Advertisement

Filmfare Awards: ಫಿಲ್ಮ್‌ ಫೇರ್‌ನಲ್ಲಿ ಮೊದಲ ದಿನ ಸಿಕ್ಕ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ..

11:25 AM Jan 28, 2024 | Team Udayavani |

ಅಹಮದಾಬಾದ್: ಬಾಲಿವುಡ್‌ ಸಿನಿರಂಗದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿರುವ ಫಿಲ್ಮ್‌ಫೇರ್ ಪ್ರಶಸ್ತಿ ಕಾರ್ಯಕ್ರಮ ಶನಿವಾರ ಗುಜರಾತಿನಲ್ಲಿ ಆರಂಭಗೊಂಡಿದೆ.

Advertisement

ಅದ್ಧೂರಿ ವೇದಿಕೆಯಲ್ಲಿ ಹತ್ತಾರು ಸೆಲೆಬ್ರಿಟಿಗಳ ಸಮ್ಮುಖದಲಿ ಕಲರ್‌ ಫುಲ್‌ ಕಾರ್ಯಕ್ರಮ ನಡೆದಿದೆ. ಶನಿವಾರದ ಕಾರ್ಯಕ್ರಮದಲ್ಲಿ ಕೆಲವೊಂದು ವಿಭಾಗದ ಪ್ರಶಸ್ತಿಗಳನ್ನು ನೀಡಲಾಗಿದೆ. ಮುಖ್ಯವಾಗಿ ವಿಕ್ಕಿ ಕೌಶಲ್‌ ಅವರ ಸ್ಯಾಮ್  ಬಹದ್ದೊರ್‌ ಹಲವು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಇಲ್ಲಿದೆ ಶನಿವಾರ ಕೊಡಮಾಡಿದ ಪ್ರಶಸ್ತಿಗಳ ಪಟ್ಟಿ:

ಅತ್ಯುತ್ತಮ ಧ್ವನಿ ವಿನ್ಯಾಸ: ಕುನಾಲ್ ಶರ್ಮಾ (ಸ್ಯಾಮ್ ಬಹದ್ದೂರ್‌) ,ಸಿಂಕ್ ಸಿನಿಮಾ (ಅನಿಮಲ್‌)

ಅತ್ಯುತ್ತಮ ಹಿನ್ನೆಲೆ ಸಂಗೀತ: ಹರ್ಷವರ್ಧನ್ ರಾಮೇಶ್ವರ್(ಅನಿಮಲ್)

Advertisement

ಅತ್ಯುತ್ತಮ ನಿರ್ಮಾಣ ವಿನ್ಯಾಸ : ಸುಬ್ರತಾ ಚಕ್ರವರ್ತಿ ಮತ್ತು ಅಮಿತ್ ರೇ ಸ್ಯಾಮ್ ಬಹದ್ದೂರ್

ಅತ್ಯುತ್ತಮ ವಿಎಫ್‌ ಎಕ್ಸ್: ರೆಡ್ ಚಿಲ್ಲಿಸ್ ವಿಎಫ್‌ ಎಕ್ಸ್‌ (ಜವಾನ್)‌

ಅತ್ಯುತ್ತಮ ಸಂಕಲನ: ಜಸ್ಕುನ್ವರ್ ಸಿಂಗ್ ಕೊಹ್ಲಿ ಮತ್ತು ವಿಧು ವಿನೋದ್ ಚೋಪ್ರಾ (12th ಫೇಲ್)‌

ಅತ್ಯುತ್ತಮ ವಸ್ತ್ರ ವಿನ್ಯಾಸ: ಸಚಿನ್ ಲವ್ಲೇಕರ್, ದಿವ್ವ್ಯಾ ಗಂಭೀರ್ ಮತ್ತು ನಿಧಿ ಗಂಭೀರ್ (ಸ್ಯಾಮ್ ಬಹದ್ದೂರ್)

ಅತ್ಯುತ್ತಮ ಛಾಯಾಗ್ರಹಣ: ಅವಿನಾಶ್ ಅರುಣ್ ಧಾವರೆ (ಥ್ರೀ ಆಫ್ ಅಸ್)

ಅತ್ಯುತ್ತಮ ನೃತ್ಯ ಸಂಯೋಜನೆ: ಗಣೇಶ್ ಆಚಾರ್ಯ (ವಾಟ್ ಜುಮ್ಕಾ? ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)

ಅತ್ಯುತ್ತಮ ಆ್ಯಕ್ಷನ್: ಸ್ಪಿರೋ ರಜಾಟೋಸ್, ಅನ್ಲ್ ಅರಸು, ಕ್ರೇಗ್ ಮ್ಯಾಕ್ರೇ, ಯಾನಿಕ್ ಬೆನ್, ಕೆಚಾ ಖಂಫಕ್ಡೀ ಮತ್ತು ಸುನಿಲ್ ರೋಡ್ರಿಗಸ್ (ಜವಾನ್)‌

ಪ್ರಮುಖ ವಿಭಾಗಗಳಲ್ಲಿನ ಪ್ರಶಸ್ತಿಗಳನ್ನು ಭಾನುವಾರ ರಾತ್ರಿ (ಜ.28 ರಂದು) ನೀಡಲಾಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next