Advertisement
ಸಿಸಿಬಿ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಭರತ್ ನೀಡಿದ ದೂರಿನ ಮೇರೆಗೆ ಸರ್ಕಾರದ ನಕಲಿ ವಿಶೇಷ ಅಧಿಕಾರಿ ಆರ್.ಆರ್ .ನಗರದ ಬಿಇಎಂಎಲ್ ಲೇಔಟ್ ನಿವಾಸಿ ಉದಯ ಪ್ರಭು (34) ಎಂಬಾತನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ1.20 ಲಕ್ಷ ರೂ. ನಗದು,1 ಲ್ಯಾಪ್‌ಟಾಪ್ 4 ಐ-ಫೋನ್, ನಕಲಿ ಗುರುತಿನ ಚೀಟಿ, 1 ಇನೋವಾ ಕಾರು,1 ಜಾಗ್ವಾರ್‌ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Related Articles
Advertisement
ಸರ್ಕಾರದ ಫಲಕವಿರುವ ಕಾರು ಬಳಕೆ: ಜನರನ್ನು ವಂಚಿಸಲೆಂದೇ ಬಿಳಿ ಇನ್ನೋವಾ ಕಾರಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ “ಕರ್ನಾಟಕ ಸರ್ಕಾರ’ ಎಂದು ಫಲಕ ಮತ್ತು ಲಾಂಛನ ಹಾಕಿಕೊಂಡು ಓಡಾಡುತ್ತಿದ್ದ. ಅಧಿಕಾರಿಗಳನ್ನು ನಂಬಿಸಲು ತಾನು ಸರ್ಕಾರದ ವಿಶೇಷ ಅಧಧಿಕಾರಿ ಎಂಬ ನಕಲಿ ಗುರುತಿನ ಚೀಟಿ ತೋರಿಸಿ ವಂಚಿಸುತ್ತಿದ್ದ. ಸಿಸಿಬಿ ಪೊಲೀಸರು ಉದಯ್ ಪ್ರಭುನನ್ನು ವಶಕ್ಕೆ ಪಡೆದಿದ್ದರು.
ವಿಚಾರಣೆ ವೇಳೆ ಮಾಜಿ ಸಿಎಂ ಒಬ್ಬರ ತಂಗಿ ಮಗನ ಸ್ನೇಹಿತ ಎಂದು ಸುಳ್ಳು ಹೇಳಿ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಎಂದು ಹೇಳಲಾಗಿದೆ. ಆರೋಪಿ ಉದಯ್ ಪ್ರಭು ಸಿಸಿಬಿ ಇನ್ಸ್‌ಪೆಕ್ಟರ್‌ವೊಬ್ಬರನ್ನು ವರ್ಗಾವಣೆ ಮಾಡಿಸುವುದಾಗಿ ವಂಚಿಸಿದ್ದ ಎನ್ನಲಾಗಿದೆ.
ಬಲೆಗೆ ಬಿದ್ದದ್ದು ಹೇಗೆ?
ಆರೋಪಿ ಸಾರ್ವಜನಿಕರಿಗೆ ವಂಚಿಸುತ್ತಿರುವ ಬಗ್ಗೆ ತಿಳಿದಿದ್ದ ಸಿಸಿಬಿ ಇನ್ಸ್‌ಪೆಕ್ಟರ್, ತನ್ನ ನೇತೃತ್ವದ ತಂಡದೊಂದಿಗೆ ಡಿ.14ರಂದು ಉದಯ್ ಪ್ರಭು ಮನೆಗೆ ತೆರಳಿ ಪರಿಶೀಲಿಸಿದ್ದರು. ಆ ವೇಳೆ ತನ್ನ ಇನ್ನೋವಾ ಕಾರಿನಲ್ಲಿಕರ್ನಾಟಕ ಸರ್ಕಾರ ಎಂದುಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಬರೆದಿರುವುದುಕಂಡು ಬಂದಿತ್ತು.
ಈ ಬಗ್ಗೆ ವಿಚಾರಿಸಿದಾಗ ಇದು ತನ್ನ ಸ್ವಂತ ವಾಹನವಾಗಿದ್ದು, ಪತ್ನಿ ಹೆಸರಿನಲ್ಲಿ ಇರುವುದಾಗಿ ಹೇಳಿದ್ದ. ಆತನ ಬಳಿಯಿದ್ದ ನಕಲಿ ಗುರುತಿನ ಚೀಟಿಯನ್ನು ತೋರಿಸಿ, ತಾನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ವಿಶೇಷ ಅಧಿಕಾರಿ ಎಂದು ಹೇಳಿದ್ದ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರುಕೇಳಿದಾಗ ಸರಿಯಾಗಿ ಉತ್ತರಿಸಿಲ್ಲ. ಅದಕ್ಕೆ ಆತನನ್ನು ವಶಕ್ಕೆ ಪಡೆಯಲಾಗಿತ್ತು.