ಬೆಂಗಳೂರು: ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಹಿರಿಯ ನಿರ್ಮಾಪಕ ಮತ್ತು ವಿತರಕ ಎನ್.ಎಂ.ಸುರೇಶ್ ಆಯ್ಕೆಯಾಗಿ¨ªಾರೆ. ಸೆ. 23 ರ ಶನಿವಾರ ಕ್ರಿಸೆಂಟ್ ರಸ್ತೆಯಲ್ಲಿರುವ ಶ್ರೀ ಗುರುರಾಜ ಕಲ್ಯಾಣ ಮಂಟಪದಲ್ಲಿ ನಡೆದ 2023-24ನೇ ಸಾಲಿನ ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ಎನ್.ಎಂ.ಸುರೇಶ್ 337 ಮತ ಪಡೆದು ಗೆಲುವನ್ನು ತಮ್ಮದಾಗಿಸಿಕೊಂಡರು.
ಪ್ರತಿ ಬಾರಿಯೂ ಮಂಡಳಿ ಅಧ್ಯಕ್ಷ ಸ್ಥಾನ ಒಂದೊಂದು ವಲಯಕ್ಕೆ ಮೀಸಲಾಗಿರುತ್ತದೆ. ಅದರಂತೆ, ಈ ಬಾರಿ ಮಂಡಳಿ ಅಧ್ಯಕ್ಷ ಸ್ಥಾನ ವಿತರಕ ವಲಯಕ್ಕೆ ಮೀಸಲಾಗಿತ್ತು.
ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಿತು. ಸಂಜೆ 6.30ರಿಂದ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿ, ರಾತ್ರಿ ವೇಳೆಗೆ ಫಲಿತಾಂಶ ಪ್ರಕಟವಾಯಿತು. ಚುನಾವಣೆಯಲ್ಲಿ ಒಟ್ಟು 1599 ಮತಗಳ ಪೈಕಿ 967 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ ಎನ್.ಎಂ.ಸುರೇಶ್ 337 ಮತಗಳಿಸಿದರೆ ಪಡೆದುಕೊಂಡರೆ, ಉಳಿದಂತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿಲ್ಪಾ ಶ್ರೀನಿವಾಸ್ 217 ಮತ, ಎ. ಗಣೇಶ್ 204 ಮತಗಳನ್ನು ಮತ್ತು ವಿ. ಹೆಚ್. ಸುರೇಶ್ (ಮಾರ್ ಸುರೇಶ್) 181 ಮತಗಳನ್ನು ಪಡೆದುಕೊಂಡರು.
ನೂತನ ಪದಾಧಿಕಾರಿಗಳ ಪಟ್ಟಿ: ಮಂಡ ಳಿಯ ಬೈಲಾದಂತೆ, ಒಬ್ಬರು ಅಧ್ಯಕ್ಷರು, ವಲಯವಾರು ಮೂವರು ಉಪಾಧ್ಯಕ್ಷರು, ವಲಯವಾರು ಮೂವರು ಗೌರವ ಕಾರ್ಯ ದರ್ಶಿಗಳು ಮತ್ತು ಒಬ್ಬರು ಖಜಾಂಚಿ ಸೇರಿ ದಂತೆ, ಒಟ್ಟು 8 ಮಂದಿಯ ಪದಾಧಿಕಾರಿಗಳ ಸಮಿತಿಯಿರುತ್ತದೆ. ಈ ಬಾರಿ 8 ಪದಾಧಿಕಾರಿಗಳ ಸ್ಥಾನಕ್ಕೆ ಬರೋಬ್ಬರಿ 24 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.
ಚುನಾವಣಾ ಫಲಿತಾಂಶದಲ್ಲಿ ನಿರ್ಮಾ ಪಕರ ವಲಯದ ಉಪಾಧ್ಯಕ್ಷರಾಗಿ ಪ್ರಮೀಳಾ ಜೋಷಾಯ್, ವಿತರಕ ವಲಯದ ಉಪಾಧ್ಯಕ್ಷರಾಗಿ ವೆಂಕಟೇಶ್ ಜಿ. ಮತ್ತು ಪ್ರದರ್ಶಕರ ವಲಯದ ಉಪಾಧ್ಯಕ್ಷ ರಾಗಿ ನರಸಿಂಹಲು ಎಂ. ಆಯ್ಕೆಯಾಗಿದ್ದಾರೆ. ಉಳಿದಂತೆ ನಿರ್ಮಾ ಪಕರ ವಲಯದ ಗೌರವ ಕಾರ್ಯದರ್ಶಿಯಾಗಿ ಭಾ.ಮ.ಗಿರೀಶ್, ವಿತರಕರ ವಲಯದ ಗೌರವ ಕಾರ್ಯದರ್ಶಿಯಾಗಿ ಸುಬ್ರಮಣಿ ವಿ. (ಕರಿಸುಬ್ಬು) ಮತ್ತು ಪ್ರದರ್ಶಕರ ವಲಯದ ಗೌರವ ಕಾರ್ಯದರ್ಶಿಯಾಗಿ ಸುಂದರ್ ರಾಜು ಆರ್.ಆಯ್ಕೆಯಾಗಿದ್ದಾರೆ. ಖಜಾಂಚಿ ಸ್ಥಾನವನ್ನು ಜಯಸಿಂಹ ಮುಸುರಿ ಬಿ.ಕೆ.ತಮ್ಮದಾಗಿಸಿಕೊಂಡಿದ್ದಾರೆ.
ಇಂದು ಪದಗ್ರಹಣ: ನೂತನ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಪದಗ್ರಹಣ ಮಂಡಳಿಯ ಕಚೇರಿಯಲ್ಲಿ ಭಾನುವಾರ ಮಧ್ಯಾಹ್ನ ನಡೆಯಲಿದೆ.
ಇದು ವಾಣಿಜ್ಯ ಮಂಡಳಿಯ ಚರಿತ್ರೆಯಲ್ಲಿ ಬರೆಯುವ ಚುನಾವಣೆ. ನಾಲ್ಕು ಅಭ್ಯರ್ಥಿಗಳ ಮಧ್ಯೆ ಅತಿ ಹೆಚ್ಚು ಮತ ಪಡೆದು ಆಯ್ಕೆಯಾಗಿರುವುದರಿಂದ ಖುಷಿಯಾಗುತ್ತಿದೆ. ನನ್ನ ಗೆಲುವಿಗೆ ಕಾರಣವಾದ ಎಲ್ಲಾ ನಿರ್ಮಾಪಕರಿಗೆ ವಿತರಕರಿಗೆ ಹಾಗೂ ಪ್ರದರ್ಶಕರಿಗೆ ಧನ್ಯವಾದಗಳು.ಶೀಘ್ರ ಹೊಸ ಪದಾಧಿಕಾರಿಗಳ ಜತೆ ಚರ್ಚಿಸಿ, ತುರ್ತಾಗಿ ಆಗಬೇಕಾದಕೆಲಸಗಳತ್ತ ಗಮನ ಹರಿಸುತ್ತೇವೆ.
-ಎನ್. ಎಂ. ಸುರೇಶ್, ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷ