Advertisement

ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಅಗತ್ಯ

06:00 AM Jul 13, 2018 | |

ನವದೆಹಲಿ: ಆರ್ಥಿಕವಾಗಿ ಸದೃಢವಾಗಿರುವ ಮಹಿಳೆಯರು ಸಮಾಜದಲ್ಲಿನ ಪಿಡುಗುಗಳಿಗೆ ತಡೆಯಾಗಿ ನಿಲ್ಲುತ್ತಾರೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುರುವಾರ ನರೇಂದ್ರ ಮೋದಿ ಮೊಬೈಲ್‌ ಆ್ಯಪ್‌ ಮೂಲಕ ವಿವಿಧ ಸ್ವಸಹಾಯ ಸಂಘಗಳ ಒಂದು ಕೋಟಿಗೂ ಅಧಿಕ ಮಂದಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಮಹಿಳೆಯರ ಸಬಲೀಕರಣ ಆಗಬೇಕೆಂದರೆ, ಆರ್ಥಿಕ ಸ್ವಾತಂತ್ರ್ಯ ಅತ್ಯಗತ್ಯ. ಇತ್ತೀಚೆಗೆ ಮಹಿಳೆಯರು ಉದ್ಯಮಶೀಲರಾಗಿದ್ದಾರೆ. ಅವರಲ್ಲಿ ಅಂಥ ಸಾಧನೆ ಮಾಡಲು ಸಾಮರ್ಥ್ಯವಿದೆ. ಅವರಿಗೆ ನಾವು ಏನನ್ನೂ ಕಲಿಸಬೇಕಾಗಿಲ್ಲ, ಅವಕಾಶಗಳನ್ನು ಒದಗಿಸಿದರೆ ಸಾಕು ಎಂದು ಪ್ರಧಾನಿ ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಸರ್ವಾಂಗೀಣ ಅಭಿವೃದ್ಧಿ ಸಾಧಿಸಬೇಕಾದರೆ ಮಹಿಳೆಯರಿಗೆ ಹೆಚ್ಚಿನ ರೀತಿಯಲ್ಲಿ ಅವಕಾಶ ಸಿಗಬೇಕು ಎಂದಿದ್ದಾರೆ. ಮಹಿಳಾ ಸ್ವಸಹಾಯ ಸಂಘಗಳು ಗ್ರಾಮೀಣಾಭಿವೃದ್ಧಿಯಲ್ಲಿ ಹೆಚಿನ ಪಾತ್ರ ವಹಿಸುತ್ತಿವೆ ಎಂದು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

ಹಾಲಿ ಸರ್ಕಾರ 2014ರಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಸರ್ಕಾರ 20 ಲಕ್ಷ ಸ್ವಸಹಾಯ ಸಂಘಗಳನ್ನು ರಚನೆ ಮಾಡಿದೆ. ಸುಮಾರು 2.25 ಕೋಟಿ ಕುಟುಂಬಗಳನ್ನು ಈ ಸಂಘದ ವ್ಯಾಪ್ತಿಗೆ ತರಲಾಗಿದೆ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ. ಸಂವಾದದ ವೇಳೆ ಅನೇಕ ಮಹಿಳೆಯರು, ತಮ್ಮ ಬದುಕಿನ ಸುಧಾರಣೆಗೆ ಸ್ವಸಹಾಯ ಸಂಘಗಳು ಹೇಗೆ ಸಹಾಯ ಮಾಡಿದವು ಎಂಬುದನ್ನೂ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next