Advertisement
ಎಚ್‌ಎಸ್‌ಆರ್ ಲೇಔಟ್ ನಿವಾಸಿ ನರೇಶ್ (36), ವಿಜಯ್ ಆನಂದ್ (37), ನಿವೇದಿತಾ (37), ಹರ್ಷಿಣಿ (29) ಬಂಧಿತರು. ಆರೋಪಿಗಳು ಇತ್ತೀಚೆಗೆ ಹೈದರಾಬಾದ್ ಮೂಲದ ಉದ್ಯಮಿ ಪಿ.ಕೃಷ್ಣಂ ರಾಜು ಎಂಬವರಿಗೆ 100 ಕೋಟಿ ರೂ. ಸಾಲ ನೀಡುವುದಾಗಿ ನಂಬಿಸಿ ಮುಂಗಡವಾಗಿ ಮೂರು ತಿಂಗಳ ಬಡ್ಡಿ 1.80 ಕೋಟಿ ರೂ. ಪಡೆದು, ಸಾಲ ಕೊಡಿಸದೆ ವಂಚಿಸಿ ದ್ದಾರೆ. ಈ ಸಂಬಂಧ ಉದ್ಯ ಮಿಯ ಅಳಿಯ ಮಂಥೆನಾ ತರುಣ್ ಗಾಂಧಿ ಎಂಬವರು ನೀಡಿದ ದೂರಿನ ಮೇರೆಗೆ ನಾಲ್ವರು ಆರೋಪಿ ಗಳನ್ನು ಬಂಧಿಸಲಾಗಿದೆ.
Related Articles
Advertisement
ಇದನ್ನೂ ಓದಿ:- ರಾಷ್ಟ್ರ ಕೂಟ ಉತ್ಸವ-ಸರ್ಕಾರದೊಂದಿಗೆ ಚರ್ಚೆ
ಆಗ ಆರೋಪಿ ಕಾತಿರ್ ವೇಲನ್ ಸಾಲ ಬೇಕಾದರೆ ಮೂರು ತಿಂಗಳ ಬಡ್ಡಿ 1.80 ಕೋಟಿ ರೂ. ಅನ್ನು ಮುಂಗಡವಾಗಿ ಪಾವತಿ ಸಬೇಕು ಎಂದು ಬೇಡಿಕೆ ಇಟ್ಟಿದ್ದಾನೆ. ಅದನ್ನು ನಂಬಿದ ಕೃಷ್ಣಂ ರಾಜು, ಆತ ಸೂಚಿಸಿದ ಖಾತೆಗಳಿಗೆ 1.80 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ. ನಂತರ ಡಿ.8ರಂದು ಕಾತಿರ್ ವೇಲನ್‌ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಬಂದಿದೆ. ಬಳಿಕ ಕಂಪನಿ ಕಚೇರಿ ಬಳಿ ತೆರಳಿ ವಿಚಾರಿಸಿದಾಗ ಕಚೇರಿಯಲ್ಲಿದ್ದವರು ಅಸಡ್ಡೆಯಾಗಿ ವರ್ತಿಸಿದ್ದಾರೆ. ಈ ಹಿನ್ನೆಲೆ ಯಲ್ಲಿ ವಂಚನೆ ದೂರು ದಾಖಲಿಸಿದ್ದರು. ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಸಾಲಗಾರರ ಹುಡುಕಾಟ
ಆರೋಪಿಗಳ ಪೈಕಿ ನಿವೇದಿತಾ ಮತ್ತು ಹರ್ಷಿಣಿ , ವಿಜಯ್ ಬ್ಯಾಂಕ್‌ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿ ವಿಫಲಗೊಂಡವರು ಹಾಗೂ ಉದ್ಯಮಕ್ಕಾಗಿ ಕೋಟ್ಯಂತರ ರೂ. ಸಾಲಕ್ಕಾಗಿ ಹುಡುಕಾಟ ನಡೆಸುತ್ತಿರುವ ವ್ಯಕ್ತಿಗಳ ಬಗ್ಗೆ ಮಧ್ಯವರ್ತಿಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿದ್ದರು. ನಂತರ ಅವರನ್ನು ಸಂಪರ್ಕಿಸಿ ಸಾಲದ ಬಗ್ಗೆ ಚರ್ಚಿಸಿ ವಂಚಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
1.50 ಕೋಟಿ ರೂ.ಗೆ ಚಿನ್ನ ಖರೀದಿ !
ಉದ್ಯಮಿ ಪಿ.ಕೃಷ್ಣ ರಾಜು ಅವರಿಂದ ಪಡೆದಿದ್ದ 1.80 ಕೋಟಿ ರೂ. ಪೈಕಿ 30 ಲಕ್ಷ ರೂ.ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ್ದರು. ಬಾಕಿ 1.50 ಕೋಟಿ ರೂ.ಗೆ ಚಿನ್ನಾಭರಣ ಖರೀದಿಸಿದ್ದರು. ಆ ಚಿನ್ನಾಭರಣ ಸದ್ಯ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಕಾರ್ತಿ ವೇಲನ್ ಬಳಿ ಇದೆ ಎಂಬ ಮಾಹಿತಿ ಸಿಕ್ಕಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ವಂಚನೆಗೊಳಗಾದವರು ಠಾಣೆಗೆ ದೂರು ನೀಡಿ
ಆರೋಪಿಗಳಿಂದ ವಂಚನೆಗೊಳಗಾದ ಸಾರ್ವಜನಿಕರು ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಬಹುದು. ದೂರಿನ ಪ್ರತಿ ಜತೆಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ