Advertisement

ಹಣಕಾಸು ಡೆಡ್‌ಲೈನ್‌ಗಳು ಸಮೀಪಿಸುತ್ತಿವೆ!

01:12 AM Jan 20, 2021 | Team Udayavani |

2020-21ರ ಹಣಕಾಸು ವರ್ಷದ ಕೊನೆಯ ತ್ತೈಮಾಸಿಕದಲ್ಲಿದ್ದೇವೆ. ಹಣಕಾಸು ವರ್ಷ  ಪೂರ್ಣಗೊಳ್ಳಲು ಇನ್ನು ಎರಡೂವರೆ ತಿಂಗಳುಗಳಷ್ಟೇ ಉಳಿದಿದೆ. ಈ ಅವಧಿಯಲ್ಲಿ ನಾವು ಪೂರೈಸಲೇಬೇಕಾದ ಕೆಲವೊಂದು ಹಣಕಾಸು ಡೆಡ್‌  ಲೈನ್‌ಗಳು ಇಲ್ಲಿವೆ.

Advertisement

ಜ. 31: ತೆರಿಗೆ ವ್ಯಾಜ್ಯ ಬಗೆಹರಿಸಿ ಕೊಳ್ಳಿ: ಆದಾಯ ತೆರಿಗೆ ವಿವಾದಗಳು, ಬಾಕಿ ಇರುವ ಆದಾಯ ತೆರಿಗೆ ಕೇಸುಗಳನ್ನು ಇತ್ಯರ್ಥ ಪಡಿಸಿಕೊಳ್ಳಲು “ವಿವಾದ್‌ ಸೇ ವಿಶ್ವಾಸ್‌’ ಯೋಜನೆ ಜಾರಿಯಲ್ಲಿದೆ. ಇದರ ಡಿಕ್ಲರೇಷನ್‌ ಸಲ್ಲಿಸಲು ಜ. 31 ಕಡೆಯ ದಿನ. ಬಾಕಿಯಿಟ್ಟುಕೊಂಡವರು ಮಾಸಾಂತ್ಯದ ಮೊದಲು ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಬಹುದು.

ಫೆ. 15: ನಿರ್ದಿಷ್ಟ ಐಟಿಆರ್‌: ಆಡಿಟ್‌ ಅಗತ್ಯವಿರುವ ಖಾತೆದಾರರರು ಆದಾಯ ತೆರಿಗೆ ರಿಟನ್ಸ್‌ (ಐಟಿಆರ್‌) ದಾಖಲಿಸಲು ಫೆ. 15 ಕಡೆಯ ದಿನಾಂಕವಾಗಿದೆ. ಈ ಹಿಂದೆ ಜನವರಿ 31 ಕಡೆಯ ದಿನ ಎಂದು ಸರಕಾರ ಘೋಷಿಸಿತ್ತು. ಡಿಸೆಂಬರ್‌ ತಿಂಗಳಿನಲ್ಲಿಯೂ ಇದರ ದಿನಾಂಕವನ್ನು ಜನವರಿ ಅಂತ್ಯಕ್ಕೆ ವಿಸ್ತರಿಸಲಾಗಿತ್ತು. ಇದೀಗ ಫೆ. 15ರ ದಿನಾಂಕವನ್ನು ವಿಸ್ತರಿಸಬೇಕು ಎಂಬ ಬೇಡಿಕೆಯನ್ನು ಹಣಕಾಸು ಸಚಿವಾಲಯ ತಿರಸ್ಕರಿಸಿದೆ.

ಫೆ. 28: ಜೀವಿತ ಪ್ರಮಾಣ ಪತ್ರ: ಪಿಂಚಣಿ ಪಡೆಯುವ ಹಿರಿಯ ನಾಗರಿಕರು ಫೆ. 28ರೊಳಗೆ “ಜೀವಿತ ಪ್ರಮಾಣ ಪತ್ರ’ ಸಲ್ಲಿಸಬೇಕು. ಸಲ್ಲಿಕೆಯ ಅವಧಿಯನ್ನು 2020ರ ನವೆಂಬರ್‌ 30ರಿಂದ 2021ರ ಫೆ.28ಕ್ಕೆ ಸರಕಾರ ವಿಸ್ತರಿಸಿತ್ತು. ಪಿಂಚಣಿ ಪಡೆಯಲು ಇದು ಅತ್ಯಗತ್ಯವಾಗಿದೆ. ಈ ಪ್ರಕ್ರಿಯೆಯ ಮೇಲ್ವಿಚಾರಣೆ ಹೊಣೆ ಕೇಂದ್ರ ಕಾರ್ಮಿಕ ಇಲಾಖೆಯದ್ದಾಗಿದೆ.

ಮಾ. 31: ಪ್ಯಾನ್‌-ಆಧಾರ್‌ ಲಿಂಕ್‌: 2019ರಿಂದಲೂ ಇದರ ದಿನಾಂಕಗಳನ್ನು ಮುಂದೂಡಲಾಗುತ್ತಾ ಬರಲಾಗಿತ್ತು. ಇದೀಗ ಹಲವು ಬಾರಿ ವಿಸ್ತರಣೆಯಾಗಿ ಪ್ಯಾನ್‌-ಆಧಾರ್‌ ಜೋಡಣೆಯ ಗಡುವನ್ನು ಮಾ.31ಕ್ಕೆ ಸರಕಾರ ವಿಸ್ತರಿಸಿದೆ. ಈಗ ಬ್ಯಾಂಕ್‌ನ ಎಲ್ಲ ಕೆಲಸ ಕಾರ್ಯಗಳಿಗೆ ಪ್ಯಾನ್‌ ಕಾರ್ಡ್‌ ಕಡ್ಡಾಯವಾಗಿದ್ದು, ತೆರಿಗೆ ಪಾವತಿಗಳಿಗೂ ತುಂಬಾ ಅತ್ಯಗತ್ಯವಾಗಿದೆ.

Advertisement

ಮಾ.31: ಎಲ್‌ಟಿಸಿ ಕ್ಯಾಶ್‌ ವೋಚರ್‌: ಲೀವ್‌ ಟ್ರಾವೆಲ್‌ ಕನ್ಸೇಷನ್‌ ಅಥವಾ ಎಲ್‌ಟಿಸಿ ಕ್ಯಾಶ್‌ ವೋಚರ್‌ ಸ್ಕೀಮ್‌ನಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಮಾ.31 ಕಡೆಯ ದಿನಾಂಕ. ಎಲ್‌ಟಿಸಿ ಎಂದರೆ ಕೇಂದ್ರ ಸರಕಾರಿ ನೌಕರರಿಗೆ ದೇಶದ ವಿವಿಧ ಭಾಗಗಳಿಗೆ ಮತ್ತು ಮನೆಗೆ ಪ್ರಯಾಣಿಸಲು ನೀಡಲಾಗುವ ಸೌಲಭ್ಯವಾಗಿದೆ.

ಸಂಬಳದಲ್ಲಿ ಕಡಿತ! :

ಹೊಸ ವೇತನ ನಿಯಮದ ಅನುಸಾರ ವೇತನವನ್ನು ಉದ್ಯೋಗದಾತರು ಮರು ಹೊಂದಾಣಿಕೆ ಮಾಡಬೇಕಾಗಿದೆ. ಹೊಸ ವೇತನ ಸಂಹಿತೆಯ ಭಾಗವಾಗಿ ಕಳೆದ ವರ್ಷ ಸಂಸತ್‌ನಲ್ಲಿ ಪರಿಹಾರ ನಿಯಮವನ್ನು ಮಂಡಿಸಿ ಅಂಗೀಕಾರ ಪಡೆದುಕೊಳ್ಳಲಾಗಿದ್ದು, ಎಪ್ರಿಲ್‌ನಿಂದ ಅನುಷ್ಠಾನಕ್ಕೆ ಬರಲಿದೆ. ಅದರ ಪ್ರಕಾರ ಒಟ್ಟಾರೆ ವೇತನದಲ್ಲಿ ಭತ್ತೆಯು ಶೇ. 50 ದಾಟುವಂತಿಲ್ಲ. ಹೀಗಾಗಿ ವೇತನ ಸ್ವರೂಪದಲ್ಲಿ ಇಳಿಕೆಯಾಗಬಹುದು. ಆದರೆ ಮೂಲ ವೇತನದಲ್ಲಿ ಹೆಚ್ಚಳ ಆಗಬಹುದು ಮತ್ತು ಪಿಎಫ್ ಕೊಡುಗೆ ಏರಿಕೆಯಾಗಿ ಟೇಕ್‌ ಹೋಮ್‌ ಸಂಬಳದಲ್ಲಿ ಇಳಿಕೆ ಆಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next