Advertisement

ಕೋವಿಡ್ ಬಿಕ್ಕಟ್ಟು : ಮತ್ತೊಂದು ಸುತ್ತಿನ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ ವಿತ್ತ ಸಚಿವೆ

04:04 PM Jun 28, 2021 | Team Udayavani |

ನವ ದೆಹಲಿ :  ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು(ಸೋಮವಾರ, ಜೂನ್ 28)  ಕೋವಿಡ್ ಬಿಕ್ಕಟ್ಟಿನಿಂದ ಪರಿಣಾಮ ಉಂಟಾದ ವಿವಿಧ ವಲಯಗಳಿಗೆ 8 ಅಂಶಗಳ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

Advertisement

ಒಟ್ಟು, 1.1 ಲಕ್ಷ ಕೋಟಿ ರೂ.ಗಳ ಸಾಲ ಖಾತರಿ ಯೋಜನೆಯನ್ನು ವಿತ್ತ ಸಚಿವ ನಿರ್ಮಲಾ ಸೀತಾರಾಮನ್, ಆರೋಗ್ಯ ಕ್ಷೇತ್ರಕ್ಕೆ ಹಂಚಿಕೆಯಾಗಿರುವ 50,000 ಕೋಟಿ ರೂ. ಮತ್ತು ಇತರ ಕ್ಷೇತ್ರಗಳಿಗೆ 60,000 ಕೋಟಿ ರೂ.ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ : ಆಮ್ ಆದ್ಮಿ ಪಕ್ಷಕ್ಕೆ ಉದ್ಯಮಿ ಮಹೇಶ್ ಸಾವನಿ ಸೇರ್ಪಡೆ ಬೆಳವಣಿಗೆಯ ಸಂಕೇತ : ಮನೀಶ್ ಸಿಸೋಡಿಯಾ

ಇದಲ್ಲದೆ, ಎಮೆರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್ಜಿಎಸ್) ಅಡಿಯಲ್ಲಿ ಸೀತಾರಾಮನ್ ಹೆಚ್ಚುವರಿಯಾಗಿ 1.5 ಲಕ್ಷ ಕೋಟಿ ರೂಪಾಯಿ ಅಗತ್ಯಗಳಿಗೆ ಅನುಗುಣವಾಗಿ ವಲಯವಾರು ವಿವರಗಳನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಈ ಕ್ರೆಡಿಟ್ ಗ್ಯಾರಂಟಿ ಯೋಜನೆಯು ಎಂಎಫ್‌ಐಗಳ ಅಥವಾ ಮೈಕ್ರೋ ಫೈನಾನ್ಸ್ ಮೂಲಕ 1.25 ಲಕ್ಷದಿಂದ 25 ಲಕ್ಷ ಮಂದಿಗೆ ಸಾಲವನ್ನು ಒದಗಿಸಲಾಗುತ್ತದೆ.

Advertisement

ಪ್ರವಾಸೋದ್ಯಮದ ಪುನರುತ್ಥಾನಕ್ಕೆ 11,000ಕ್ಕೂ ಹೆಚ್ಚಿನ ನೋಂದಾಯಿತ ಪ್ರವಾಸಿ ಗೈಡ್ ​ಗಳು/ಟ್ರಾವೆಲ್ ಮತ್ತು ಇತರ ಪ್ರವಾಸೋದ್ಯಮ ವಲಯದಲ್ಲಿ ತೊಡಗಿಕೊಂಡವರಿಗೆ ಒದಗಿಸಲಾಗುತ್ತದೆ. ಇನ್ನು, 5 ಲಕ್ಷ ಮಂದಿಗೆ ಉಚಿತ ವೀಸಾ ನೀಡುವ ಯೋಜನೆ ಇದಾಗಿದೆ ಎಂದು ಅವರು ಹೇಳಿದ್ದಾರೆ.

ಇನ್ನು,  ಆತ್ಮನಿರ್ಭರ್ ಭಾರತ್ ರೊಜ್ಗರ್ ಯೋಜನೆಯನ್ನು 2021 ರ ಜೂನ್ 30 ರಿಂದ ಮಾರ್ಚ್ 22, 2022 ರವರೆಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ : ಯಾವುದೇ ಕಾರಣಕ್ಕೂ ಎಸ್ಎಸ್ಎಲ್ ಸಿ ಪರೀಕ್ಷೆ ಮಾಡಬಾರದು: ವಾಟಾಳ್ ನಾಗರಾಜ್

Advertisement

Udayavani is now on Telegram. Click here to join our channel and stay updated with the latest news.

Next