ಮಣಿಪಾಲ: ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸಿನಿಮಾ ಥಿಯೇಟರ್ ತೆರೆಯಲು ಕೇಂದ್ರ ಸರ್ಕಾರ ಅಸ್ತು ಎಂದಿರುವುದು ಉತ್ತಮ ಬೆಳವಣಿಗೆಯೇ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಪ್ರದಿ: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಬೇಕಾಗಿರುವುದು ಕೇವಲ ಹಣ ಮಾತ್ರ. ಜನಸಾಮಾನ್ಯರ ಸ್ಥಿತಿ ಗತಿ ಗಳು ಬೇಡಾವಾಗಿದೆ. ಸದ್ಯ ಪರಿಸ್ಥಿತಿ ಯಲ್ಲಿ ಥಿಯೇಟರ್ ಹಾಗೂ ಮಾಲ್ ಗಳನ್ನು ತೆರೆಯುವ ಸೂಕ್ತವಲ್ಲ.
ಪ್ರೀತಿ: ಚಿತ್ರಮಂದಿರಗಳು ಮತ್ತೆ ಆರಂಭವಾಗಬೇಕು. ಅದನ್ನೇ ನಂಬಿರುವ ಹಲವಾರು ಕುಟುಂಬಗಳಿವೆ. ಅವುಗಳಿಗೆ ಇನ್ನಷ್ಟು ಕಷ್ಟ ಬೇಡ. ಸೂಕ್ತ ಭದ್ರತೆಯೊಂದಿಗೆ ಥಿಯೇಟರ್ ಗಳು ಆರಂಭವಾಗಬೇಕು.
ರಮೇಶ್ ಕುಮಾರ್: ಮಾಡಬಹುದು. ಆದರೆ ಎಷ್ಟು ಸುರಕ್ಷಿತ? ಸಾಕಷ್ಟು ಸುರಕ್ಷಿತಾ ಕ್ರಮಗಳನ್ನು ತೆಗೆದುಕೊಂಡರೂ ಸೋಂಕು ನಿಯಂತ್ರಣ ಕಷ್ಟ.
ಕೇಶವ: ಆಗಬೇಕು. ಎಲ್ಲಾ ಕ್ಷೇತ್ರಗಳ ಆರಂಭಕ್ಕೆ ಅವಕಾಶ ನೀಡಲಾಗಿದೆ. ಸಿನಿಮಾಕ್ಕೆ ಯಾಕೆ ತಡೆ. ಸಾಮಾಜಿಕ ಅಂತರ ಪಾಲಿಸಿ ಚಿತ್ರ ಬಿಡುಗಡೆಯಾಗಲಿ.