ಗುಬ್ಬಿ: ತೋಟಗಾರಿಕೆ ಇಲಾಖೆಯಿಂದ 2019 -20ನೇ ಸಾಲಿಗೆ ಜಿಲ್ಲೆಯಲ್ಲಿ ಅನುಷ್ಠಾನ ಗೊಳ್ಳು ತ್ತಿರುವ ವಿವಿಧ ಯೋಜನೆಗಳಡಿಯಲ್ಲಿ ಸಹಾ ಯಧನ ಸೌಲಭ್ಯವನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಸಹಾಯಕ ನಿರ್ದೇ ಶಕ ರಾಜಪ್ಪ ತಿಳಿಸಿದರು. ಆಸಕ್ತ ರೈತರು ಸಂಬಂಧಿಸಿದ ತಾಲೂಕು ತೋಟಗಾರಿಕೆ ಕಚೇರಿ, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ ಏ.25-ಮೇ 25ರವೆರಗೆ ಅರ್ಜಿ ಸಲ್ಲಿಸಿ ಯೋಜ ನೆಗಳ ಸದ್ಬಳಕೆ ಮಾಡಿಕೊಳ್ಳಲು ತಿಳಿಸಲಾಗಿದೆ.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ: ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಆಳವಡಿಸಿ ಕೊಳ್ಳಲು ಗರಿಷ್ಠ 5 ಹೆಕ್ಟೇರ್‌ವರೆಗೆ ಸಹಾಯಧನ ನೀಡಲಾಗುವುದು.
ರಾಷ್ಟ್ರೀಯ ತೋಟಗಾರಿಕ ಮಿಷನ್: ತೋಟ ಗಾರಿಕಾ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ , ರೋಗ ಮತ್ತು ಕೀಟ ನಿಯಂತ್ರಣ, ನೀರು ಸಂಗ್ರಹಣಾ ಘಟಕ, ಪ್ಯಾಕ್ ಹೌಸ್ , ಜೇನುಕೃಷಿ, ಸಂರಕ್ಷಿತ ಬೇಸಾಯ ಹಾಗೂ ಸಂಸ್ಕರಣ ಘಟಕ, ಶೈತ್ಯಾಗಾರ ಮತ್ತು ಹಣ್ಣು ಮಾಗಿಸುವ ಘಟಕಗಳಿಗೆ ಸಹಾಯಧನ ನೀಡಲಾಗುವುದು.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ: ತೋಟ ಗಾರಿಕೆ ಬೆಳೆಗಳನ್ನ ಕೊಯ್ಲತ್ತರ ನಿರ್ವಹಣೆಗಾಗಿ ಪ್ಯಾಕ್‌ಹೌಸ್ ನಿರ್ಮಾಣ ಹಾಗೂ ಯಂತ್ರೋಪ ಕರಣ ಖರೀಧಿಸಲು ಸಹಾಯಧನ ನೀಡ ಲಾಗುವುದು.
ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ: ಗುಚ್ಚ ಮಾದರಿಯಲ್ಲಿ ಹೊಸ ತಂತ್ರಜ್ನಾನ ಅಳವಡಿಸಿಕೊಂಡು ಪ್ರದೇಶ ವಿಸ್ತರಣೆ, ನೀರು ಸಂಗ್ರಹಣ ಘಟಕ, ಪ್ಯಾಕ್‌ಹೌಸ್ ನಿರ್ಮಾಣಕ್ಕೆ ಸಹಾಯಧನ ನೀಡುವುದು.
ಕೃಷಿಭಾಗ್ಯ ಯೋಜನೆ: ಸಂರಕ್ಷಿತ ಬೇಸಾಯದಡಿ ಪಾಲಿಹೌಸ್, ನೆರಳು ಪರದೆ, ಘಟಕ ಹಾಗೂ ಕೃಷಿ ಹೊಂಡ ಚಟುವಟಿಕೆಗಳಿಗೆ ಸಹಾಯಧನ ನೀಡಲಾಗುವುದು.
ಗ್ರಾಮೀಣ ಉದ್ಯೋಗ ಖಾತರಿ: ತೆಂಗು, ಮಾವು, ಸಪೋಟ, ಬಾಳೆ, ಕಾಳು ಮೆಣಸು, ನುಗ್ಗೆ, ಪಪ್ಪಾಯಿ, ಗೇರು ಬೆಳೆ, ಹಾಗೂ ವಿವಿಧ ತೋಟಗಾರಿಕ ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮಗಳನ್ನು ತೆಂಗು ಹಾಗೂ ಮಾವು ಪುನಶ್ಚೇತನ, ಕೊಳವೆ ಬಾವಿ ಮರು ಪೂರಣ, ಮಣ್ಣು ಮತ್ತು ನೀರು ಸಂರಕ್ಷಣೆ ಕಾಮಗಾರಿ ಗಳನ್ನು ರೈತರ ಜಮೀನಿನಲ್ಲಿ ಅನುಷ್ಠಾನ ಗೊಳಿಸುವುದು.
ಇನ್ನು ಉಳಿದಂತೆ ತೋಟಗಾರಿಕ ಬೆಳೆಗಳಿಗೆ ಮಳೆಯಾಶ್ರಿತ ಖುಷ್ಕಿ ಕೈಷಿಗೆ ನೀರು ಸರಬ ರಾಜಿಗೆ ಟ್ಯಾಂಕರ್ ಖರೀದಿಗೆ ಸಹಾಯಧನ, ಖಾಸಗಿ ಮಧುವನ ಸ್ಥಾಪನೆಗೆ ಆಸಕ್ತ ರೈತರಿಗೆ ಸಹಾಯಧನವನ್ನು ನೀಡಲಾಗುವುದು ಎಂದು ತಾಲೂಕು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಪ್ಪ ತಿಳಿಸಿದರು.