪೂಜಿಸಬೇಕು ಎಂದರು. ಸಾಮಾಜಿಕ ಕಾರ್ಯಕರ್ತ ಬಾಳಾಸಾಹೇಬ ಉದಗಟ್ಟಿ, ಬಸವರಾಜ ಗಾರ್ಗಿ, ಶ್ರೀರಂಗ ಜೋಶಿ, ಡಾ. ಫಕೀರನಾಯ್ಕ ಗಡ್ಡಿಗೌಡರ, ಆನಂದ ರಾಥೋಡ, ಗಣೇಶ ರಾಯ್ಕರ, ಸುಮಾ ಹಡಪದ, ವೀಣಾ ಕಿಡದಾಳ, ಹಜರತ್ ಮುಲ್ಲಾ, ಮಲ್ಲಿಕಾರ್ಜುನ ನಾಯಕ ಇತರರು ಇದ್ದರು. ನಂತರ ನಡೆದ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು.ಕವಿಗೋಷ್ಠಿಯಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಕವಿಗಳು ಕಾವ್ಯ ವಾಚಿಸಿದರು. ಕನ್ನಡದ ಉಳಿವಿಗಾಗಿ ಶ್ರಮಿಸಿದವರನ್ನು ಸತ್ಕರಿಸಲಾಯಿತು.