Advertisement

Filmmaker: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನಿರ್ದೇಶಕನಿಗೆ ಅಮಾನತು ಶಿಕ್ಷೆ

12:17 PM Sep 08, 2024 | Team Udayavani |

ಕೋಲ್ಕತ್ತಾ: ಸಿನಿಮಾ ಸೆಟ್‌ನಲ್ಲಿ ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬೆಂಗಾಳಿ ನಿರ್ದೇಶಕ ಅರಿಂದಮ್ ಸಿಲ್ ಅವರನ್ನು (Arindam Sil ) ನಿರ್ದೇಶಕರ ಸಂಘದಿಂದ ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಲಾಗಿದೆ.

Advertisement

ಕೆಲ ತಿಂಗಳ ಹಿಂದೆ ಅರಿಂದಮ್ ಸಿಲ್ ತನ್ನ ಸಿನಿಮಾ ಸೆಟ್‌ನಲ್ಲಿ ಅನುಚಿತವಾಗಿ ವರ್ತಿಸಿದ್ದರು. ಸೀನ್‌ ವೊಂದನ್ನು ವಿವರಿಸುವಾಗ ಅವರು ಕೆನ್ನೆಗೆ ಮುತ್ತು ನೀಡಿದ್ದರು ಎಂದು ಮಹಿಳಾ ಕಲಾವಿದರೊಬ್ಬರು ಆರೋಪಿಸಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಸಂಬಂಧ ಸಿಲ್‌ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ಇದನ್ನೂ ಓದಿ: GOAT: 3 ದಿನದಲ್ಲಿ 100 ಕೋಟಿ ಗಳಿಕೆ ಕಂಡ ʼಗೋಟ್‌ʼ; ತಮಿಳು ವರ್ಷನ್‌ನಿಂದಲೇ ಹೆಚ್ಚು ಗಳಿಕೆ

ಇದಾದ ನಂತರ ನಿರ್ದೇಶಕ ಸಿಲ್‌ ಅವರು, “ನನ್ನ ನಡವಳಿಕೆಯಿಂದ ನಟಿಗೆ ಅವಮಾನವಾಗಿದ್ದರೆ, ಅದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದ್ದರು.

Advertisement

ಈ ಕುರಿತು ಈಸ್ಟರ್ನ್ ಇಂಡಿಯಾದ ನಿರ್ದೇಶಕ ಸಂಘ (Directors Association of Eastern India), ಕೆಲವು ಆರೋಪಗಳು ಮತ್ತು ಪ್ರಾಥಮಿಕ ಸಾಕ್ಷ್ಯ ಪರಿಶೀಲಿಸಿ ಅಮಾನತುಗೊಳಿಸುವ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ.

ಸಿಲ್ ಅವರ ಮೇಲಿನ ಆರೋಪಗಳು ತೆರವುಗೊಳ್ಳುವವರೆಗೆ ಅಮಾನತು ಜಾರಿಯಲ್ಲಿರುತ್ತದೆ ಎಂದು ಸಂಸ್ಥೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next