ಮುಂಬಯಿ: ಕಿಡ್ನಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಖ್ಯಾತ ನಿರ್ದೇ ಶಕಿ ಕಲ್ಪನಾ ಲಾಜ್ಮಿ ಅವರ ಪರಿಸ್ಥಿತಿ ಇಂದು ಉಲ್ಬಣಿಸಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರುಡಾಲಿ, ಧರ್ಮಿಯಾನ್, ದಮನ್ ಮುಂತಾದ ಹೊಸ ಅಲೆಯ ಚಿತ್ರಗಳ ಮೂಲಕ ಗಮನ ಸೆಳಎದಿರುವ 61ರ ಹರೆಯದ ಲಾಜ್ಮಿ ರೋಗದಿಂದಾಗಿ ತುಂಬ ನಿಶ್ಶಕ್ತರಾಗಿದ್ದಾರೆ.
ಇಂದು ಬೆಳಗ್ಗೆ ಎದೆ ಬಿಡಿತ ಕುಸಿಯತೊಡಗಿತು. ಹೀಗಾಗಿ ತಕ್ಷಣ ಆಸ್ಪತ್ರೆಗೆ ಸೇರಬೇಕಾಯಿತು. ಎರಡೂ ಕಿಡ್ನಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ತನ್ನುನ್ನು ಭೇಟಿಯಾದ ವರದಿಗಾರರ ಬಳಿ ಹೇಳಿಕೊಂಡಿದ್ದಾರೆ.
ನಿನ್ನೆಯಷ್ಟೇ ಅವರ ಸಂಗಾತಿ ಭೂಪೇನ್ ಹಜಾರಿಕಾ ಅವರು ಪುಣ್ಯತಿಥಿಯಾಗಿತ್ತು. ಅನಾರೋಗ್ಯದ ನಡುವೆಯೂ ಕಲ್ಪನಾ ವಾಶಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆ ಬಳಿಕ ನಿಳಶ್ಶಕ್ತಿ ಹೆಚ್ಚಾಯಿತು. ಹೀಗಾಗಿ ಐಸಿಯುಗೆ ದಾಖಲಿಸಬೇಕಾಯಿತು. ಒಂದೆರಡು ದಿನ ಆಸ್ಪತ್ರೆಯಲ್ಲಿರಬೇಕು ಎಂದು ವೈದ್ಯರು ಹೇಳಿದ್ದಾರೆ.
ಕಲ್ಪನಾ ಲಾಜ್ಮಿ ಹಾಸಿಗೆ ಹಿಡಿದು ಎರಡು ವರ್ಷವಾಗುತ್ತಾ ಬಂತು. ಆದರೆ ಕಳೆದ ಕೆಲ ಸಮಯದಿಂದ ತುಸು ಚೇತರಿಸಿಕೊಂಡಿದ್ದರು. ಇನ್ನೂ ಒಂದೂವರೆ ವರ್ಷದಲ್ಲಿ ಎದ್ದು ನಡೆದಾಡಲು ಸಾಧ್ಯವಾಗಲಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಪ್ರತಿವಾರ ಡಯಾಲಿಸಿಸ್‌ಗೆ ಒಳಪಡಬೇಕಾಗುತ್ತದೆ. ವೈದ್ಯಕೀಯ ಖರ್ಚುವೆಚ್ಚಗಳು ವಿಪರೀತವಾಗಿದ್ದು, ಇದನ್ನು ನಿಭಾಯಿಸಲು ಬಾಲಿವುಡ್ ನೀಡುತ್ತಿರುವ ನೆರವಿಗೆ ಧನ್ಯವಾದ ಹೇಳಿದ್ದಾರೆ. ಅಮೀರ್ ಖಾನ್, ಇಂಡಿಯನ್ ಫಿಲ್ಮ್ ಆ್ಯಂಡ್ ಟೆಲಿವಿಶನ್ ಡೈರೆಕ್ಟರ್ ಅಸೋಸಿಯೇಶನ್, ರೋಹಿತ್ ಶೆಟ್ಟಿ, ಸಲ್ಮಾನ್ ಖಾನ್, ಕರಣ್ ಜೋಹರ್, ಅಲಿಯಾ ಭಟ್, ಸೋನಿ ರಜಾªನ್, ನೀನಾ ಗುಪ್ತ ಹೀಗೆ ಹಲವು ಮಂದಿ ಸಹಾಯ ಮಾಡಿದ್ದಾರೆ. ಪ್ರತಿ ವಾರ ಡಯಾಲಿಸಿಸ್ ಮಾಡಿಕೊಳ್ಳುವುದು ಆರ್ಥಿಕವಾಗಿ ದೊಡ್ಡ ಹೊರೆಯಾಗುತ್ತಿದೆ. ಜೀವನಮಾನವಿಡೀ ಇದನ್ನು ಮಾಡಿಕೊಂಡಿರಬೇಕು ಎಂದು ಕಲ್ಪನಾ ಲಾಜ್ಮಿ ತನ್ನ ಕಷ್ಟವನ್ನು ವಿವರಿಸಿದ್ದಾರೆ.