Advertisement

ಸಿನಿಮಾ ಮೇಕರ್ಸ್ ಗಾಗಿ ಫಿಲ್ಮಿ ಎಸ್ಕೇಪ್ಸ್‌ ಇನ್‌ ಕರ್ನಾಟಕ

07:41 PM Aug 19, 2020 | Suhan S |

ಅನೇಕ ಸಿನಿಮಾಗಳ ದೃಶ್ಯಗಳಲ್ಲಿ, ಹಾಡುಗಳಲ್ಲಿ ಕರ್ನಾಟಕದ ಸುಂದರ ತಾಣಗಳನ್ನು ನೋಡಿರುತ್ತೀರಿ. ಆದರೆ ಅನೇಕರಿಗೆ ಆ ತಾಣಗಳು ಎಲ್ಲಿವೆ? ಅಲ್ಲಿಗೆ ಹೇಗೆ ಹೋಗಬೇಕು? ಅದರ ಇತರ ವೈಶಿಷ್ಟ್ಯಗಳೇನು? ಎನ್ನುವುದರ ಬಗ್ಗೆ ಅಷ್ಟಾಗಿ ಮಾಹಿತಿ ಇರುವುದಿಲ್ಲ. ಇನ್ನು ಸಿನಿಮಾಗಳ ನಿರ್ದೇಶಕರು, ನಿರ್ಮಾಪಕರು ಕೂಡ ತಮ್ಮ ಸಿನಿಮಾದ ಕಥೆಗೆ ಬೇಕಾದ ಲೊಕೇಶನ್‌ಗಳಿಗಾಗಿ ಇನ್ನಿಲ್ಲದ ಹುಡುಕಾಟ ನಡೆಸುತ್ತಿರುತ್ತಾರೆ. ಅದೆಷ್ಟೋ ಬಾರಿ ಕೇವಲ ಲೊಕೇಶನ್‌ಗಳ ಹುಡುಕಾಟಕ್ಕಾಗಿಯೇ ಹತ್ತಾರು ಕಡೆ ಅಲೆದಾಡಿದ್ದು, ತಿಂಗಳುಗಟ್ಟಲೆ ಸಮಯ ತೆಗೆದುಕೊಂಡ ಉದಾಹರಣೆಗಳು ಕೂಡ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿಗುತ್ತವೆ. ಈಗ ಸಿನಿಮಾ ಮಂದಿಯ ಇಂಥದ್ದೊಂದು ಸಮಸ್ಯೆಗೆ ಪರಿಹಾರವಾಗಿ “ಫಿಲ್ಮಿ ಎಸ್ಕೇಪ್ಸ್‌ ಇನ್‌ ಕರ್ನಾಟಕ’ ಕೃತಿ ಬಿಡುಗಡೆಯಾಗಿದೆ. “ಲೋನ್ಲಿ ಪ್ಲಾನೆಟ್‌’ ಟೂರಿಸ್ಟ್‌ ಗೈಡ್‌ ಮತ್ತು ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಸಹಯೋಗದೊಂದಿಗೆ ಫಿಲ್ಮಿ ಎಸ್ಕೇಪ್ಸ್‌ ಇನ್‌ ಕರ್ನಾಟಕ’ ಕೃತಿ ಪ್ರಕಟವಾಗಿದ್ದು, ಲೇಖಕಿ ಶ್ರುತಿ ಇಂದಿರಾ ಲಕ್ಷ್ಮೀನಾರಾಯಣ ಈ ಕೃತಿಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ಹತ್ತಾರು ಸುಂದರ, ರಮಣೀಯ ಚಿತ್ರೀಕರಣದ ತಾಣಗಳನ್ನು ಓದುಗರಿಗೆ ಪರಿಚಯಿಸಿದ್ದಾರೆ. ಇನ್ನು “ ಫಿಲ್ಮಿ ಎಸ್ಕೇಪ್ಸ್‌ ಇನ್‌ ಕರ್ನಾಟಕ’ ಕೃತಿಗೆ ನಟ ಶಿವರಾಜಕುಮಾರ್‌ ಮುನ್ನುಡಿ ಬರೆದಿದ್ದಾರೆ.

Advertisement

“ಕರ್ನಾಟಕದ ಯಾವ ಯಾವ ಸ್ಥಳಗಳು ಯಾವುದಕ್ಕೆ ಪ್ರಸಿದ್ಧಿ ಪಡೆದಿವೆ. ಯಾವ ಥರದ ಲೊಕೇಶನ್‌ಗಳು ಎಲ್ಲೆಲ್ಲಿ ಸಿಗುತ್ತವೆ. ಯಾವ ಸಿನಿಮಾಗಳಿಗೆ ಯಾವ ಲೊಕೇಶನ್‌ ಬೆಸ್ಟ್‌ ಹೀಗೆ ಹತ್ತಾರು ಮಾಹಿತಿಗಳು ಸಿನಿಮಾ ಮೇಕರ್ಸ್ ಇದರಲ್ಲಿ ಸಿಗುತ್ತದೆ. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯ ಸಿನಿಮಾ ಮೇಕರ್ಗೂ ಕೂಡ ಕರ್ನಾಟಕದಲ್ಲಿ ತಮ್ಮ ಸಿನಿಮಾಗಳ ಶೂಟಿಂಗ್‌ ಮಾಡಲು ಈ ಕೃತಿ ಸಹಾಯಕವಾಗುತ್ತದೆ’ ಎನ್ನುತ್ತಾರೆ ಲೇಖಕಿ ಶ್ರುತಿ.

Advertisement

Udayavani is now on Telegram. Click here to join our channel and stay updated with the latest news.

Next