Advertisement

ಭಾರತೀಯ ಸೇನೆಯ ಬತ್ತಳಿಕೆಗೆ 6 ಪ್ರಬಲ ಅಪಾಚೆ ಹೆಲಿಕಾಪ್ಟರ್ ಸೇರ್ಪಡೆ

12:50 PM Aug 18, 2017 | Sharanya Alva |

ನವದೆಹಲಿ: ಕೊನೆಗೂ ಭಾರತೀಯ ಭೂಸೇನೆಗೂ ಜಗತ್ತಿನ ಅತಿ ಪ್ರಬಲ ಅಪಾಚೆ ದಾಳಿ ಹೆಲಿಕಾಪ್ಟರ್‌ ಖರೀದಿಸುವ ಪ್ರಸ್ತಾಪಕ್ಕೆ ರಕ್ಷಣಾ ಸಚಿವಾಲಯ ಅಂಕಿತ ಹಾಕಿದೆ. ಒಟ್ಟು 4,168 ಕೋಟಿ ರೂ.ವೆಚ್ಚದಲ್ಲಿ 6 ಹೆಲಿಕಾಪ್ಟರ್‌ಗಳನ್ನು ಅಮೆರಿಕದಿಂದ ಖರೀದಿಸುವ ಪ್ರಸ್ತಾವನೆ ಇದಾಗಿದೆ.

Advertisement

ರಕ್ಷಣಾ ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ ನಡೆದ ರಕ್ಷಣಾ ಖರೀದಿ ಸಮಿತಿ (ಡಿಎಸಿ) ಸಭೆಯಲ್ಲಿ ಈ ತೀಮಾನಕ್ಕೆ ಬರಲಾಗಿದೆ. ಈ ಹಿಂದೆ ವಾಯುಪಡೆಗೆ 22 ಹೆಲಿಕಾಪ್ಟರ್‌ ಒದಗಿಸುವ ಒಪ್ಪಂದ ಅಮೆರಿಕದೊಂದಿಗೆ ಮಾಡಿಕೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next