Advertisement

ಕೊನೆಗೂ ಕ್ಷಮೆ ಕೇಳಿದ “ಗಂಡ ಹೆಂಡತಿ’ ಸಂಜನಾ

04:27 PM Nov 13, 2018 | |

ನಿರ್ದೇಶಕ ರವಿ ಶ್ರೀವತ್ಸ ಮೇಲೆ ಮಿ ಟೂ ಆರೋಪ ಮಾಡಿದ್ದ ನಟಿ ಸಂಜನಾ ಗಲ್ರಾನಿ ಕೊನೆಗೂ ನಿರ್ದೇಶಕರ ಸಂಘದ ಮುಂದೆ ಬಹಿರಂಗ ಕ್ಷಮೆ ಕೋರಿದ್ದಾರೆ. “ನಾನು ಯಾರ ಮನಸ್ಸನ್ನು ನೋಯಿಸುವ ಸಲುವಾಗಿ ಅರೋಪ ಮಾಡಿಲ್ಲ, ಸಿನಿಮಾದ ಚಿತ್ರೀಕರಣದ ವೇಳೆ ನನಗಾದ ನೋವನ್ನು ಹೇಳಿಕೊಂಡಿದ್ದು, ನನ್ನ ಅಭಿಪ್ರಾಯವನ್ನಷ್ಟೇ ತಿಳಿಸಿದ್ದೇನೆ’ ಎಂದಿದ್ದಾರೆ.

Advertisement

ಚಲನಚಿತ್ರ ನಿರ್ದೇಶಕರ ಸಂಘವು ನವೆಂಬರ್​ 8ರ ಒಳಗೆ ಸಂಜನಾ ಬಂದು ಚಿತ್ರದ ನಿರ್ದೇಶಕ ರವಿ ಶ್ರೀ ವತ್ಸ ಅವರ ಬಳಿ ಬಹಿರಂಗ ಕ್ಷಮೆ ಕೇಳಬೇಕು ಎಂಬ ಗಡುವನ್ನು ನೀಡಿತ್ತು. ಅದರಂತೆ ಇಂದು, ಕಲಾವಿದರ ಸಂಘದ ಅಧ್ಯಕ್ಷ ರೆಬೆಲ್​ ಸ್ಟಾರ್​ ಅಂಬರೀಶ್​ ಸಮ್ಮುಖದಲ್ಲಿ, ನಿರ್ದೇಶಕರ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಟಿ ಸಂಜನಾ ಗಲ್ರಾನಿ ಕ್ಷಮೆ ಕೇಳಿದ್ದಾರೆ. ಅಲ್ಲದೇ ಕಲಾವಿದರ ಸಂಘದ ಹಿರಿಯರ ಮಾತಿಗೆ ಬೆಲೆಕೊಟ್ಟು, ನಿರ್ದೇಶಕ ಸಂಘದವರ ಮನ ನೋಯಿಸಿದ್ದಕ್ಕೆ ಕ್ಷಮೆ ಕೇಳುತ್ತಾ ಇದ್ದೇನೆ ಎಂದರು ಸಂಜನಾ.

ಏನಿದು ಆರೋಪ: “ಗಂಡ ಹೆಂಡತಿ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ನನ್ನ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದು, ಒತ್ತಾಯ ಮಾಡಿ ಕಿಸ್ಸಿಂಗ್​ ಸೀನ್​ ಮಾಡಿಸಿದ್ರು, ನಂಗಿನ್ನೂ ಆಗ ಏನು ಗೊತ್ತಾಗ್ತಾ ಇರಲಿಲ್ಲ ಎಂಬ ಮಿ ಟೂ ಅಭಿಯಾನದಲ್ಲಿ ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಸಂಜನಾ ಗಲ್ರಾನಿ ಆರೋಪ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next