Advertisement

ಪ್ರಾಚೀನ ಕಾಲದ 50 ಶವ ಪೆಟ್ಟಿಗೆಗಳು ಪತ್ತೆ

02:14 AM Jan 18, 2021 | Team Udayavani |

ಕೈರೋ:  ಜಗತ್ತಿನ ಇತಿಹಾಸಕ್ಕೆ ಹಲವು ಕೊಡುಗೆಗಳನ್ನು ನೀಡಿದ ಈಜಿಪ್ಟ್ನಲ್ಲಿ 16ನೇ ಶತಮಾನದಿಂದ ಕ್ರಿಸ್ತಪೂರ್ವ 11ನೇ ಶತಮಾನದ ಅವಧಿಗೆ ಸೇರಿದ 50 ಶವಪೆಟ್ಟಿಗಳನ್ನು ಪತ್ತೆ ಹಚ್ಚಲಾಗಿದೆ. ಕೈರೋದ ದಕ್ಷಿಣ ಭಾಗದ ಸಾಕ್ಕರ ಎಂಬಲ್ಲಿರುವ ಪ್ರಾಚ್ಯ ಉತ್ಖನನ ಕೇಂದ್ರದಲ್ಲಿ ಅವುಗಳು ಸಿಕ್ಕಿವೆ. ಜತೆಗೆ ಅಂತ್ಯಸಂಸ್ಕಾರ ನೆರವೇರಿಸುವ ಕೇಂದ್ರದ ಕುರುಹೂ ಪತ್ತೆಯಾಗಿದೆ.  ಅದು ಈಜಿಪ್ಟ್ನ ದೊರೆ ತೇತಿ ಎಂಬಾತನ ರಾಣಿ ನೆರ್ಟ್‌ ಎಂಬಾಕೆಯ ಅಂತಿಮ ಸಂಸ್ಕಾರ ನಡೆಸಿದ ಕೇಂದ್ರವಾಗಿದ್ದಿರಬಹುದು ಎಂದು ಇತಿಹಾಸ ಸಂಶೋಧಕರು ಪ್ರತಿಪಾದಿಸಿದ್ದಾರೆ.

Advertisement

ಅವುಗಳು ಸುಮಾರು 3 ಸಾವಿರ ವರ್ಷಗಳಷ್ಟು ಹಿಂದಿನದ್ದು ಎಂದು ಇತಿಹಾಸ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ ದೇಶದ ಇತಿಹಾಸವನ್ನೇ ಪುನಾರಚಿಸುವಂಥ ಹಲವು ಮಹತ್ವದ ಅಂಶಗಳು ತಿಳಿದುಬರುವ ಸಾಧ್ಯತೆ ಇದೆ. ಪತ್ತೆಯಾಗಿರುವ ಶವಪೆಟ್ಟಿಗೆಗಳು 40 ಅಡಿ ಉದ್ದವಿದೆ  ಎಂದು ಸಂಶೋಧಕ ಝಹಿ ಹವಾಸ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next