Advertisement

Filmfare Awards: 12th ಫೇಲ್ To ಅನಿಮಲ್..‌ ಇಲ್ಲಿದೆ ಫಿಲ್ಮ್‌ ಫೇರ್‌ ಗೆದ್ದವರ ಪಟ್ಟಿ

12:06 PM Jan 29, 2024 | Team Udayavani |

ಅಹಮದಾಬಾದ್: ಬಾಲಿವುಡ್ ಸಿನಿರಂಗದ ಕಲರ್ ಫುಲ್ 69ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಅದ್ಧೂರಿಯಾಗಿ ನಡೆದಿದೆ. ಬಿಟೌನ್ ತಾರೆಯರು ಹಾಗೂ ಗಣ್ಯರು ವೇದಿಕೆಯಲ್ಲಿ ಕುಣಿದು ಸುಂದರ ಸಂಜೆಯ ರಂಗನ್ನು ಹೆಚ್ಚಿಸಿದ್ದಾರೆ. ಕರೀನಾ ಕಪೂರ್, ಕಾರ್ತಿಕ್ ಆರ್ಯಾನ್ ಸೇರಿದಂತೆ ಹತ್ತಾರು ಮಂದಿ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ರಂಜಿಸಿದರು.

Advertisement

ಈ ವರ್ಷ ಗಮನ ಸೆಳೆದ ವಿಧು ವಿನೋದ್‌ ಅವರ 12th ಫೇಲ್‌ ಹಾಗೂ ರಣ್ಬೀರ್‌ ಕಪೂರ್‌ ಅವರ ʼಅನಿಮಲ್‌ʼ ಸಿನಿಮಾ ದೊಡ್ಡ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇಲ್ಲಿದೆ ಪ್ರಮುಖ ಅವಾರ್ಡ್ಸ್‌ ಗಳ ಪಟ್ಟಿ..

ಪ್ರಮುಖ ಪ್ರಶಸ್ತಿಗಳು:

ಬೆಸ್ಟ್‌ ಫಿಲ್ಮ್‌: (ಪಾಪ್ಯುಲರ್) : 12th ಫೇಲ್

ಬೆಸ್ಟ್‌ ಫಿಲ್ಮ್(ಕ್ರಿಟಿಕ್ಸ್)‌: ಜೋರಾಮ್

Advertisement

ಅತ್ಯುತ್ತಮ ಕಥೆ: ಅಮಿತ್ ರೈ (OMG 2), ದೇವಶಿಶ್ ಮಖಿಜಾ (ಜೋರಾಮ್‌)

ಅತ್ಯುತ್ತಮ ಚಿತ್ರಕಥೆ: ವಿಧು ವಿನೋದ್ (12th ಫೇಲ್)

ಅತ್ಯುತ್ತಮ ಸಂಭಾಷಣೆ:  ಇಶಿತಾ ಮೊಯಿತ್ರಾ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ) ‌‌

ಬೆಸ್ಟ್‌ ಆ್ಯಕ್ಟರ್ ಇನ್‌ ಲೀಡಿಂಗ್‌ ರೋಲ್(ನಟ) : ರಣ್‌ ಬೀರ್‌ ಕಪೂರ್‌ (ಅನಿಮಲ್)‌

ಬೆಸ್ಟ್‌ ಆ್ಯಕ್ಟರ್ ಇನ್‌ ಲೀಡಿಂಗ್‌ ರೋಲ್(ನಟಿ): ಆಲಿಯಾ ಭಟ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)

ಅತ್ಯುತ್ತಮ ನಟ (ಕ್ರಿಟಿಕ್ಸ್): ವಿಕ್ರಾಂತ್ ಮಾಸ್ಸೆ(12th ಫೇಲ್)

ಅತ್ಯುತ್ತಮ ನಟಿ (ಕ್ರಿಟಿಕ್ಸ್)‌: ರಾಣಿ ಮುಖರ್ಜಿ (ಮಿಸೆಸ್ ಚಟರ್ಜಿ Vs ನಾರ್ವೆ), ಶೆಫಾಲಿ ಶಾ (‘ಥ್ರೀ ಆಫ್ ಅಸ್’ )

ಅತ್ಯುತ್ತಮ ನಿರ್ದೇಶಕ: ವಿಧು ವಿನೋದ್ ಚೋಪ್ರಾ (12th ಫೇಲ್)

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ: ವಿಕ್ಕಿ ಕೌಶಲ್ (ಡಂಕಿ)

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ:  ಶಬಾನಾ ಅಜ್ಮಿ(ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)

ಅತ್ಯುತ್ತಮ ಸಾಹಿತ್ಯ: ಅಮಿತಾಭ್ ಭಟ್ಟಾಚಾರ್ಯ (ಜರಾ ಹಟ್ಕೆ ಜರಾ ಬಚ್ಕೆ’ ಚಿತ್ರದ ‘ತೇರೆ ವಾಸ್ತೆ’)

ಅತ್ಯುತ್ತಮ ಮ್ಯೂಸಿಕ್‌ ಆಲ್ಬಂ: ‘ಅನಿಮಲ್’ (ಪ್ರೀತಮ್, ವಿಶಾಲ್ ಮಿಶ್ರಾ, ಮನನ್ ಭಾರದ್ವಾಜ್, ಶ್ರೇಯಸ್ ಪುರಾಣಿಕ್, ಜಾನಿ, ಭೂಪಿಂದರ್ ಬಬ್ಬಲ್, ಆಶಿಮ್ ಕೆಮ್ಸನ್, ಹರ್ಷವರ್ಧನ್ ರಾಮೇಶ್ವರ್, ಗುರಿಂದರ್ ಸೀಗಲ್)

ಅತ್ಯುತ್ತಮ ಹಿನ್ನೆಲೆ ಗಾಯಕ:  ಭೂಪಿಂದರ್ ಬಬ್ಬಲ್ (ಅನಿಮಲ್) ಹಾಡು : ‘ಅರ್ಜನ್ ವೈಲಿ’

ಅತ್ಯುತ್ತಮ ಹಿನ್ನೆಲೆ ಗಾಯಕಿ: – ‘ಬೇಷರಂ ರಂಗ್’ ಹಾಡಿಗಾಗಿ ಶಿಲ್ಪಾ ರಾವ್(‘ಪಠಾಣ್’)

ಶನಿವಾರ ಕೊಡಮಾಡಿದ ಪ್ರಶಸ್ತಿಗಳ ಪಟ್ಟಿ:

ಅತ್ಯುತ್ತಮ ಧ್ವನಿ ವಿನ್ಯಾಸ: ಕುನಾಲ್ ಶರ್ಮಾ (ಸ್ಯಾಮ್ ಬಹದ್ದೂರ್‌) ,ಸಿಂಕ್ ಸಿನಿಮಾ (ಅನಿಮಲ್‌)

ಅತ್ಯುತ್ತಮ ಹಿನ್ನೆಲೆ ಸಂಗೀತ: ಹರ್ಷವರ್ಧನ್ ರಾಮೇಶ್ವರ್(ಅನಿಮಲ್)

ಅತ್ಯುತ್ತಮ ನಿರ್ಮಾಣ ವಿನ್ಯಾಸ : ಸುಬ್ರತಾ ಚಕ್ರವರ್ತಿ ಮತ್ತು ಅಮಿತ್ ರೇ ಸ್ಯಾಮ್ ಬಹದ್ದೂರ್

ಅತ್ಯುತ್ತಮ ವಿಎಫ್‌ ಎಕ್ಸ್: ರೆಡ್ ಚಿಲ್ಲಿಸ್ ವಿಎಫ್‌ ಎಕ್ಸ್‌ (ಜವಾನ್)‌

ಅತ್ಯುತ್ತಮ ಸಂಕಲನ: ಜಸ್ಕುನ್ವರ್ ಸಿಂಗ್ ಕೊಹ್ಲಿ ಮತ್ತು ವಿಧು ವಿನೋದ್ ಚೋಪ್ರಾ (12th ಫೇಲ್)‌

ಅತ್ಯುತ್ತಮ ವಸ್ತ್ರ ವಿನ್ಯಾಸ: ಸಚಿನ್ ಲವ್ಲೇಕರ್, ದಿವ್ವ್ಯಾ ಗಂಭೀರ್ ಮತ್ತು ನಿಧಿ ಗಂಭೀರ್ (ಸ್ಯಾಮ್ ಬಹದ್ದೂರ್)

ಅತ್ಯುತ್ತಮ ಛಾಯಾಗ್ರಹಣ: ಅವಿನಾಶ್ ಅರುಣ್ ಧಾವರೆ (ಥ್ರೀ ಆಫ್ ಅಸ್)

ಅತ್ಯುತ್ತಮ ನೃತ್ಯ ಸಂಯೋಜನೆ: ಗಣೇಶ್ ಆಚಾರ್ಯ (ವಾಟ್ ಜುಮ್ಕಾ? ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)

ಅತ್ಯುತ್ತಮ ಆ್ಯಕ್ಷನ್: ಸ್ಪಿರೋ ರಜಾಟೋಸ್, ಅನ್ಲ್ ಅರಸು, ಕ್ರೇಗ್ ಮ್ಯಾಕ್ರೇ, ಯಾನಿಕ್ ಬೆನ್, ಕೆಚಾ ಖಂಫಕ್ಡೀ ಮತ್ತು ಸುನಿಲ್ ರೋಡ್ರಿಗಸ್ (ಜವಾನ್)‌

 

 

Advertisement

Udayavani is now on Telegram. Click here to join our channel and stay updated with the latest news.

Next