Advertisement
ಮಲ್ಪೆ ಮೀನುಗಾರಿಕೆ ಮೂರನೇ ಹಂತದ ಬಂದರಿನ ಬಾಪುತೋಟದ ಭಾಗದ ಬಂದರಿನ ರಸ್ತೆ ಬದಿಯಲ್ಲಿ ದಾರಿದೀಪವನ್ನು ಅಳವಡಿಸಿ ವರ್ಷ ನಾಲ್ಕು ಕಳೆದಿತ್ತು. ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ವಿದ್ಯುತ್ ಸಂಪರ್ಕವನ್ನು ನೀಡಲು ಅಸಾಧ್ಯವಾದ ಪರಿಣಾಮ ರಾತ್ರಿ ಹಾಗೂ ನಸುಕಿನ ವೇಳೆ ಮೀನುಗಾರಿಕೆ ಚಟುವಟಿಕೆಗಳನ್ನು ನಡೆಸಲು ಮೀನುಗಾರರು ತೊಂದರೆಯನ್ನು ಅನುಭವಿಸುವಂತಾಗಿತ್ತು. ರಾತ್ರಿ ವೇಳೆ ಮೀನುಗಾರಿಕೆ ಬೋಟನ್ನು ದಕ್ಕೆಯಲ್ಲಿ ಲಂಗರು ಹಾಕಲು ಅಥವಾ ತೆರವುಗೊಳಿಸಲು ಮೀನುಗಾರರಿಗೆ ತೊಂದರೆ ಯಾಗುತ್ತಿದ್ದವು, ಪ್ರಾಣಾಪಾಯಕ್ಕೂ ಅಹ್ವಾನ ನೀಡಿದಂತಾಗಿತ್ತು.
ಸಮಸ್ಯೆ ಬಗ್ಗೆ ಉದಯವಾಣಿ ಜ. 26ರ ಸುದಿನ ಸಂಚಿಕೆಯಲ್ಲಿ ಬೀದಿದೀಪಗಳಿಗೆ ಉದ್ಘಾಟನೆ ಭಾಗವಿಲ್ಲ ಎಂಬ ಶೀರ್ಷಿಕೆಯಡಿ ಸಚಿತ್ರ ವರದಿಯನ್ನು ಪ್ರಕಟಮಾಡಿತ್ತು. ಪ್ರಕಟಗೊಂಡ ಮರುದಿನ ರಾತ್ರಿಯೇ ದೀಪ ಉರಿಯಲಾರಂಭಿಸಿದ್ದು ಉದಯವಾಣಿ ಮತ್ತು ಮೀನುಗಾರಿಕೆ ಇಲಾಖೆಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.