Advertisement
ಬೆಂಗಳೂರು ಬಿಯಾಂಡ್ ಉಪಕ್ರಮದಡಿಯಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ವತಿಯಿಂದ ಮಂಗಳೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಮಂಗಳೂರು ಟೆಕ್ನಾ ವಾಂಜಾ ಕಾರ್ಯಕ್ರಮದಲ್ಲಿ ಕೆಡಿಇಎಂ ಮಂಗಳೂರು ಕ್ಲಸ್ಟರ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಂಗಳೂರಿನಲ್ಲಿ ಉದ್ದೇಶಿತ ಐಟಿ ಪಾರ್ಕ್ ಸ್ಥಾಪನೆಗೆ ಪೂರಕ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಸಾರ್ಟ್ ಅಪ್‌ಗ್ಳಿಗೆ ನೆರವು ನೀಡಲಾಗುವುದು ಎಂದರು.
ಟೆಲಿಕಾಂ ಸೇವಾದಾರರಿಗೆ ಉತ್ತೇಜನ ನಿಟ್ಟಿನಲ್ಲಿ ಸರಕಾರ ಶೀಘ್ರ ನೂತನ ಟೆಲಿಕಾಂ ನೀತಿಯನ್ನು ಘೋಷಿಸಲಿದೆ. ಗ್ರಾಮೀಣ ಪ್ರದೇಶದಲ್ಲಿ ಸ್ಯಾಟಲೈಟ್ ಸೇವೆಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು. 5 ವರ್ಷದಲ್ಲಿ ಜಾಗತಿಕ ಐಟಿ
ನಕಾಶೆಯಲ್ಲಿ ಮಂಗಳೂರು
ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಾ| ಇ.ವಿ. ರಮಣ ರೆಡ್ಡಿ ಮಾತನಾಡಿ, ಬೆಂಗಳೂರು ಬಿಯಾಂಡ್ ಉಪಕ್ರಮದಡಿ ಬೆಂಗಳೂರು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ಐಟಿ ಉದ್ಯಮಗಳ ಸ್ಥಾಪನೆ ನೆರವು ನೀಡಲಾಗುತ್ತಿದೆ. ಮುಂದಿನ 5 ವರ್ಷಗಳಲ್ಲಿ ಮಂಗಳೂರನ್ನು ಜಾಗತಿಕ ಐಟಿ ನಕಾಶೆಯಲ್ಲಿ ಪ್ರಮುಖ ತಾಣವಾಗಿ ಗುರುತಿಸುವಂತೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು.
Related Articles
Advertisement
ಬಯೋ ತಂತ್ರಜ್ಞಾನಕ್ಕೆ ಅವಕಾಶಅರಿನ್ ಕ್ಯಾಪಿಟಲ್ ಸಹ-ಸಂಸ್ಥಾಪಕ ಹಾಗೂ ಅಧ್ಯಕ್ಷ ಮೋಹನ್‌ದಾಸ್ ಪೈ ಮಾತನಾಡಿ, ಮಂಗಳೂರು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿದ್ದು, ಇಲ್ಲಿ ಬಯೋ ತಂತ್ರಜ್ಞಾನಕ್ಕೆ ಹೆಚ್ಚಿನ ಅವಕಾಶವಿದೆ ಎಂದರು. ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯಕ್ಕಾಗಿನ ಸರಕಾರದ ಮುಖ್ಯ ಕಾರ್ಯದರ್ಶಿ ಡಾ| ಎಸ್. ಸೆಲ್ವಕುಮಾರ್, ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣ, ಕರ್ನಾಟಕ ಸ್ಟಾರ್ಟಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು ಮಾತನಾಡಿದರು. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ, ಜಿಲ್ಲಾ ಪಂಚಾಯತ್ ಸಿಇಒ ಡಾ| ಕುಮಾರ್, ಹಿರಿಯ ಅಧಿಕಾರಿ ಮೀನಾ ನಾಗರಾಜ್, ಲಹರಿ ಎಂಡಿ ಹಾಗೂ ಸಿಇಒ ಸಂಜೀವ್ ಗುಪ್ತಾ, ಟೆಕ್ನಿಕಲ್ ಇಂಡಿಯಾದ ಮುಖ್ಯಸ್ಥ ಬೀರೇನ್ ಘೋಷ್, ಮಂಗಳೂರು ಇನ್ಫೋಟೆಕ್ ಸೊಲ್ಯೂಷನ್ಸ್ ನಿರ್ದೇಶಕ ಪ್ರಶಾಂತ್ ಶೆಣೈ, ರಝೋರ್ ಪೇ ಸಿಇಒ ಹರ್ಷಿಲ್ ಮಾಥಾರ್, ರೋಬೋಸಾಫ್ಟ್ ಸಿಇಒ ಹಾಗೂ ಸಂಸ್ಥಾಪಕ ರೋಹಿತ್ ಭಟ್, ನ್ಯಾಸ್ಕಾಂ ಉಪಾಧ್ಯಕ್ಷ ಕೆ.ಎಸ್. ವಿಶ್ವನಾಥನ್ ಉಪಸ್ಥಿತರಿದ್ದರು.ನೋವಿಗೊ ಸೊಲೋಷನ್ಸ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಕುಮಾರ್ ಕಲ್ಬಾವಿ ಸ್ವಾಗತಿಸಿದರು. ಡಿಜಿಟಲ್ ಆರ್ಥಿಕತೆಗೆ ಕೆಡಿಇಎಂ
ರಾಜ್ಯದಲ್ಲಿ ಡಿಜಿಟಲ್ ಆರ್ಥಿಕತೆಯ ಪಾಲನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರಕಾರ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸ್ಥಾಪಿಸಿದ್ದು, ಉದ್ಯಮ ಹಾಗೂ ಸರಕಾರದ ನಡುವೆ ಜ್ಞಾನಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿ ಮಂಗಳೂರು, ಮೈಸೂರು, ಹುಬ್ಬಳ್ಳಿ ಕ್ಲಸ್ಟರ್‌ಗಳಿವೆ. ಮಂಗಳೂರು ಕ್ಲಸ್ಟರ್ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕೊಡಗು ಜಿಲ್ಲೆಗಳನ್ನು ಒಳಗೊಂಡಿದೆ. ಬಿಯಾಂಡ್ ಬೆಂಗಳೂರು ಉಪಕ್ರಮವು 2026ರ ವೇಳೆಗೆ ಮೂರು ಕ್ಲಸ್ಟರ್‌ಗಳಲ್ಲಿ 5,000 ಐಟಿ ಕಂಪೆನಿಗಳು ಹಾಗೂ ಸ್ಟಾರ್ಟ್‌ಅಪ್‌ಗ್ಳನ್ನು ಆಕರ್ಷಿಸುವ ಮತ್ತು ನೆಲೆ ಒದಗಿಸುವ ಗುರಿಯನ್ನು ಹೊಂದಿದೆ.