Advertisement
ಫೈನಾನ್ಷಿಯಲ್ ಪ್ಲ್ಯಾನಿಂಗ್‌ನ ಮೊದಲ ನಿಯಮ ಏನು ಗೊತ್ತಾ? ಪ್ರಿಪೇರ್, ಬಟ್ ಡೋಂಟ್ ಪ್ರಿಡಿಕ್ಟ್ ಸಿದ್ಧರಾಗಿ, ಭವಿಷ್ಯದ ಬಗ್ಗೆ ಊಹಿಸಬೇಡಿ. ಮೊದಲನೆಯದಾಗಿ, ನಿಮ್ಮ ಬಳಿ ಮನೆಯ ದೈನಂದಿನ ಖರ್ಚುಗಳಿಗೆ ಸಾಕಾಗುವಷ್ಟು ಹಣ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಒಂದು ಎಮರ್ಜೆನ್ಸಿ ಫಂಡ್ (ಕಂಟಿಂಜೆನ್ಸಿ ಕಾರ್ಪಸ್) ಅನ್ನು ಸಿದ್ಧಪಡಿಸಿ. ಕನಿಷ್ಠ ಮೂರು ತಿಂಗಳ ಮನೆಯ ಖರ್ಚುಗಳನ್ನು ನಿಭಾಯಿಸಲು ಬೇಕಾಗುವಷ್ಟು ಹಣವನ್ನು, ಎಮರ್ಜೆನ್ಸಿ ಪ್ಲ್ಯಾನ್ ಹೊಂದಿರಬೇಕು. ಇದು ಕಷ್ಟಕಾಲದಲ್ಲಿ ನೆರವಿಗೆ ಬಂದೇ ಬರುತ್ತದೆ. ಎಮರ್ಜೆನ್ಸಿ ಫಂಡ್ ಗಿಂತಲೂ ಮೊದಲ ಪ್ರಾಶಸ್ತ್ಯ ಇ.ಎಂ.ಐ. ಪಾವತಿಗಳಿಗೆ ಕೊಡಿ. ನಿಮ್ಮ ಇನ್ಶೂರೆನ್ಸ್ ಏಜೆಂಟರಿಗೆ ಕರೆ ಮಾಡಿ, ನೀವು ಮಾಡಿಸಿರುವ ಇನ್ಷೊರೆನ್ಸ್, ಕೊರೊನಾವನ್ನು ಕವರ್ ಮಾಡುತ್ತದೆಯೇಇಲ್ಲವೇ ಎಂಬುದನ್ನು ತಿಳಿದುಕೊಳ್ಳಿ. ಕೋವಿಡ್ ಸೋಂಕನ್ನು “ಪಾಂಡೆಮಿಕ್’ (ಜಾಗತಿಕ ಮಟ್ಟದಲ್ಲಿ ಹಬ್ಬಿರುವ ಕಾಯಿಲೆ) ಎಂದು ಘೋಷಣೆ ಮಾಡಿದ್ದಾರೆ. ನಿಮ್ಮ ವಿಮೆಯಲ್ಲಿ, ಪಾಂಡೆಮಿಕ್ ಕುರಿತಾದ ನಿಲುವು ಏನಿದೆ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಮನೆಯವರೊಂದಿಗೆ, ತುಂಬಾ ಹತ್ತಿರದ ನಂಬಿಕಸ್ಥರೊಂದಿಗೆ ನಿಮ್ಮ ಹೂಡಿಕೆಗಳು ಮತ್ತು ವ್ಯವಹಾರಗಳ ಕುರಿತು ಮಾಹಿತಿ ಹಂಚಿಕೊಳ್ಳಿ. ಹೀಗೆ ಮಾಡುವುದರಿಂದ, ಅಕಸ್ಮಾತ್ ನಾಳೆ ನೀವೇನಾದರೂ ಅನಾರೋಗ್ಯಪೀಡಿತರಾದರೆ, ಅವರು ನಿಮ್ಮ ವ್ಯವಹಾರಗಳನ್ನು ಮುಂದುವರಿಸಬಲ್ಲರು. ಮಾರ್ಕೆಟ್‌ನಲ್ಲಿ,
ಒಳ್ಳೆಯ ಟೈಮ್‌ಗಾಗಿ ಈಗ ಹುಡುಕಾಟ ನಡೆಸಬೇಡಿ. ಹೂಡಿಕೆದಾರರು ಸದಾ ತಮ್ಮಲ್ಲಿರುವ ಷೇರುಗಳನ್ನು ಮಾರಲು ಅಥವಾ ಬೇರೆ ಷೇರುಗಳನ್ನು ಕೊಳ್ಳಲು ಒಳ್ಳೆಯ ಟೈಮನ್ನು ಅರಸುತ್ತಿರುತ್ತಾರೆ. ಆದರೆ, ಮಾರುಕಟ್ಟೆಯ ಸ್ಥಿತಿ ಈಗ ನಿಶ್ಚಿತವಾಗಿ ಹೇಳಲು ಬಾರದಿರುವ ಹಂತದಲ್ಲಿದೆ. ಹಾಗಾಗಿ, ಯಾವುದೇ ರೀತಿಯ ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲ್ಯಾನ್ (ಎಸ್.ಐ.ಪಿ) ಮಾಡಲು ಮುಂದಾಗದಿರುವುದೇ ಒಳಿತು.