Advertisement

ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು

12:01 PM Oct 23, 2017 | |

ತಾಳಿಕೋಟೆ: ಬಡವರ, ದೀನ ದಲಿತರ, ಅಲ್ಪಸಂಖ್ಯಾತರ ಮತ್ತು ನೊಂದವರ ಕಣ್ಣೀರು ಒರಿಸುವ ಕಾರ್ಯವನ್ನು ಶಾಸಕ ಎ.ಎಸ್‌. ಪಾಟೀಲ ಮಾಡುತ್ತಿದ್ದಾರೆ ಎಂದು ಜಿಪಂ ಸದಸ್ಯ ಬಸನಗೌಡ ವಣಕ್ಯಾಳ ಹೇಳಿದರು. ರವಿವಾರ ಪಟ್ಟಣದ ಸಗರಪೇಟ ಬಡಾವಣೆಯಲ್ಲಿ ಎ.ಎಸ್‌. ಪಾಟೀಲ ನಡಹಳ್ಳಿ ಗೆಳೆಯರ ವತಿಯಿಂದ ದೀಪಾ ಧಡೇದ ಎಂಬ ಬಡ ಮಹಿಳೆ ಶಸ್ತ್ರ ಚಿಕಿತ್ಸೆಗೆ 20 ಸಾವಿರ ರೂ. ನೀಡಿ ಮಾತನಾಡಿದ ಅವರು, ದಡೇಡ ಕುಟುಂಬದ ಮಹಿಳೆಗೆ ಶಸ್ತ್ರ ಚಿಕಿತ್ಸೆ ಜೊತೆಗೆ ವೈದ್ಯಕೀಯ ಸೌಲಭ್ಯ ಉಚಿತವಾಗಿ ಒದಗಿಸಿದ್ದಾರೆ ಎಂದರು.

Advertisement

ಜಿಲ್ಲೆಯ ವಿವಿಧಡೆ ಸಾಮೂಹಿಕ ವಿವಾಹ ಮೂಲಕ ಸಾವಿರಾರು ಮಹಿಳೆಯರಿಗೆ ಕಂಕಣಭಾಗ್ಯ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು ಮತ್ತು ಬೂದಿಹಾಳ-ಫಿರಾಪುರ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ನಡಹಳ್ಳಿ ಅವರು ಹೋರಾಟಗಳನ್ನು ಮಾಡಿ ಯಶಸ್ಸು ಕಂಡಿದ್ದಾರೆಂದರು. ಸತೀಶ ಸರಶೆಟ್ಟಿ ಮಾತನಾಡಿ, ಮಹಿಳೆ ದೀಪಾ ಧಡೇದ ಅವರು ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿ. ಮುಂದಿನ ದಿನಗಳಲ್ಲಿ ತಮ್ಮ ಕುಟುಂಬವನ್ನು ಈ ಮಹಿಳೆ ಸಮರ್ಥವಾಗಿ ನಿಭಾಯಿಸಿ ಸಮಾಜದ ಕೀರ್ತಿ ಹೆಚ್ಚಿಸಲಿ ಎಂದು ಹಾರೈಸಿದರು.

ವಾಸುದೇವ ಹೆಬಸೂರ, ಅರುಣ ದಢೇದ, ರಾಮನಗೌಡ ಬಾಗೇವಾಡಿ, ಅಮರಣ್ಣ ಗೋನಾಳ, ವಿರೇಶ ಬಾಗೇವಾಡಿ, ಅಶೋಕ ಚಿನಗುಡಿ, ಬಸವರಾಜ ಹೊಟ್ಟಿ, ಮಲ್ಲು ಭಟ್ಟ, ಬಾಬು ಕಾರಜೋಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next