Advertisement

ಆರ್ಥಿಕ ಸಂಕಷ್ಟ: ಮೀನುಗಾರ ಯುವಕ ಬೋಟಿನಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣು

09:24 PM Jun 10, 2020 | Sriram |

ಮಲ್ಪೆ: ಅರ್ಥಿಕ ಸಂಕಷ್ಟಕ್ಕೆ ಒಳಗಾದ ಮೀನುಗಾರ ಯುವಕ ಭಾಗ್ಯರಾಜ್‌ (27) ಎಂಬವರು ಮಲ್ಪೆ ಬಾಪುತೋಟದ ಬಳಿಯ ಬಂದರಿನಲ್ಲಿ ನಿಲ್ಲಿಸಲಾಗಿದ್ದ ಬೋಟಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ.

Advertisement

ಈತ ಬಡಾನಿಡಿಯೂರು ಗ್ರಾಮದ ಪಾವಂಜಿಗುಡ್ಡೆಯ ಸುರೇಶ್‌ ಸುವರ್ಣ ಎಂಬವರ ಪುತ್ರ, ಭಾಗ್ಯರಾಜ್‌ ಅವರು ಬಂದರಿನಲ್ಲಿ ಬೋಟಿನಿಂದ ಮೀನು ಇಳಿಸುವ (ಕನ್ನಿ ಪಾರ್ಟಿ) ಕಾಯಕವನ್ನು ಮಾಡುತ್ತಿದ್ದರು. ಮಂಗಳವಾರ ರಾತ್ರಿ 10.30ರ ವೇಳೆ ಸ್ನೇಹಿತನ ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ದ ಆತ ವಾಪಸು ಬಂದಿರಲಿಲ್ಲ.

ಬಾಪುತೋಟದ ದಕ್ಕೆಯಲ್ಲಿ ನಿಲ್ಲಿಸಲಾಗಿದ್ದ ಚಾಲನೆ ಇಲ್ಲದ ಹಳೆಯ ಬೋಟಿನಲ್ಲಿ, ಬೋಟಿನ ಕ್ಯಾಬಿನಿನ ಮೇಲ್ಭಾಗಕ್ಕೆ ಹಗ್ಗ ಕಟ್ಟಿ ಸ್ಟೋರೇಜ್‌ಗೆ ಇಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ಬೋಟು ಮೀನುಗಾರಿಕೆಗೆ ತೆರಳದಿರುವುದರಿಂದ ಮತ್ತಷ್ಟು ಆರ್ಥಿಕ ಸಂಕಷ್ಟ ಉಂಟಾಗಿತ್ತೆನ್ನಲಾಗಿದೆ. ಅವರು ತಂದೆ, ತಾಯಿ ಮತ್ತು ತಮ್ಮನನ್ನು ಆಗಲಿದ್ದಾರೆ.

ಕಬಡ್ಡಿ ಆಟಗಾರ, ತರಬೇತುದಾರ
ಭಾಗ್ಯರಾಜ್‌ ಶಾಲಾ ಕಾಲೇಜು ದಿನಗಳಲ್ಲಿ ಅತ್ಯುತ್ತಮ ಕಬಡ್ಡಿ ಆಟಗಾರ. ಮಂಗಳೂರು ವಿಶ್ವ ವಿದ್ಯಾನಿಲಯವನ್ನು ಪ್ರತಿನಿಧಿಸಿದ್ದರು. ರಾಜ್ಯಮಟ್ಟದ ಪಂದ್ಯಾಟದಲ್ಲಿ ಚಾಂಪಿಯನ್‌ ಶಿಪ್‌ ಪಡೆದುಕೊಂಡಿದ್ದರು. ತೆಂಕನಿಡಿಯೂರು ನ್ಪೋರ್ಟ್ಸ್ ಕ್ಲಬ್‌ನ ಪ್ರಮುಖ ಆಟಗಾರನಾಗಿ ಹಲವಾರು ಟ್ರೋಫಿಗಳನ್ನು ಗೆದ್ದುಕೊಂಡಿದ್ದರು. ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜಿನ ಕಬಡ್ಡಿ ಆಟಗಾರರಿಗೆ ಮತ್ತು ಇತರರಿಗೆ ಉಚಿತವಾಗಿ ತರಬೇತಿಗಳನ್ನು ನೀಡುತ್ತಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next