Advertisement

ಭರ್ತಿಯಾದ ಹಿರೇಹಳ್ಳ ಜಲಾಶಯ

02:18 PM Oct 09, 2019 | Suhan S |

ಕೊಪ್ಪಳ: ಎಲ್ಲೆಡೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಕಿನ್ನಾಳ ಸಮೀಪದ ಹಿರೇಹಳ್ಳ ಮಿನಿ ಜಲಾಶಯ ಮೈದುಂಬಿಕೊಂಡಿದೆ. ಮಿನಿ ಡ್ಯಾಂಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಹಳ್ಳದ ಪಾತ್ರಗಳಿಗೆ ಸೋಮವಾರದಿಂದ 600 ಕ್ಯೂಸೆಕ್‌ನಷ್ಟು ನೀರನ್ನು ಹರಿ ಬಿಡಲಾಗಿದೆ.

Advertisement

ಹಿರೇಹಳ್ಳ ಮಿನಿ ಜಲಾಶಯವು 1.62 ಟಿಎಂಸಿಯಷ್ಟು ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ವಿವಿಧ ಭಾಗದಲ್ಲಿ ಸ್ವಲ್ಪ ಮಳೆಯಾದರೂ ಡ್ಯಾಂ ತುಂಬಿಕೊಳ್ಳಲಿದೆ. ಇದರಿಂದ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಸುಮಾರು 6 ಸಾವಿರ ಹೆಕ್ಟೇರ್‌ ಪ್ರದೇಶದಷ್ಟು ನೀರಾವರಿ ಪ್ರದೇಶವಿದ್ದು, ರೈತ ಸಮೂಹಕ್ಕೆ ಖುಷಿ ತಂದಿದೆ.

ಕೊಪ್ಪಳ ಜಿಲ್ಲೆ ಮೊದಲೇ ಬರಪೀಡಿತ ಪ್ರದೇಶವಾಗಿದೆ. ಮಳೆಯ ಕೊರತೆಯಿಂದ ರೈತರು ಪ್ರತಿ ವರ್ಷ ಸಂಕಷ್ಟ ಎದುರಿಸುತ್ತಿದ್ದರು. ಈ ವರ್ಷ ಮುಂಗಾರಿಗಿಂತ ಹಿಂಗಾರಿ ಮಳೆಯ ಆರ್ಭಟ ಜೋರಾಗಿದೆ. ಪ್ರತಿ ಬಾರಿ ತುಂಗಭದ್ರಾ ಜಲಾಶಯ ತುಂಬುವುದು ಯಾವಾಗ ಎಂದು ಜನತೆ ಕಾತುರದಿಂದ ಕಾದು ನೋಡುತ್ತಿದ್ದರು. ಆದರೆ ಹಿರೇಹಳ್ಳದ ಮಿನಿ ಜಲಾಶಯದ ಕಡೆ ಜನರ ಕಾಳಜಿ ಕಡಿಮೆ ಇತ್ತು. ಪ್ರತಿ ವರ್ಷವೂ ಮಿನಿ ಜಲಾಶಯ ತುಂಬಿಕೊಳ್ಳುತ್ತಿದೆ.  ಕಳೆದ ಮೂರು ವರ್ಷದಲ್ಲಿ ಈ ಬಾರಿ ಮಾತ್ರ ಗೇಟ್‌ ಮೂಲಕ ನೀರನ್ನು ಹರಿ ಬಿಡಲಾಗಿದೆ. ಮಿನಿ ಜಲಾಶಯದ ಪಾತ್ರಗಳಲ್ಲಿ ಅತ್ಯಧಿ ಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಿನಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಿದೆ.

600 ಕ್ಯೂಸೆಕ್‌ ನೀರು ಹೊರಕ್ಕೆ: ಮಳೆ ಹಿನ್ನೆಲೆಯಲ್ಲಿ ಮಿನಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಸೋಮವಾರ ಮಧ್ಯಾಹ್ನ 3 ಗಂಟೆಗೆ 600 ಕ್ಯೂಸೆಕ್‌ನಷ್ಟು ನೀರನ್ನು ಹಳ್ಳದ ಪಾತ್ರಗಳಿಗೆ ಹರಿ ಬಿಟ್ಟಿದ್ದಾರೆ. ಅಲ್ಲದೇ, ಮಾದಿನೂರು, ಕಿನ್ನಾಳ, ಭಾಗ್ಯನಗರ ಸೇರಿದಂತೆ ಇತರೆ ಹಳ್ಳಿಗಳ ಜನತೆ ಹಳ್ಳದ ಬಳಿ ತೆರಳದಂತೆ ಜಾಗೃತಿವಹಿಸಿ ಸಂಚಾರ ನಡೆಸುವಂತೆಯೂ ಇಲಾಖೆ ಅಧಿಕಾರಿಗಳು ಕಟ್ಟೆಚ್ಚರ ನೀಡಿದ್ದಾರೆ. ಅಲ್ಲದೆ ನೀರಿನ ಹರಿವಿನ ಆಧಾರದಲ್ಲಿ ಯಾವ ಸಂದರ್ಭದಲ್ಲೂ ಬೇಕಾದರೂ ನೀರನ್ನು ಹರಿ ಬಿಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next