ಕಲಾದಗಿ: ರವಿವಾರ ಮೊಸಳೆ ದಾಳಿಗೊಳಗಾದ ಯುವಕ ಸಿದ್ರಾಮಪ್ಪ ಪೂಜಾರಿ (18) ಶವ ಬರೋಬ್ಬರಿ 30 ಗಂಟೆ ಕಾರ್ಯಾಚರಣೆ ಬಳಿಕ ಕೊನೆಗೂ ಸೋಮವಾರ ಸಂಜೆ 5.30 ಸುಮಾರಿಗೆ ನದಿಯಲ್ಲಿ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಸೋಮವಾರ ಬೆಳಿಗ್ಗೆ ಬಾಗಲಕೋಟೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಶೋಧ ಕಾರ್ಯಾಚರಣೆಗೆ ಅವಶ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಂಡು ಕ್ಷಣ ಕ್ಷಣವೂ ಮಾಹಿತಿ ನೀಡಲು ಸೂಚನೆ ನೀಡಿದರು.
ನಂತರ ಶೋಧ ಕಾರ್ಯಾಚರಣೆ ತೀವ್ರಗೊಂಡಿತು. ಬಾಗಲಕೋಟೆ ಉಪವಿಭಾಗಾಧಿಕಾರಿ ಎಚ್. ಜಯಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ಸ್ಥಳಕ್ಕೆ ಡಿಸಿ ಆಗಮಿಸುತ್ತಿದ್ದಂತೆ ಸಿದ್ರಾಮಪ್ಪನ ತಂದೆ ಛಭ್ಯಪ್ಪ ಪೂಜಾರಿ ಕಣ್ಣೀರಾದರು. ಬಿಕ್ಕಿ ಬಿಕ್ಕಿ ಅತ್ತರು. ನೋವು ತೋಡಿಕೊಂಡರು. ಮಗನ ಶವ ಹುಡಿಕಿಸಿಕೊಡುವಂತೆ ಗೋಗರೆದರು. ಜಿಲ್ಲಾಧಿಕಾರಿಗಳು ಛಭ್ಯಪ್ಪನನ್ನು ತಬ್ಬಿಕೊಂಡು ಸಾಂತ್ವನ ಹೇಳಿ ಸಮಾಧಾನ ಪಡಿಸಿದರು.
ಬಾಗಲಕೋಟೆ ತಹಶೀಲ್ದಾರ್ ಮೋಹನ ಬಿ.ನಾಗಠಾಣ, ಅರಣ್ಯ ಇಲಾಖಾ ಅಧಿಕಾರಿ ಎ.ಎಸ್.ನೇಗಿನಾಳ, ಪಿ.ಎಸ್.ಕೇಡಗಿ, ಅಗ್ನಿಶಾಮಕ ದಳದ ಅಧಿಕಾರಿಕಾರಿಗಳು, ಪೊಲೀಸ್ ಇಲಾಖಾ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟು ಕಾರ್ಯಾಚರಣೆ ಕೈಗೊಂಡರು. 5ಕಿಲೋ ಮೀಟರ್ ದೂರದ ವಸ್ತುಗಳೂ ಸ್ಪಷ್ಟವಾಗಿ ಕಾಣಿಸಿಬಲ್ಲ ನ್ಯೂ ಟೆಕ್ನಾಲಾಜಿಯ ಟೆಲಿಸ್ಕೋಪ್, ನೀರಿನಲ್ಲಿ ಕ್ಯಾಮರಾ ಬಿಟ್ಟು, ಮೀನುಗಾರರ ಸಹಾಯದಿಂದ ತೆಪ್ಪದಲ್ಲಿ ಸಂಚರಿಸಿ, ಬೋಟ್ ಮೂಲಕ ಪಾತಾಳ ಗರಡಿ ಬಿಟ್ಟು, ತೆಪ್ಪದಲ್ಲಿ ಗಾಣ, ಮುಳ್ಳು ಕಂಟಿಗೆ ಗಾಣ ಸಿಕ್ಕಿಸಿ ನದಿ ಆಳದಲ್ಲಿ ಎಳೆದಾಡಿಸಿ ಪತ್ತೆ ಕಾರ್ಯ ಮಾಡಲಾಯಿತು.
ಅಗ್ನಿಶಾಮಕ ಅಧಿಕಾರಿ ವಿರುದ್ಧ ಆಕ್ರೋಶ ಘಟಪ್ರಭಾ ನದಿಯಲ್ಲಿ ಮೊಸಳೆ ದಾಳಿಗೆ ಯುವಕ ಬಲಿಯಾಗಿದ್ದು, ಕಂದಾಯ ಇಲಾಖಾ ಅಧಿಕಾರಿಗಳು, ಅರಣ್ಯ ಇಲಾಖಾ ಹಿರಿಯ ಅಧಿಕಾರಿಗಳು, ಪೊಲೀಸ್ ಇಲಾಖಾ ಅಧಿಕಾರಿಗಳು ರವಿವಾರ ಮಧ್ಯಾಹ್ನದಿಂದಲೇ ಸ್ಥಳದಲ್ಲಿದ್ದು, ಶವ ಪತ್ತೆ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದರೆ, ಸ್ಥಳಕ್ಕೆ ಜಿಲ್ಲಾ ಧಿಕಾರಿ
ಬಂದು ಸೂಚನೆ ಕೊಟ್ಟ ಮೇಲೆ ಘಟನೆ ನಡೆದು 24ಗಂಟೆಗಳ ಮೇಲೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎಚ್.ರಾಜು
ಆಗಮಿಸಿದ್ದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಯಿತು.
ಬಂದು ಸೂಚನೆ ಕೊಟ್ಟ ಮೇಲೆ ಘಟನೆ ನಡೆದು 24ಗಂಟೆಗಳ ಮೇಲೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎಚ್.ರಾಜು
ಆಗಮಿಸಿದ್ದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಯಿತು.