Advertisement
ಅಡೆತಡೆಗಳಿತ್ತುವಿವಿಧ ಇಲಾಖೆಗಳ ಅನುದಾನ ದಿಂದ ಸುಸಜ್ಜಿತ ಈಜುಕೊಳ ನಿರ್ಮಾಣ ವಾಯಿತಾದರೂ ಬಳಿಕ ಹಲವು ಸಮಸ್ಯೆ ಎದುರಿಸುವಂತಾಯಿತು. ಮೊದಲಾಗಿ ಕೊಳಕ್ಕೆ ನೀರು ಪೂರೈಸುವುದೇ ದೊಡ್ಡ ಸಮಸ್ಯೆಯಾಗಿ ಕಂಡು ಬಂದಿತು. ಬೋರ್‌ವೆಲ್ ಕೊರೆಯಲು ನೀರಿನ ಮೂಲವಿಲ್ಲ ಎಂದು ತಜ್ಞರು ತಿಳಿಸಿದರು. ಆ ಬಳಿಕ ಸಮೀಪದ ರಾಮಸಮುದ್ರ ಜಲಮೂಲ ದಿಂದ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡಲಾಯಿತಾದರೂ ಬೇಸಗೆಯಲ್ಲಿ ಕುಡಿಯುವ ನೀರಿನ ಬವಣೆ ತಲೆದೋರಿದ ಹಿನ್ನೆಲೆಯಲ್ಲಿ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು.
ಪುರಸಭಾ ವ್ಯಾಪ್ತಿಯಲ್ಲಿನ 10.38 ಎಕ್ರೆ ವಿಸ್ತೀರ್ಣದ ತಾಲೂಕು ಕ್ರೀಡಾಂಗಣದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಈಜುಕೊಳವು 54 ಅಡಿ ಅಗಲ, 82 ಅಡಿ ಉದ್ದ
ದೊಂದಿಗೆ 3-5 ಅಡಿ ಆಳ ಹೊಂದಿದೆ. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅನುದಾನದಲ್ಲಿ ನಿರ್ಮಾಣ ಗೊಂಡ ಈ ಈಜುಕೊಳದ ಕಾಮಗಾರಿ ಹೊಣೆ ನಿರ್ಮಿತಿ ಕೇಂದ್ರ ವಹಿಸಿತ್ತು. ಈಜುಕೊಳಕ್ಕೆ 5 ಲಕ್ಷ ಅನುದಾನ
ಸಾರ್ವಜನಿಕ ಈಜುಕೊಳ ಅಭಿವೃದ್ಧಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 45 ಲಕ್ಷ ರೂ., ಮಲೆನಾಡು ಅಭಿವೃದ್ಧಿ ಮಂಡಳಿಯಿಂದ ಒಟ್ಟು 91.65 ಲಕ್ಷ ರೂ., ವಿಧಾನ ಪರಿಷತ್ (ಭಾನುಪ್ರಕಾಶ್) ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 5 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿತ್ತು.
Related Articles
ಕಾರ್ಕಳ ಜನತೆಯ ಬಹುದಿನಗಳ ಬೇಡಿಕೆಯೊಂದು ಈಡೇರುತ್ತಿದೆ. ಈಜುಕೊಳದ ನೀರಿನ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ 6.5 ಲಕ್ಷ ರೂ. ವೆಚ್ಚದಲ್ಲಿ ಓಝೋನ್ ಐಸ್ ಸ್ಥಾಪನೆಯಾಗಲಿದೆ.
-ಪ್ರವೀಣ್ ಕೆ. ಕೋಟ್ಯಾನ್ , ಕ್ರೀಡಾಂಗಣ ಸಮಿತಿ ಸದಸ್ಯರು
Advertisement
15 ದಿನ ಉಚಿತಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಕಾರ್ಕಳದ ಜನತೆಗೆ ಉಡುಗೊರೆಯಾಗಿ 15 ದಿನಗಳ ಕಾಲ ಉಚಿತ ಪ್ರವೇಶವಿದೆ. ಈಜು ಆಸಕ್ತರು ನೈಲಾನ್ ಬಟ್ಟೆ ಧರಿಸುವುದು ಕಡ್ಡಾಯವೆಂದು ಕ್ರೀಡಾಂಗಣ ಸಮಿತಿಯವರು ತಿಳಿಸಿದ್ದಾರೆ. ಸಮಯ
ಬೆಳಗ್ಗೆ 6ರಿಂದ 11 ಹಾಗೂ ಸಂಜೆ 3ರಿಂದ 7. ಬೇಬಿ ಪೂಲ್ ಸೇರ್ಪಡೆ
ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಹೊಸದಾಗಿ ಬೇಬಿ ಪೂಲ್ ನಿರ್ಮಿಸಲಾಗಿದೆ. ಮಕ್ಕಳಿಗೆ ಅನುಕೂಲಕರವಾಗಿ 2 ಅಡಿ ಆಳದಲ್ಲಿ 12 ಅಡಿ ಅಗಲ ಹಾಗೂ 20 ಅಡಿ ಉದ್ದದಲ್ಲಿ ರಚನೆ ಮಾಡಲಾಗಿದೆ. ದರ
ಸ್ವಿಮ್ಮಿಂಗ್ ಫೂಲ್ ಪ್ರವೇಶ ಶುಲ್ಕ 25 ರೂ. ನಿಗದಿಗೊಳಿಸಲಾಗಿದೆ. ತಿಂಗಳ ಸದಸ್ಯತ್ವಕ್ಕೆ 600 ರೂ., ವರ್ಷದ ಸದಸ್ಯತ್ವಕ್ಕೆ 6, 000 ರೂ. ಎಂದು ಫಲಕ ಅಳವಡಿಸಲಾಗಿದೆ.