Advertisement

ರಫೇಲ್‌ ಕುರಿತು ಕಾಂಗ್ರೆಸ್‌ ಅಸತ್ಯದ ಸವಾರಿ: ಜೇಟ್ಲಿ 

10:28 AM Aug 30, 2018 | Team Udayavani |

ಹೊಸದಿಲ್ಲಿ: ರಫೇಲ್‌ ಡೀಲ್‌ ಕುರಿತು ಕಾಂಗ್ರೆಸ್‌ ಹಾಗೂ ಅದರ ನಾಯಕ ರಾಹುಲ್‌ ಗಾಂಧಿ ಅಸತ್ಯದ ಸವಾರಿ ಹಾಗೂ ಸುಳ್ಳಿನ ಅಭಿಯಾನ ನಡೆಸುತ್ತಿದ್ದಾರೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಆರೋಪಿಸಿದ್ದಾರೆ.

Advertisement

ಈ ಒಪ್ಪಂದ ರಕ್ಷಣಾ ಕ್ಷೇತ್ರದ ಅತಿದೊಡ್ಡ ಹಗರಣ ಎಂಬ ಆರೋಪಕ್ಕೆ ತಿರುಗೇಟು ನೀಡಿರುವ ಜೇಟ್ಲಿ, ರಾಹುಲ್‌ ಗಾಂಧಿಯವರಿಗೆ 15 ಪ್ರಶ್ನೆಗಳನ್ನು ಕೇಳಿದ್ದಾರೆ.

ಯುಪಿಎ ಅವಧಿಯಲ್ಲಿ ವಿಮಾನ ಖರೀದಿಗೆ ಆರ್ಡರ್‌ ನೀಡುವಲ್ಲಿ ದಶಕದಷ್ಟು ವಿಳಂಬವಾಗಿದ್ದು, ಕಾಂಗ್ರೆಸ್‌ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿತ್ತು. ಜತೆಗೆ ಈಗ ದರ ಹಾಗೂ ಕಾರ್ಯವಿಧಾನದ ಕುರಿತು ಸುಳ್ಳು ಅಭಿಯಾನ ನಡೆಸುವ ಮೂಲಕ ರಕ್ಷಣಾ ಖರೀದಿಯನ್ನು ಕಾಂಗ್ರೆಸ್‌ ಇನ್ನಷ್ಟು ವಿಳಂಬಗೊಳಿಸುತ್ತಿದೆ ಎಂದು ಜೇಟಿÉ ಆರೋಪಿಸಿದ್ದಾರೆ. ರಫೇಲ್‌ ವಿಮಾನದ ಪೂರೈಕೆಗೆ ಸಂಬಂಧಿಸಿದ ಯಾವುದೇ ಖಾಸಗಿ ಉದ್ಯಮದೊಂದಿಗೆ ಭಾರತ ಸರಕಾರ ಒಪ್ಪಂದ ಹೊಂದಿಲ್ಲ ಎಂಬುದನ್ನು ಕಾಂಗ್ರೆಸ್‌ ನಿರಾಕರಿಸುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. 
ರಾಹುಲ್‌ ಗಾಂಧಿ ಯುಪಿಎ ಅವಧಿಯಲ್ಲಿನ ಪ್ರತಿ ವಿಮಾನದ ಖರೀದಿಗೆ ಯೋಜಿಸಿದ್ದ ಬೆಲೆಯನ್ನು ಆಗಾಗ್ಗೆ ಬದಲಿಸುತ್ತಿದ್ದಾರೆ. ದಿಲ್ಲಿ ಹಾಗೂ ಕರ್ನಾ ಟಕದಲ್ಲಿ ಎಪ್ರಿಲ್‌, ಮೇ ತಿಂಗಳಲ್ಲಿ 700 ಕೋಟಿ ರೂ. ಅಂದಿದ್ದರು. ಸಂಸತ್ತಿನಲ್ಲಿ ಈ ಬೆಲೆಯನ್ನು 520 ಕೋಟಿಗೆ ಇಳಿಸಿದರು. ರಾಯು³ರದಲ್ಲಿ ಇದನ್ನು 540 ಕೋಟಿಗೆ ಏರಿಸಿದರು. ಸತ್ಯ ಯಾವಾಗಲೂ ಒಂದೇ ಆಗಿರುತ್ತದೆ, ಸುಳ್ಳಿಗೆ ಅನೇಕ ರೂಪಾಂತರ ಗಳಿರುತ್ತವೆ ಎಂದು ಜೇಟಿÉ ಕಾಂಗ್ರೆಸ್‌ ಅಧ್ಯಕ್ಷರನ್ನು ವ್ಯಂಗ್ಯವಾಡಿದ್ದಾರೆ.

ಜೇಟ್ಲಿ ಆರೋಪಕ್ಕೆ ಕಾಂಗ್ರೆಸ್‌ನ ಆನಂದ್‌ ಶರ್ಮಾ ಪ್ರತ್ಯುತ್ತರ ನೀಡಿದ್ದು, ಹಣಕಾಸು ಸಚಿವರಿಗೆ ರಕ್ಷಣಾ ಖರೀದಿ ನೀತಿಯ ನಿಯಮಾವಳಿಗಳ ಅರಿವೇ ಇಲ್ಲ. ಆಫ್ಸೆಟ್‌ ಪೂರೈಕೆಗೆ ಪಾಲುದಾರರನ್ನು ಆಯ್ಕೆಗೊಳಿ ಸುವಲ್ಲಿ ಸರಕಾರದ 
ಪಾತ್ರವಿಲ್ಲ  ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next