ವಾಷಿಂಗ್ಟನ್: ದೈಹಿಕ ಸಂಪರ್ಕ ಬೆಳೆಸಿ ಹಣ ನೀಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಲಿಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಕೀಲರಿಗೆ 1,20,000(98,43,930 ರೂಪಾಯಿ) ಡಾಲರ್ ಕಾನೂನು(Legagl Fees) ಶುಲ್ಕವನ್ನು ಪಾವತಿಸುವಂತೆ ಕ್ಯಾಲಿಫೋರ್ನಿಯಾದ ಫೆಡರಲ್ ಕೋರ್ಟ್ ಆದೇಶ ನೀಡಿದೆ. ಇದರೊಂದಿಗೆ ಟ್ರಂಪ್ ಕಾನೂನು ಸಮರದಲ್ಲಿ ಸ್ವಾರ್ಮಿ ವಿರುದ್ಧ ಗೆಲುವು ಸಾಧಿಸಿದಂತಾಗಿದೆ.
ಇದನ್ನೂ ಓದಿ:Karnataka poll 2023; ಬೊಮ್ಮಾಯಿ ಚಿತ್ರನಟರ ಮುಂದೆ ಶರಣಾಗಿದ್ದಾರೆ ಎಂದ ಕಾಂಗ್ರೆಸ್
ಅಶ್ಲೀಲ ಚಿತ್ರದ ನಟಿ ಸ್ಟಾರ್ಮಿ ಡೇನಿಯಲ್ಸ್ ಜೊತೆ ದೈಹಿಕ ಸಂಪರ್ಕ ಬೆಳೆಸಿ ಆಕೆಯ ಬಾಯಿ ಮುಚ್ಚಿಸಲು ಹಣ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೂರು ದಾಖಲಾಗಿತ್ತು.
ತಮ್ಮಿಬ್ಬಿರ ನಡುವಿನ ದೈಹಿಕ ಸಂಬಂಧವನ್ನು ಮುಚ್ಚಿಹಾಕಲು ಸ್ಟಾರ್ಮಿ ಡೇನಿಯಲ್ಸ್ ಗೆ ಹಣ ನೀಡಿರುವ ಆರೋಪಕ್ಕೆ ಸಂಬಂಧಿಸಿದ 34 ಕೌಂಟ್ ಗಳ ಆರೋಪದ ಕುರಿತು ಮ್ಯಾನ್ ಹಟ್ಟನ್ ನ್ಯಾಯಾಲಯವು ಟ್ರಂಪ್ ಅವರನ್ನು ವಿಚಾರಣೆಗೆ ಒಳಪಡಿಸಿದ ದಿನವೇ ಈ ಆದೇಶವನ್ನು ನೀಡಲಾಗಿದೆ.
ಹಣ ಕೊಟ್ಟು ಬಾಯಿ ಮುಚ್ಚಿಸಿದ್ದಾರೆಂಬ ಸುಳ್ಳು ಸುದ್ದಿಗೆ ಸಂಬಂಧಿಸಿಂತೆ ಟ್ರಂಪ್ ಅವರ ಮೇಲೆ ಅಮಮೆರಿಕದ ಕೋರ್ಟ್ 34 ಕೌಂಟ್ಸ್ ಆರೋಪ ಹೊರಿಸಿತ್ತು. ಅಮೆರಿಕದ ಇತಿಹಾಸದಲ್ಲಿಯೇ ಕ್ರಿಮಿನಲ್ ಆರೋಪ ಎದುರಿಸಿದ ಮೊದಲ ಮಾಜಿ ಅಧ್ಯಕ್ಷರು ಎಂಬ ಅಪಖ್ಯಾತಿಗೆ ಒಳಗಾಗಿದ್ದಾರೆ.
ಸಿವಿಲ್ ವ್ಯಾಜ್ಯವು ಅಧಿಕೃತವಾಗಿ ಟ್ರಂಪ್ ಅವರ ಬಂಧನ ಮತ್ತು ನ್ಯೂಯಾರ್ಕ್ ನಲ್ಲಿ ಅವರ ವಿರುದ್ಧ ಸಲ್ಲಿಸಲಾದ ಆರೋಪಗಳಿಗೆ ಸಂಬಂಧಿಸಿಲ್ಲ. ಆದರೆ ಡೇನಿಯಲ್ಸ್ ಸೇರಿದಂತೆ ಇಬ್ಬರೂ ಈ ಪ್ರಕರಣದಲ್ಲಿ ಒಳಗೊಂಡಿದ್ದು, 2016ರ ಅಧ್ಯಕ್ಷೀಯ ಪ್ರಚಾರದ ಸಮಯದಲ್ಲಿ ದೈಹಿಕ ಸಂಬಂಧದ ಬಗ್ಗೆ ಮೌನವಾಗಿರಲು 1,20,00 ಡಾಲರ್ ಹಣವನ್ನು ಪಾವತಿಸಲಾಗಿತ್ತು ಎಂಬ ಆರೋಪವನ್ನು ಟ್ರಂಪ್ ನಿರಾಕರಿಸಿದ್ದಾರೆ ಎಂದು ಸಿಎನ್ ಎನ್ ವರದಿ ಮಾಡಿದೆ.
ಟ್ರಂಪ್ ಜೊತೆಗಿನ ದೈಹಿಕ ಸಂಬಂಧದ ಬಗ್ಗೆ ಮೌನವಾಗಿರಲು ಅಪರಿಚಿತ ವ್ಯಕ್ತಿಯೊಬ್ಬರು ಬೆದರಿಕೆ ಹಾಕಿದ್ದರು ಎಂದು ಡೇನಿಯಲ್ಸ್ ಟ್ವೀಟ್ ಮಾಡಿದ್ದ ನಂತರ ಡೇನಿಯಲ್ಸ್ 2018ರಲ್ಲಿ ಟ್ರಂಪ್ ವಿರುದ್ಧ ದೂರು ದಾಖಲಿಸಿದ್ದರು.