ಅಹಮದಾಬಾದ್: ಎರಡೇ ದಿನಕ್ಕೆ ಮುಗಿದ ಮೂರನೇ ಟೆಸ್ಟ್ ಪಂದ್ಯ ಬಳಿಕ ಕೇಳಿಬಂದ ಮಾತುಗಳು ಹಲವು. ಇದರ ನಡುವೆ ಭಾರತ- ಇಂಗ್ಲೆಂಡ್ ತಂಡಗಳು ನಾಲ್ಕನೇ ಟೆಸ್ಟ್ ಗೆ ಅಣಿಯಾಗಿದೆ. ಅಹಮದಾಬಾದ್ ನ ಮೊಟೆರಾ ಅಂಗಳದಲ್ಲಿ ಟಾಸ್ ಗೆದ್ದ ರೂಟ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಈ ಪಂದ್ಯಕ್ಕಾಗಿ ಇಂಗ್ಲೆಂಡ್ ಎರಡು ಬದಲಾವಣೆ ಮಾಡಿಕೊಂಡಿತು. ವೇಗಿಗಳಾದ ಜೋಫ್ರಾ ಆರ್ಚರ್ ಮತ್ತು ಬೆನ್ ಸ್ಟೋಕ್ಸ್ ಹೊರಗುಳಿದಿದ್ದು, ಡ್ಯಾನಿಯಲ್ ಲಾರೆನ್ಸ್ ಮತ್ತು ಡಾಮ್ ಬೆಸ್ ಸ್ಥಾನ ಪಡೆದಿದ್ದಾರೆ. ಭಾರತ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ರಜೆ ಪಡೆದಿರುವ ಬುಮ್ರಾ ಬದಲಿಗೆ ಮೊಹಮ್ಮದ್ ಸಿರಾಜ್ ಅವಕಾಶ ಪಡೆದರು.
ಪಂದ್ಯವನ್ನೂ ಗೆದ್ದು, ಇಲ್ಲವಾದರೆ ಕನಿಷ್ಠ ಡ್ರಾ ಮಾಡಿಕೊಂಡು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸ್ಥಾನವನ್ನು ಗಟ್ಟಿಗೊಳಿಸುವುದು ಟೀಮ್ ಇಂಡಿಯಾದ ಗುರಿ. ಭಾರತದ ಅವಕಾಶವನ್ನು ಹಾಳುಗೆಡವಿ, ಕೊನೆಯ ಲ್ಲೊಂದು ಜಯದೊಂದಿಗೆ ಗೌರವಯುತವಾಗಿ ಸರಣಿ ಮುಗಿಸುವುದು ಇಂಗ್ಲೆಂಡ್ ಯೋಜನೆ.
ಇದನ್ನೂ ಓದಿ:ಟೆಸ್ಟ್ ಫಲಿತಾಂಶಕ್ಕಿಂತ ಪಿಚ್ ಕೌತುಕವೇ ಜಾಸ್ತಿ!ಭಾರತ-ಇಂಗ್ಲೆಂಡ್ ಅಂತಿಮ ಟೆಸ್ಟ್ ಪಂದ್ಯ
ಭಾರತ: ರೋಹಿತ್ ಶರ್ಮ, ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್/ಕುಲದೀಪ್ ಯಾದವ್, ಇಶಾಂತ್ ಶರ್ಮ, ಸಿರಾಜ್.
ಇಂಗ್ಲೆಂಡ್: ಡೊಮಿನಿಕ್ ಸಿಬ್ಲಿ, ಜಾಕ್ ಕ್ರಾಲಿ, ಜಾನಿ ಬೇರ್‌ಸ್ಟೊ, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಓಲೀ ಪೋಪ್, ಬೆನ್ ಫೋಕ್ಸ್, ಡ್ಯಾನಿಯಲ್ ಲಾರೆನ್ಸ್, ಜಾಕ್ ಲೀಚ್, ಡಾಮ್ ಬೆಸ್, ಜೇಮ್ಸ್ ಆ್ಯಂಡರ್ಸನ್.