ಬೇಲೂರು: ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಜೀವನದಿ ಯಗಚಿ ಜಲಾಶಯ ತನ್ನ ಒಡಲು ತುಂಬಿ ಕೊಂಡಿದ್ದು ಯಗಚಿಯನ್ನು ನಂಬಿರುವ ಅನ್ನದಾತರು ಹಾಗೂ ಲಕ್ಷಾಂತರ ಜನರಲ್ಲಿ ಅಪಾರ ಸಂತೋಷ ಮೂಡಿದ್ದು, ಹೆಚ್ಚುವರಿ ನೀರನ್ನು ಐದು ಕ್ರಸ್ಟ್‌ಗೇಟ್‌ಗಳ ಮೂಲಕ ನೀರು ಹರಿಸಲಾಗುತ್ತಿದೆ.
ಯಗಚಿ ರಾಜ್ಯದ ಪಶ್ಚಿಮಘಟ್ಟದ ಮಲೆನಾಡು ಭೂಪ್ರದೇಶದಲ್ಲಿ ಹರಿಯುವ ನದಿ, ಹೇಮಾವತಿಗೆ ಉಪನದಿಯಾಗಿದೆ. ಕಾμನಾಡಿನಲ್ಲಿ ಹುಟ್ಟಿ ದಕ್ಷಿಣ ಭಾಗಕ್ಕೆ ಹರಿ ಯುವ ಯಗಚಿ ಹಾಸನದ ಗೊರೂರು ಬಳಿಯ ಹೇಮಾವತಿ ಡ್ಯಾಂಗೆ ಸೇರುತ್ತದೆ. ಜಲಾಶಯ ಸಮುದ್ರ ಮಟ್ಟದಿಂದ 965 ಅಡಿ ಎತ್ತವಿರದ್ದು, ಒಟ್ಟು 3.60 ಟಿಎಂಸಿ ಸಾಮಾರ್ಥ್ಯ ಇರುವ ಜಲಾಶಯದಲ್ಲಿ ಕಳೆದೊಂದು ವಾರದಿಂದ ಧಾರಾಕಾರವಾಗಿ ಎಡಬಿಡದೆ ಸುರಿದ ಮಳೆಯಿಂದ ಅಣ್ಣೆಕಟ್ಟೆ ಭರ್ತಿಯಾಗಿದೆ ಡ್ಯಾಂಗೆ ಸುಮಾರು 2535 ಕ್ಯೂಸೆಕ್ ನೀರು ಹರಿದು ಬರುತ್ತಿದೆ.ಅಣ್ಣೆಕಟ್ಟೆಯ ಐದು ಕ್ರೆಸ್ಟ್ ಗೇಟಿನ ಮೂ ಲಕ 2500 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಯಿತು.
3.603 ಟಿಎಂಸಿ ನೀರು ಸಂಗ್ರಹ ಸಾರ್ಮಥ್ಯ: ಜುಲೈ ತಿಂಗಳಿಂದ ತಾಲೂಕಿನ ಮಲೆನಾಡು ಪ್ರದೇಶಗಳಾದ ಅರೇಹಳ್ಳಿ, ಬಿಕ್ಕೂಡು, ಗೆಂಡೇಹಳ್ಳಿ. ಬೇಲೂರು ಪಟ್ಟಣ, ಹಳೇಬೀಡು ಮತ್ತು ಮಾದಿಹಳ್ಳಿ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.
ಜಲಾಶಯದ ಒಳ ಹರಿವು ಹೆಚ್ಚುತ್ತಿದೆ ಅಲ್ಲದೆ ಯಗಚಿ ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು ಆಲ್ದೂರು ಭಾಗಗಳಲ್ಲಿ ಮಳೆ ಬೀಳುತ್ತಿರುವುದರಿಂದ ಜಲಾಶಯದಲ್ಲಿ ನೀರು ಸಂಗ್ರಹವಾಗುತ್ತಿದೆ. 964. 603 ಮೀಟರ್ ಎತ್ತರವಿರುವ ಅಣೆಕಟ್ಟೆಯಲ್ಲಿ 3.603 ಟಿಎಂಸಿ ನೀರು ಸಂಗ್ರಹದ ಸಾರ್ಮಥ್ಯ ಹೊಂದಿರುವ ಜಲಾಶಯದಲ್ಲಿ 3.416 ಟಿ.ಎಂ.ಸಿ ನೀರು ಸಂಗ್ರಹ ವಾಗಿದ್ದು 2535 ಕ್ಯೂಸೆಕ್ ನೀರು ಒಳ ಹರಿವು, 2500 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ.
ಮಳೆ ವಿವರ: ತಾಲೂಕಿನಾದ್ಯಂತ ಜು.1ರಿಂದ 14ವರೆಗೆ 1496.6 ಮಿ.ಮೀ. ಮಳೆಯಾಗಿದ್ದು ಬೇಲೂರು 173.2, ಹಳೇಬೀಡು 100.9, ಹಗರೆ 155.2, ಬಿಕ್ಕೋ ಡು 295, ಗೆಂಡೆಹಳ್ಳಿ 307.5, ಅರೇಹಳ್ಳಿ 464..8 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.
ತಾಲೂಕಿನಲ್ಲಿ ವರ್ಷದಲ್ಲಿ 1031 ಮಿ.ಮೀ. ವಾಡಿಕೆ ಮಳೆ ಬರಬೇಕಿದ್ದು, 14ರವರೆಗೆ ಸಾರಾಸರಿ 3618.6 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದ್ದು, ಇದುವರವಿಗೂ ಹೋಬಳಿವಾರು ಬಿದ್ದಿರುವ ಮಳೆ ವಿವರ ಇಂತಿದೆ. ಬೇಲೂರು 502.3 ಹಳೇಬೀಡು 444.5 ಹಗರೆ 552ಬೀಕ್ಕೂಡು 480.4ಗೆಂಡೆಹಳ್ಳಿ 600 ಅರೇಹಳ್ಳಿ 522.6 ಮಿ.ಮಿ ಮಳೆಯಾಗಿರುವ ವರದಿಯಾಗಿದೆ.
● ಡಿ.ಬಿ.ಮೋಹನ್ ಕುಮಾರ್