ಆಳಂದ: ಭೀಮಾ ನದಿ ನೀರು ಅಮರ್ಜಾಕ್ಕೆ ತುಂಬಿಸುವಾಗ ಮಧ್ಯದಲ್ಲಿ ಸಿಗುವ ಏಳೆಂಟು ಕೆರೆಗಳನ್ನು ನೀರು ತುಂಬಿಸುವ ಯೋಜನೆ ಚಾಲ್ತಿಯಲ್ಲಿದೆ. ಅದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಕೆಲಸಗಳು ನಡೆಯುತ್ತಿವೆ ಎಂದು ಶಾಸಕ ಸುಭಾಷ್ ಗುತ್ತೇದಾರ ಹೇಳಿದರು.
ತಾಲೂಕಿನ ಕೊರಳ್ಳಿ ಸಮೀಪದ ಅಮರ್ಜಾ ಅಣೆಕಟ್ಟೆ ತುಂಬಿದ ಪ್ರಯುಕ್ತ ಬಾಗಿನ ಅರ್ಪಿಸಿ ಮಾತನಾಡಿದರು. ಈ ಯೋಜನೆಯಿಂದ ಸಾವಿರಾರು ಎಕರೆ ಬೆಳೆಗಳಿಗೆ ನೀರು ಮತ್ತು ಆಳಂದ ಮತ್ತು ಕೇಂದ್ರೀಯ ವಿವಿಗೆ ಕುಡಿಯುವ ನೀರಿನ ಸೌಲಭ್ಯ ದೊರೆತಿದೆ. ಹೀಗಾಗಿ ಅಮರ್ಜಾ ಜೀವನಾಡಿಯಾಗಿದೆ. ಅಣೆಕಟ್ಟೆಯ ಆರಂಭಿಕ ವೆಚ್ಚ ಕೇವಲ 5 ಕೋಟಿಯಿತ್ತು. ಆದರೆ ಬರು ಬರುತ್ತಾ ಅದು 500ಕ್ಕೂ ಕೋಟಿಗೂ ಮಿಕ್ಕಿ ಖರ್ಚು ಆಗಿ ಈಗ ಜನ ಸೇವೆಗೆ ಲಭ್ಯವಾಗಿದೆ ಎಂದರು.
ಅಮರ್ಜಾ ಅಣೆಕಟ್ಟಿನ ನಿರ್ಮಾಣದ ಹಿಂದೆ ಮಾಜಿ ಶಾಸಕರಾದ ಅಣ್ಣಾರಾವ ಪಾಟೀಲ ಕೊರಳ್ಳಿ ಹಾಗೂ ಅಣ್ಣಾರಾವ ವೀರಭದ್ರಪ್ಪ ಪಾಟೀಲ ಶ್ರಮ ಅಡಗಿದೆ. ಅದಕ್ಕೆ ನೀರೆರೆದು ಪೋಷಿಸಿದವರು ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು. ಭೀಮಾದಿಂದ ಅಮರ್ಜಾ ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ. ಅದು ಈ ಅವಧಿಯಲ್ಲಿಯೇ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.
ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾವ ಮಲಾಜಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಗುರುಶಾಂತ ಪಾಟೀಲ ನಿಂಬಾಳ, ಮಾಜಿ ಸದಸ್ಯ ವೀರಣ್ಣ ಮಂಗಾಣೆ, ಮಲ್ಲಣ್ಣ ನಾಗೂರೆ, ಅಶೋಕ ಗುತ್ತೇದಾರ, ತಹಶೀಲ್ದಾರ್ ದಯಾನಂದ ಪಾಟೀಲ, ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಪಿಎಸ್‌ಐ ಮಹಾಂತೇಶ ಪಾಟೀಲ, ಕೆಎನ್‌ಎನ್‌ಎಲ್ ನಿಗಮದ ಅಧಿಕಾರಿ,ಪುರಸಭೆ ಮುಖ್ಯಾಧಿಕಾರಿ ಬಾಬುರಾವ ಪಾಟೀಲ, ಆನಂದರಾವ ಪಾಟೀಲ ಕೊರಳ್ಳಿ, ಪುರಸಭೆ ಸದಸ್ಯರಾದ ವೀರಣ್ಣ ಹತ್ತರಕಿ, ಸೋಮು ಹತ್ತರಕಿ, ಸಂತೋಷ ಹೂಗಾರ, ಶ್ರೀಶೈಲ ಪಾಟೀಲ, ಸಿದ್ದು
ಪೂಜಾರಿ, ಮೃತ್ಯುಂಜಯ ಆಲೂರೆ, ಸಂದೀಪ ಪಾತ್ರೆ, ಮೀರು ಶೇಖ, ರಮ್ಮು ಅನ್ಸಾರಿ, ಮಹಿಬೂಬ್ ತೇಲಾಕುಣಿ ಇತರರು ಇದ್ದರು.