Advertisement

Sandalwood: ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ತನಿಖೆ ಆಗಬೇಕು: ಸಿಎಂಗೆ ಪತ್ರ

04:17 PM Sep 04, 2024 | Team Udayavani |

ಬೆಂಗಳೂರು: ಮಾಲಿವುಡ್‌(Mollywood) ಸಿನಿಮಾರಂಗದಲ್ಲಿ ಹೇಮಾ ಸಮಿತಿ ವರದಿ(Hema Committee Report) ಬಳಿಕ ದಿಗ್ಗಜ ಕಲಾವಿದರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬರುತ್ತಿದೆ. ಕೆಲ ಕಲಾವಿದರ ವಿರುದ್ಧ ದೂರು ಕೂಡ ದಾಖಲಾಗಿದೆ.

Advertisement

ಇತ್ತ ಮಾಲಿವುಡ್‌ ಬಳಿಕ ಟಾಲಿವುಡ್‌, ಕಾಲಿವುಡ್‌ ಹಾಗೂ ಸ್ಯಾಂಡಲ್‌ ವುಡ್‌ನ ಕೆಲ ಕಲಾವಿದರು ಕೂಡ ಹೇಮಾ ಸಮಿತಿಯಂತೆ ತಮ್ಮ ಚಿತ್ರರಂಗದಲ್ಲೂ ಒಂದು ಸಮಿತಿ ರಚನೆ ಆಗಬೇಕೆಂದು ಒಂದಾಗಿ ಧ್ವನಿಗೂಡಿಸಿದ್ದಾರೆ.

ಇದನ್ನೂ ಓದಿ: Renukaswamy Case: ಡಿ-ಗ್ಯಾಂಗ್‌ ವಿರುದ್ಧ 3,991 ಪುಟಗಳ ಆರೋಪ ಪಟ್ಟಿ ಕೋರ್ಟ್‌ಗೆ ಸಲ್ಲಿಕೆ

ಕನ್ನಡ ಚಿತ್ರರಂಗದಲ್ಲಿ ಮಹಿಳಾ ಕಲಾವಿದರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ಅಧ್ಯಯನ ಮಾಡಿ ವರದಿ ಸಲ್ಲಿಸಲು ಒಂದು ಸಮಿತಿ ರಚನೆ ಆಗಬೇಕೆಂದು ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ(ಫೈರ್)‌ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದೆ.

Advertisement

ಏನಿದು ಫೈರ್‌?: ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳಾ ಕಲಾವಿದರು ತಮಗೆ ಲೈಂಗಿಕ ಕಿರುಕುಳ ಅಥವಾ ಯಾವುದಾದರೂ ಇತರೆ ಸಮಸ್ಯೆ ಕಾಣಿಸಿಕೊಂಡರೆ ದೂರು ನೀಡಲು ಹುಟ್ಟುಕೊಂಡ ಆಂತರಿಕ ದೂರು ಸಮಿತಿಯೇ ʼಫೈರ್ʼ. ಈ ಕಮಿಟಿ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ, ನಿರ್ದೇಶಕಿ ಕವಿತಾ ಲಂಕೇಶ್ ಸೇರಿದಂತೆ ಇತರೆ ಕಲಾವಿದರನ್ನು ಒಳಗೊಂಡಿದೆ.

ಬೇಡಿಕೆಗಳೇನು?:

ಮೊದಲ ಬೇಡಿಕೆ:

ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಹಿಳಾ ಕಲಾವಿದರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ಅಧ್ಯಯನ ಮಾಡಿ ವರದಿ ಮಾಡಲು ಸಮಿತಿ ರಚನೆ ಆಗಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಮನವಿ ಮಾಡಿದೆ.

ಎರಡನೇ ಬೇಡಿಕೆ: ಚಿತ್ರ್ಯೋದಮದಲ್ಲಿ ಎಲ್ಲಾ ಮಹಿಳೆಯರಿಗೂ ಸುರಕ್ಷಿತವಾದ ಮತ್ತು ನ್ಯಾಯಯುತವಾದ ವಾತಾವರಣವನ್ನು ಸೃಷ್ಟಿಸಲು ಅದಕ್ಕೆ ತಕ್ಕ ನಿಯಮಗಳನ್ನು ರಚಿಸಬೇಕೆಂದು ಬೇಡಿಕೆಯನ್ನಿಟ್ಟಿದೆ.

ಈ ಪತ್ರಕ್ಕೆ ಅಧ್ಯಕ್ಷೆ  ಕವಿತಾ ಲಂಕೇಶ್, ಕಾರ್ಯದರ್ಶಿ ಚೇತನ್ ಅಹಿಂಸಾ, ಹಿಡಿದು ರಮ್ಯಾ, ಶ್ರುತಿ ಹರಿಹರನ್, ಆಶಿಕಾ ರಂಗನಾಥ್, ಐಂದ್ರಿತಾ ರೇ, ಅಮೃತಾ ಅಯ್ಯಂಗಾರ್, ಪೂಜಾ ಗಾಂಧಿ, ಚೈತ್ರಾ ಜೆ ಆಚಾರ್, ಧನ್ಯಾ ರಾಮ್‌ಕುಮಾರ್, ಸಂಯುಕ್ತ ಹೆಗಡೆ, ಶ್ರದ್ಧ ಶ್ರೀನಾಥ್, ಕಿಶೋರ್, ನಿಶ್ವಿಕಾ ನಾಯ್ಡು, ವಿನಯ್ ರಾಜ್‌ಕುಮಾರ್, ಪವನ್‌ ಕುಮಾರ್‌, ನಟ ಸುದೀಪ್ ಸೇರಿದಂತೆ 153 ಮಂದಿ ಅರ್ಜಿಗೆ ಸಹಿ ಹಾಕುವ ಮೂಲಕ ಸಮಿತಿ ರಚನೆಗೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next