Advertisement

ಸಾಮಾಜಿಕ ಸೇವೆಯಲ್ಲಿ ಸಂತೃಪ್ತ ಭಾವನೆ ಕಂಡುಕೊಳ್ಳಿ’

11:32 PM Jun 28, 2019 | Team Udayavani |

ಉಡುಪಿ: ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯು ತನ್ನ ಸ್ಥಾಪನೆಯಾದ ದಿನದಿಂದಲೂ ಸಾಮಾಜಿಕ ಸೇವೆಯನ್ನೇ ಮುಡಿಪಾಗಿರಿಸಿ ಕೊಂಡು ಬಂದಿದೆ ಮತ್ತು ಸಮಾಜದ ಕುಂದು ಕೊರತೆಗಳನ್ನು ಗಮನಿಸಿ ತನ್ನ ಕಾರ್ಯಾಚರಣೆಯಲ್ಲಿ ತೊಡಗ ಲಾರಂಭಿಸುತ್ತದೆ ಎಂದು ರೊಟರಿ ಸೇವಾ ಸಂಸ್ಥೆಗಳ ನಿರ್ದೇಶಕ ಎಚ್.ಎಲ್. ರವಿ ಹೇಳಿದರು.

Advertisement

ಇಲ್ಲಿನ ದೇವಾಡಿಗರ ಭವನದಲ್ಲಿ ರೋಟರಿ ಕ್ಲಬ್‌ ಉಡುಪಿ ರಾಯಲ್ಸ್‌ ನ ನೂತನ ಅಧ್ಯಕ್ಷ ಯಶವಂತ ಬಿ.ಕೆ. ಅವರ ಪದಪ್ರದಾನ ಸಮಾರಂಭದಲ್ಲಿ ಪದ ಪ್ರಧಾನ ಅಧಿಕಾರಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ನೂತನ ಸಮಿತಿಯ ಅಧಿಕಾರ ಸ್ವೀಕರಿಸುತ್ತಲೆ ಡಾ| ಬಾಲಕೃಷ್ಣ ಮದ್ದೋಡಿ ಮತ್ತು ಅರಣ್ಯ ಇಲಾಖೆಯ ಸಹಕಾರದಲ್ಲಿ ಗಿಡಗಳನ್ನು ವಿತರಿಸಿ ವನಮಹೋತ್ಸವ ಆಚರಿಸುವುದರೊಂದಿಗೆ ಮುಂದಿನ ಸಾಲಿನ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು.

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಸಮಯದಲ್ಲಿ ಶಾಸಕ ಕೆ.ರಘುಪತಿ ಭಟ್ ಅವರ ಪ್ರಾಯೋಜಕತ್ವದ ಉಚಿತ ಕುಡಿಯುವ ನೀರಿನ ಸರಬರಾಜಿನಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ವಿತರಿಸಿದ ನಿತೇಶ್‌, ರಮೇಶ್‌ ನಾಯ್ಕ, ತಾರಾನಾಥ್‌ ಕುಂದರ್‌ ಅವರನ್ನು ಅಭಿನಂದಿಸಲಾಯಿತು.

Advertisement

ನಿರ್ಗಮನ ಅಧ್ಯಕ್ಷ ರತ್ನಾಕರ್‌ ಇಂದ್ರಾಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. 2020ರ ಸಾಲಿನ ಸಹಾಯಕ ಗವರ್ನರ್‌ ಡಾ| ಸೇಸಪ್ಪರೈ ಸಂಸ್ಥೆಯ ವಾರ್ಷಿಕ ವಾರ್ತಾಸಂಚಿಕೆಯನ್ನು ಬಿಡುಗಡೆ ಗೊಳಿಸಿದರು. ಖ್ಯಾತ ನೇತ್ರ ತಜ್ಞ ಡಾ| ಕೆ.ಕೃಷ್ಣಪ್ರಸಾದ್‌ ಅವರನ್ನು ಸಮ್ಮಾನಿಸಲಾಯಿತು.

ರೋಟರಿ ಪ್ರಮುಖರಾದ ದಿನೇಶ್‌ ಹೆಗ್ಡೆ ಆತ್ರಾಡಿ, ಡಾ| ಗಣೇಶ್‌ ಎ., ಡಾ| ಸುರೇಶ್‌ ಶೆಣೈ, ಚಂದ್ರ ನಾಯ್ಕ, ತೇಜೇಶ್ವರ್‌ ರಾವ್‌, ನಗರಸಭಾ ಸದಸ್ಯೆ ವಿಜಯಲಕ್ಷ್ಮೀ ಉಪಸ್ಥಿತರಿದ್ದರು.

ನಿಯೋಜಿತ ಕಾರ್ಯದರ್ಶಿ ಮಂಜುನಾಥ್‌ ಮಣಿಪಾಲ ವಂದಿಸಿದರು. ಆಲ್ವಿನ್‌ ಅಂದ್ರಾದೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next