Advertisement

ನಿಧಿ ಹುಡುಕಲು ಅಳಿಲಿಗೊಂದು ನಕಾಶೆ ಕೊಡಿ

06:00 AM Aug 30, 2018 | |

ನಿಧಿಯನ್ನು ಒಂದು ಜಾಗದಲ್ಲಿ ಹೂತಿಟ್ಟು, ಅನುಕೂಲಕರ ಸಮಯ ನೋಡಿ ನಿಧಿಯನ್ನು ಹೊರತೆಗೆಯುವವರನ್ನು ನಿಧಿ ಶೋಧಕರೆಂದು ಕರೆಯುತ್ತೇವೆ. ಪುರಾತನ ಕಾಲದಲ್ಲಿ ಯಾವುದೋ ಅಪರಿಚಿತ ಕಾರಣದಿಂದಾಗಿ ಕಳೆದುಹೋದ ಸಂಪತ್ತು ಅದೆಷ್ಟೋ. ಅವುಗಳ ಶೋಧನೆಯಲ್ಲಿ ಮನುಷ್ಯ ಅನಾದಿ ಕಾಲದಿಂದಲೂ ತೊಡಗಿದ್ದಾನೆ. ಭೂಮಿಯಡಿ, ಸಮುದ್ರದಡಿ ಮುಂತಾದ ಕಡೆಗಳಲ್ಲೆಲ್ಲಾ ಮನುಷ್ಯ ಕಳೆದುಹೋದ ನಿಧಿಗಾಗಿ ಹುಡುಕುತ್ತಲೇ ಇದ್ದಾನೆ. 

Advertisement

ನಿಧಿಯನ್ನು ಹೂತಿಟ್ಟು ಅದನ್ನು ಮರೆತುಬಿಡುವ ಜೀವಿ ಯಾವುದೆಂದು ನಿಮಗೆ ಗೊತ್ತೇ? ಅಳಿಲು. ಅಳಿಲಿಗೆ ಯಾಕೆ ಚಿನ್ನಾಭರಣಗಳ ಗೊಡವೆ ಎಂದು ತಪ್ಪು ತಿಳಿಯಬೇಡಿ. ನಮಗಿರುವಂತೆ ಅವುಗಳಿಗಿನ್ನೂ ಚಿನ್ನದ ಮೇಲೆ ವ್ಯಾಮೋಹ ದೇವರ ದಯೆಯಿಂದ ಬಂದಿಲ್ಲ. ಅವುಗಳಿಗೆ ನಿಧಿ ಎಂದರೆ “ಆಹಾರ’. ಅಳಿಲು ಸೇವಿಸಿ ಮಿಕ್ಕುಳಿದ ಆಹಾರವನ್ನು ಭವಿಷ್ಯದಲ್ಲಿ ಆಹಾರದ ಕೊರತೆ ಉಂಟಾದರೆ ಇರಲಿ ಎಂಬ ದೂರಾಲೋಚನೆಯಿಂದ ಭೂಮಿಯಡಿ ಹುಗಿದು ಇಡುತ್ತದೆ. ಆದರೆ ಅದರ ಸೀಮಿತ ನೆನಪಿನ ಶಕ್ತಿಯ ದೆಸೆಯಿಂದ ಬಹಳ ಬೇಗ ತಾನು ಆಹಾರ ಇಟ್ಟಿರುವುದನ್ನೇ ಮರೆತು ಬಿಡುತ್ತದೆ. 

“ಬಚ್ಚಿಟ್ಟಿದ್ದು ಪರರಿಗೆ’ ಎಂಬ ಹಳೆಯ ಚಿತ್ರಗೀತೆಯ ಸಾಲು ಅಳಿಲಿನ ವಿಷಯದಲ್ಲಿ ನಿಜವಾಗಿದೆ. ನಾವು ಮನುಷ್ಯರು ನೆನಪಿಡುವ ವಿಷಯದಲ್ಲಿ ಜಾಣರು ಎಂದು ಬೀಗುವಂತಿಲ್ಲ. ಏಕೆಂದರೆ ನಿಧಿ ಹೂತಿಟ್ಟಿರುವ ಜಾಗವನ್ನು ನೆನಪಿಡಲೇ ಅಲ್ಲವೆ ನಕಾಶೆ ಮಾಡುವುದು. ಪಾಪ ಅಳಿಲಿಗೂ ನಕಾಶೆ ಮಾಡುವುದು ಗೊತ್ತಿರುತ್ತಿದ್ದರೆ ತಾನು ಹೂತಿಟ್ಟ ಅಹಾರವನ್ನು ಮರೆಯುತ್ತಿರಲಿಲ್ಲ. ಆದರೆ ಸೃಷ್ಟಿ ಎಷ್ಟು ಸೋಜಿಗ ಎಂದರೆ ಅಳಿಲಿನ ಮರೆಗುಳಿತನದಿಂದ ಪ್ರಕೃತಿಗೇ ಹೆಚ್ಚಿನ ಲಾಭವಾಗಿದೆ. ಹೇಗೆ ಅಂತೀರಾ? ಇದನ್ನು ತಿಳಿಯುವುದಕ್ಕೆ ಮೊದಲು ಅಳಿಲಿನ ಆಹಾರ ಯಾವುದೆಂದು ನೀವು ತಿಳಿದುಕೊಳ್ಳಬೇಕು. ಅಳಿಲಿನ ಪ್ರಮುಖ ಆಹಾರ ಬೀಜಗಳು. ಈಗ ಹೊಳೆದಿರಬೇಕಲ್ಲ? ಅಳಿಲು ಭೂಮಿಯಡಿ ಹುಗಿದು ಮರೆತ ಬೀಜಗಳೇ ಬೆಳೆದು ಅಸಂಖ್ಯ ಮರಗಳಾಗಿವೆ. 

Advertisement

Udayavani is now on Telegram. Click here to join our channel and stay updated with the latest news.

Next