ಟಿ.ದಾಸರಹಳ್ಳಿ: ಕೋವಿಡ್ ಸಂತ್ರಸ್ತಕುಟುಂಬಗಳ ತುರ್ತು ಅಗತ್ಯಗಳಿಗೆಆರ್ಥಿಕ ನೆರವು ನೀಡಲಾಗುತ್ತಿದೆ ಎಂದುಕರ್ನಾಟಕ ರಾಜ್ಯ ಸರ್ಕಾರಿ ಕುಂಬಾರನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಆರ್. ಶ್ರೀನಿವಾಸ್ ಹೇಳಿದರು.ಕ್ಷೇತ್ರದ ಬಾಗಲಗುಂಟೆಯ ಸಂತ್ರಸ್ತಕುಟುಂಬದ ಸದಸ್ಯರಿಗೆ ಸಹಾಯಧನದ ಚೆಕ್ ವಿತರಿಸಿ ಮಾತನಾಡಿದರು.
ಕೊರೊನಾ ಸೋಂಕಿಗೆ ಬಲಿಯಾಗಿರುವಆರ್ಥಿಕ ಸಂಕಷ್ಟದಲ್ಲಿರುವ ಕುಂಬಾರಸಮಾಜದ 150 ಕುಟುಂಬಗಳಿಗೆ 5ಸಾವಿರ ರೂ.ಗಳನ್ನು ನೀಡಲಾಗುತ್ತಿದೆ.ಇನ್ನೂ 100 ಕುಟುಂಬಗಳಿಗೆ ಆರ್ಥಿಕಸಹಾಯ ವಿಸ್ತರಿಸಲಾಗುವುದು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿಬಾಬು ಎಸ್.ಕುಂಬಾರ್ ಮಾತನಾಡಿ,ಸಂಘವು ತನ್ನ ಆರ್ಥಿಕ ಇತಿಮಿತಿಯಲ್ಲಿಸಮುದಾಯಕ್ಕೆ ನಿರಂತರವಾಗಿ ನೆರವುನೀಡುತ್ತಿದೆ. ಸಮಾಜಮುಖೀ ಕಾರ್ಯಗಳಲ್ಲೂ ಮುಂಚೂಣಿಯಲ್ಲಿದೆ. ಸದ್ಯ ಸೋಂಕಿನಿಂದ ಕುಟುಂಬ ಸದಸ್ಯರನ್ನುಕಳೆದುಕೊಂಡವರ ನೆರವಿಗೆ ಧಾವಿಸಿದೆ.
ಸಮುದಾಯದ ದಾನಿಗಳ ನೆರವು ಹಾಗೂಸದಸ್ಯರ ಸಹಕಾರದಿಂದ ಈ ಕಾರ್ಯಮಾಡಲಾಗುತ್ತಿದೆ. ಸಹಾಯಧನ ವಿತರಣೆಬೆಂಗಳೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ನಡೆಯಲಿದೆ. ಸಾಧ್ಯವಿರುವೆಡೆಸಂತ್ರಸ್ತ ಕುಟುಂಬ ಸದಸ್ಯರಿಗೆ ನೇರವಾಗಿಚೆಕ್ ಹಸ್ತಾಂತರಿಸಲಾಗುವುದು ದೂರದಲ್ಲಿರುವವರ ಬ್ಯಾಂಕ್ ಖಾತೆಗೆ ಜಮೆಮಾಡಲಾಗುವುದು ಎಂದು ತಿಳಿಸಿದರು.
ಸಮಾಜಮುಖೀ ಹಾಗೂ ಸೇವಾ ಚಟುವಟಿಕೆಗಳಿಗೆ ಸಂಘದ ಪದಾಧಿ ಕಾರಿಗಳಾದಪಂಕಜ, ಚಿಕ್ಕವೀರಯ್ಯ, ಸಂಗಮೇಶ್,ರೇಣುಕಾ ಪ್ರಸಾದ್, ಭೀಮಪ್ಪಗುರುರಾಜ್ ಹಾಗೂ ಮಂಜುನಾಥ್‌ಕೈಜೋಡಿಸಿದ್ದಾರೆ ಎಂದು ಶ್ಲಾಘಿಸಿದರು.