Advertisement

ಚಿತ್ರ ನಿರ್ಮಾಪಕ ಭಕ್ತವತ್ಸಲ ನಿಧನ

06:05 AM Aug 06, 2018 | Team Udayavani |

ಬೆಂಗಳೂರು: ಕನ್ನಡ ಚಿತ್ರ ರಂಗದ ಹಿರಿಯ ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕ ಎಂ. ಭಕ್ತವತ್ಸಲ (83)ಅವರು ಭಾನುವಾರ ನಿಧನರಾಗಿದ್ದಾರೆ.

Advertisement

ಕೇಂದ್ರ ಸರ್ಕಾರದ ಅಧಿಕಾರಿಯಾಗಿದ್ದ ಅವರು ನಂತರದ ದಿನಗಳಲ್ಲಿ ಸಿನಿಮಾಸಕ್ತಿಯಿಂದ ಚಿತ್ರಗಳ ವಿತರಣೆ, ನಿರ್ಮಾಣ ಹಾಗೂ ಪ್ರದರ್ಶಕರಾಗಿ ಗುರುತಿಸಿಕೊಂಡಿದ್ದರು. ಎಂ.ಎಸ್‌.ಸತ್ಯು ನಿರ್ದೇಶನದ ‘ಕನ್ನೇಶ್ವರ ರಾಮ’ ಚಿತ್ರ ನಿರ್ಮಿಸಿದ್ದ ಅವರು ‘ ಚಂಡ ಮಾರುತ’ ಚಿತ್ರದಲ್ಲಿ ನಟರಾಗಿ ಗುರುತಿಸಿಕೊಂಡಿದ್ದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಏಳು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ ಅವರು ಉತ್ತಮ ತಳಹದಿಯನ್ನು ಹಾಕಿಕೊಟ್ಟಿದ್ದರು. ನಂತರದ ದಿನಗಳಲ್ಲಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಅವರು, ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಜಾಗತಿಕ ಸಿನಿಮಾ ಬೆಳವಣಿಗೆ, ಕನ್ನಡ ಚಲನಚಿತ್ರ ಬಗೆಗಿನ ಹಲವು ಲೇಖನ ಪುಸ್ತಕಗಳನ್ನು ಬರೆದಿದ್ದಾರೆ. ಭಕ್ತವತ್ಸ ಅವರಿಗೆ ರಾಜ್ಯ ಸರ್ಕಾರ 2012ನೇ ಸಾಲಿನ ಡಾ.ರಾಜ್‌ಕುಮಾರ್‌ ಪ್ರಶಸ್ತಿ ನೀಡಿ ಗೌರವಿಸಿತ್ತು.ಸೋಮವಾರ (ಇಂದು) ಅವರ ಅಂತ್ಯಕ್ರಿಯೆ ವಿಲ್ಸನ್‌ ಗಾರ್ಡನ್‌ ನಲ್ಲಿ ನೆರವೇರಲಿದೆ.

ಭಕ್ತವತ್ಸಲ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂತಾಪ ಸೂಚಿಸಿದೆ. ಅಧ್ಯಕ್ಷ ಚಿನ್ನೇಗೌಡ ಮಾತನಾಡಿ, ಭಕ್ತವತ್ಸಲರ ನಿಧನದಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಮಂಡಳಿ ಅಧ್ಯಕ್ಷರಾಗಿ ಗಟ್ಟಿ ಬುನಾದಿ ಹಾಕಿಕೊಟ್ಟಿದ್ದರು ಎಂದು ಹೇಳಿದ್ದಾರೆ.

Advertisement

ಕನ್ನಡಡ ಹಿರಿಯ ಚಿತ್ರೋದ್ಯಮಿ ಎಂ.ಭಕ್ತವತ್ಸಲ ಅವರ ನಿಧನದ ಸುದ್ದಿ ತೀವ್ರ ಆಘಾತ ಉಂಟುಮಾಡಿದೆ. ಸಂಘಟನೆಯಲ್ಲಿ ಹೆಸರಾದ ಅವರು ಕನ್ನಡ ಚಿತ್ರರಂಗದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಗಮನಿಸುವಂತೆ ಮಾಡಿದ ಚಿತ್ರೋದ್ಯಮಿ. ಅವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.
– ಡಾ.ಜಯಮಾಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ

ಎಚ್‌ಎಂಟಿಯಲ್ಲಿ ಅಧಿಕಾರಿಯಾಗಿದ್ದ ಭಕ್ತವತ್ಸಲ ಅವರು ಆರಂಭದಲ್ಲಿ ಚಲನಚಿತ್ರ ಹಂಚಿಕೆ, ಚಿತ್ರಮಂದಿರಗಳ ನಿರ್ವಹಣೆ ವಹಿಸಿಕೊಂಡು ನಂತರದ ದಿನಗಳಲ್ಲಿ ಪ್ರಯೋಗಾತ್ಮಕ ಚಿತ್ರಗಳ ನಿರ್ಮಾಪಕರಾದರು. ಸಾಹಿತ್ಯ, ಪರ್ವತಾರೋಹಣ ಹೀಗೆ ವೈವಿಧ್ಯಮಯ ಆಸಕ್ತಿ ಹೊಂದಿದ್ದರು. ಇವರ ನಿಧನ ಕನ್ನಡ ಚಲನಚಿತ್ರರಂಗ ಸಂಘಟನಾ ಚತುರ ನಾಯಕರೊಬ್ಬರನ್ನು ಕಳೆದುಕೊಂಡಂತಾಗಿದೆ.
– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next