ಬೆಂಗಳೂರು: ಕಾರ್ಯನಿರ್ವಹಣೆ, ಅನುದಾನ ಹಂಚಿಕೆಗೆ ಸಂಬಂಧಿಸಿ ದಂತೆ ರಾಜ್ಯ ನಾಲ್ಕನೇ ಹಣಕಾಸು ಆಯೋಗವು ಬುಧವಾರ ಮೇಯರ್ ಸೇರಿದಂತೆ ಬಿಬಿಎಂಪಿ ಅಧಿಕಾರಿ ಗಳೊಂದಿಗೆ ಸಭೆ ನಡೆಸಿತು.
ಆಯೋಗದ ಅಧ್ಯಕ್ಷ ಸಿ.ಜಿ. ಚಿನ್ನಸ್ವಾಮಿ ನೇತೃತ್ವದಲ್ಲಿ ನಡೆದ ಸಭೆ ಯಲ್ಲಿ ಪಾಲಿಕೆ ಮೂಲಸೌಕರ್ಯ, ಆಸ್ತಿ ತೆರಿಗೆ ಸಂಗ್ರಹಣೆ, ಜಾಹೀರಾತು ತೆರಿಗೆ, ಮಾರುಕಟ್ಟೆಗಳ ಬಾಡಿಗೆ ಹೆಚ್ಚಳ, ಘನತ್ಯಾಜ್ಯ ನಿರ್ವಹಣೆ, ರಸ್ತೆ ಅಭಿವೃದ್ಧಿ, ಬೀದಿ ದೀಪ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು.
ಸಭೆಯ ನಂತರ ಮಾತನಾಡಿದ ಚಿನ್ನಸ್ವಾಮಿ, ಪ್ರತಿವರ್ಷ ಪಾಲಿಕೆ ಯಿಂದ ಆಗುವ ಖರ್ಚು-ವೆಚ್ಚ ಮತ್ತು ಆದಾಯದ ಮೂಲಗಳ ಕುರಿತು ಪ್ರಶ್ನಾವಳಿಯನ್ನು ಸಿದ್ಧಪಡಿಸಿ ಕೂಡಲೇ ಉತ್ತರಿಸಬೇಕು. ಅನುದಾ ನದ ಹಂಚಿಕೆ ಬಗ್ಗೆ ಶಿಫಾರಸುಗಳನ್ನು ಸಿದ್ಧಪಡಿಸಿ ರಾಜ್ಯಪಾಲರಿಗೆ ಹಾಗೂ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.
ವಿಶೇಷ ಸಭೆ ಕರೆದು ನಿರ್ಣಯ: ಮೇಯರ್ ಜಿ. ಪದ್ಮಾವತಿ ಮಾತ ನಾಡಿ, ನಾಲ್ಕನೇ ರಾಜ್ಯ ಹಣಕಾಸು ಅಧ್ಯಕ್ಷರು ಹಲವು ಸಲಹೆಗಳನ್ನು ಕೊಟ್ಟಿದ್ದಾರೆ. ನಗರದ ನಾಗರಿಕರಿಗೆ ನೀಡಲಾಗುವ ಮೂಲಸೌಕರ್ಯ ಮತ್ತು ಸಂಪನ್ಮೂಲ ಕ್ರೋಡೀಕರಣ ಕುರಿತು ಪಾಲಿಕೆಯಿಂದ ಟಿಪ್ಪಿಣಿ ಸಿದ್ಧ ಪಡಿಸಿ, ಪಾಲಿಕೆಯ ವಿಶೇಷ ಸಭೆ ಯಲ್ಲಿ ಚರ್ಚಿಸಿ, ನಿರ್ಣಯದೊಂದಿಗೆ ಆಯೋಗಕ್ಕೆ ಶಿಫಾರಸಿಗಾಗಿ ಕಳುಹಿ ಸಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಆಯೋಗದ ಅಧ್ಯ ಕ್ಷರು, “ಈಗಾಗಲೇ 30 ಜಿಲ್ಲೆಗಳ ಪ್ರವಾಸ ಮಾಡಿ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ Basic & performance grants ನಿಯೋಜನೆ ಬಗ್ಗೆ ಮಾಹಿತಿ ಪಡೆಯಲಾಗಿದೆ. ಬಿಬಿಎಂಪಿ ವ್ಯಾಪ್ತಿ, ಪ್ರದೇಶ, ಜನಸಂಖ್ಯೆ, ವಾಹನ ದಟ್ಟಣೆ, ಕುಡಿಯುವ ನೀರು, ಪರಿಸರ ಹಲವಾರು ಅಂಶಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಆಯೋ ಗದಿಂದ ಶಿಫಾರಸು ಮಾಡಲು ಸಮಾಲೋಚನಾ ಸಭೆ ಕರೆಯಲಾಗಿದೆ.
ಯಾವ ಸಂಸ್ಥೆ ಬಹಳ ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ. ಅಂತಹ ಸಂಸ್ಥೆಗಳಿಗೆ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ,” ಎಂದು ಅಭಿಪ್ರಾಯಪಟ್ಟರು. ಉಪ ಮೇಯರ್ ಎಂ. ಆನಂದ, ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ಆಡಳಿತ ಪಕ್ಷದ ನಾಯಕ ಮಹಮದ್ ರಿಜ್ವಾನ್ ನವಾಬ್, ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಜೆಡಿಎಸ್ ನಾಯಕಿ ಆರ್. ರಮಿಳಾ ಉಮಾಶಂಕರ್, ಆಯುಕ್ತ ಎನ್. ಮಂಜುನಾಥ ಪ್ರಸಾದ್ ಇದ್ದರು.