Advertisement

ಮೊಟ್ಟೆ ವಿತರಿಸುವ ಯೋಜನೆಗೆ ತಲೆದೋರಿದ ಆರ್ಥಿಕ ಸಂಕಷ್ಟ!

03:52 PM Dec 24, 2020 | Suhan S |

ಸಿಂಧನೂರು: ಭಾರಿ ಉತ್ಸಾಹದೊಂದಿಗೆ ಆರಂಭವಾದ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಿಸುವ ಯೋಜನೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಬೆಲೆ ಏರಿಕೆಯ ಭಾರ ನಿಭಾಯಿಸಲು ಗ್ರಾಪಂಗಳ ತೆರಿಗೆಗೆ ಕೈ ಹಾಕಲಾಗಿದೆ.

Advertisement

ರಾಜ್ಯದಲ್ಲಿ ಒಂದು ಮೊಟ್ಟೆಯ ಬೆಲೆ 5 ರೂ.ಗಿಂತ ಹೆಚ್ಚಾದರೆ ನಯಾಪೈಸೆ ನೀಡುವುದಿಲ್ಲವೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೇಳಿತ್ತು. ಆದರೂ, ಅಂಗನವಾಡಿ ಫೆಡರೇಶನ್‌ ಹಾಗೂ ನಾನಾ ಸಂಘ, ಸಂಸ್ಥೆಗಳ ಹೋರಾಟ ಹೆಚ್ಚಾದ ಬಳಿಕ ಸಮಸ್ಯೆ ಸೃಷ್ಟಿಯಾಗಿತ್ತು. ಪ್ರತಿ ಮೊಟ್ಟೆಗೆ 7 ರೂ. ಪಾವತಿಸಬೇಕೆಂದು ಇಲಾಖೆ ಬೇಡಿಕೆಯಿಟ್ಟರೂ ಕಡತವನ್ನು ರಾಜ್ಯ ಸರಕಾರತಿರಸ್ಕರಿಸಿತ್ತು. ಪಟ್ಟು ಬಿಡದಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಒಂದುಮೊಟ್ಟೆಯ ಬೆಲೆಯನ್ನು 6.30 ರೂ.ಗೆ ಹೆಚ್ಚಿಸುವಂತೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಅದಿನ್ನು ಇತ್ಯರ್ಥವಾಗಿಲ್ಲ.

ಏನಿದು ಯೋಜನೆ?: ರಾಜ್ಯದಲ್ಲಿ ಹಿಂದುಳಿದ ಜಿಲ್ಲೆಗಳಲ್ಲಿ ಮಕ್ಕಳ ಅಪೌಷ್ಟಿಕತೆ ನಿವಾರಣೆ ದೃಷ್ಟಿಯಿಂದ ಮೊಟ್ಟೆ ವಿತರಣೆ ಯೋಜನೆ ಜಾರಿಗೊಳಿಸಲಾಗಿದೆ.ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವಮಕ್ಕಳಿಗೆ ವಾರದಲ್ಲಿ ಮೂರು ದಿನ ಮೊಟ್ಟೆ ವಿತರಿಸಬೇಕು. ಹಿಂದುಳಿದ ರಾಜ್ಯದ 5 ಜಿಲ್ಲೆಗಳಲ್ಲಿ ಮಕ್ಕಳಿಗೆ ವಾರದ 3 ದಿನ ಮೊಟ್ಟೆ ನೀಡಬೇಕು. ಇನ್ನು ಅಂಗನವಾಡಿ ಕೇಂದ್ರಗಳಿಗೆ ಬರುವ 1ರಿಂದ 6 ವರ್ಷದೊಳಗಿನ ಎಲ್ಲ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ಕೊಡಬೇಕು. ಮಾತೃಪೂರ್ಣ ಯೋಜನೆಯಡಿ ತಾಯಂದಿರಿಗೆವಾರದಲ್ಲಿ ಆರು ದಿನವೂ ಮೊಟ್ಟೆಯನ್ನುವಿತರಿಸಬೇಕು ಎನ್ನುವುದು ಸರಕಾರದ ನಿರ್ಧಾರ. ಸದ್ಯ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಈ ಯೋಜನೆಗೆ ಇದೀಗ ಹಣಕಾಸಿನ ಸಮಸ್ಯೆ ಎದುರಾಗಿದೆ.

ಸ್ಥಳೀಯ ತೆರಿಗೆ ಮೇಲೆ ಕಣ್ಣು: ರಾಜ್ಯ ಸರಕಾರವೇ ಜಾರಿಗೊಳಿಸಿರುವ ಯೋಜನೆಯಾದರೂ ಅದಕ್ಕೆ ತಗುಲುವ ವೆಚ್ಚವನ್ನು ಪಾವತಿಸುವುದು ಹೊರೆಯಾಗಿ ಪರಿಣಮಿಸಿದೆ. ಒಂದು ಮೊಟ್ಟೆಗೆ ಸರಕಾರ 5 ರೂ.ನಂತೆ ಹಣ ಬಿಡುಗಡೆ ಮಾಡುತ್ತಿದೆ. ಈ ಮೊತ್ತ ಸಾಕಾಗುವುದಿಲ್ಲ ಎಂದುಆಯಾ ಜಿಲ್ಲೆ ಮಹಿಳಾ ಮತ್ತು ಮಕ್ಕಳ ಇಲಾಖೆ ನಿರ್ದೇಶಕರು ಸರಕಾರಕ್ಕೆ ಪತ್ರ ಬರೆದಿದ್ದಾರೆ. ಒಂದು ಮೊಟ್ಟೆಗೆ ಮಾರುಕಟ್ಟೆಯ ದರ ಆಧರಿಸಿ 7 ರೂ.ಪಾವತಿಸುವಂತೆ ಬೇಡಿಕೆಯಿಟ್ಟಿದ್ದಾರೆ. ಹೆಚ್ಚುವರಿ ಹಣ ನೀಡಲು ಒಪ್ಪದ ಸರಕಾರ, ಗ್ರಾಮ ಪಂಚಾಯಿತಿಗಳಿಗೆ ಲಭ್ಯವಿರುವ ತೆರಿಗೆ ಹಣದಲ್ಲಿ ಹೆಚ್ಚುವರಿ ಮೊತ್ತ ಭರಿಸಿಕೊಳ್ಳಲು ತಿಳಿಸಲಾಗಿದೆ. ರಾಮನಗರ ಜಿಲ್ಲಾ ಪಂಚಾಯಿತಿ ಮಾದರಿಯನ್ನುರಾಜ್ಯಕ್ಕೆ ಅನ್ವಯಿಸುವಂತೆ ಹೇಳಿದ ಬೆನ್ನಲ್ಲೇ ಎಲ್ಲ ಕಡೆಯೂ ಅಪಸ್ವರ ಎದ್ದಿವೆ.

ಗ್ರಾಪಂಗಳಲ್ಲಿ ಹಣವೇ ಇಲ್ಲ :

Advertisement

ಪಂಚಾಯಿತಿಗಳಲ್ಲಿ ವಸೂಲಿಯಾಗುವತೆರಿಗೆಯಲ್ಲಿ ಶೇ.24 ರಷ್ಟು ಮೊತ್ತ ಸರಕಾರಕ್ಕೆಸಲ್ಲಿಕೆಯಾಗುತ್ತದೆ. ಶೇ.25ರಷ್ಟನ್ನು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆ ಮೀಸಲಿಡಲಾಗಿದೆ. ಶೇ.40 ರಷ್ಟು ಪಂಚಾಯಿತಿಸಿಬ್ಬಂದಿ ಸಂಬಳಕ್ಕೆ ಖರ್ಚಾಗುತ್ತದೆ. ಉಳಿದ ಶೇ.11 ರಷ್ಟು ಮೊತ್ತವನ್ನು ಸ್ಟೇಷನರಿ, ಶಿಷ್ಟಾಚಾರ ಪಾಲನೆ, ಕಚೇರಿ ನಿರ್ವಹಣೆ, ಮಹಾತ್ಮರ ಜಯಂತಿ, ರಸ್ತೆ, ಚರಂಡಿ ನಿರ್ವಹಣೆಗೆ ಮೀಸಲಿಡಲಾಗುತ್ತದೆ. ಅಲ್ಲಿಗೆ ಶೇ.100ರಷ್ಟುಮೊತ್ತ ಖರ್ಚಾಗುವುದರಿಂದ ಮೊಟ್ಟೆಗೆ ಎಲ್ಲಿಂದ ಹಣ ತರಬೇಕು ಎಂಬ ಪ್ರಶ್ನೆ ಗ್ರಾ.ಪಂ.ಗಳದ್ದು.

ಮೊದಲು ಸಲ್ಲಿಸಿದ ಬೇಡಿಕೆ ತಿರಸ್ಕರಿಸಲಾಗಿತ್ತು. ಇಲಾಖೆ ಮುಖ್ಯ ಕಾರ್ಯದರ್ಶಿಗಳುಮತ್ತೆ ಮಾತನಾಡಿದ್ದು, ಒಂದು ಮೊಟ್ಟೆಗೆ 6,50 ರೂ. ಕೊಡುವಂತೆ ಹಣಕಾಸು ಇಲಾಖೆಗೆಬೇಡಿಕೆ ಸಲ್ಲಿಸಲಾಗಿದೆ. ಅಲ್ಲಿವರೆಗೂ ರಾಮನಗರ ಮಾದರಿಯಲ್ಲಿ ಎಲ್ಲ ಕಡೆ ಗ್ರಾಪಂಗಳಿಂದ ಹಣ ಜೋಡಿಸಿಕೊಳ್ಳಲು ಹೇಳಲಾಗಿದೆ.-ಪೆದ್ದಪ್ಪಯ್ಯ, ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಂಗಳೂರು

ರಾಮನಗರ ಜಿಪಂ ಸಿಇಒ ಈ ಕುರಿತು ನಿರ್ಧಾರ ಕೈಗೊಂಡಿದ್ದಾರೆಹೆಚ್ಚುವರಿಯಾದ ಮೊಟ್ಟೆ ಬೆಲೆ ಪಾವತಿಸಲುಆಯಾ ಜಿಲ್ಲೆಯ ಗ್ರಾಪಂಗಳೇ ಸ್ವಂತಸಂಪನ್ಮೂಲದಿಂದ ಹಣ ನೀಡುವಂತೆ ಸೂಚನೆ ನೀಡಲಾಗಿದೆ. –ಡಾ.ಎನ್‌.ನಾಗಲಾಂಬಿಕಾ ದೇವಿ,ಅಪರ ಮುಖ್ಯ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಂಗಳೂರು

 

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next