ಹಾಸನ: ಕೊರೊನಾ ಸೋಂಕಿತರಿಗೆಚಿಕಿತ್ಸೆಗೆ ನಿಗದಿಯಾಗಿರುವ ಹಾಸನವೈದ್ಯಕೀಯ ಕಾಲೇಜು (ಹಿಮ್ಸ್) ಆಸ್ಪತ್ರೆಯಲ್ಲಿ ಈಗ ಹಾಸಿಗೆಗಳೆಲ್ಲ ಭರ್ತಿಯಾಗಿವೆ. ಆಸ್ಪತ್ರೆ ಹೊರಗೆ ಹಾಸಿಗೆಗಳು ಖಾಲಿಇಲ್ಲ ಎಂದು ಫಲಕ ಅಳವಡಿಸಲಾಗಿದೆ.
ಹೆಚ್ಚಿದ ಆತಂಕ:ಹಿಮ್ಸ್ ಆಸ್ಪತ್ರೆಯಲ್ಲಿಆಕ್ಸಿಜನ್ ಹರಿವಿನ ಹಾಸಿಗೆಗಳ ಸಂಖ್ಯೆ400. ಈಗ ಎಲ್ಲ 400 ಹಾಸಿಗೆಗಳೂಭರ್ತಿಯಾಗಿವೆ. ಐಸಿಯು ಹಾಸಿಗೆಗಳಸಂಖ್ಯೆ 60. ವೆಂಟಿ ಲೇಟರ್‌ಗಳ ಸಂಖ್ಯೆ55. ಐಸಿಯು, ವೆಂಟಿಲೇಟರ್ ಕೂಡಭರ್ತಿಯಾಗಿವೆ. ಸದ್ಯಕ್ಕೆ ಆಕ್ಸಿಜನ್‌ಕೊರತೆಯಿಲ್ಲ.
ಆಸ್ಪತ್ರೆ ಆವರಣದಲ್ಲಿಯೇ13,000 ಲೀಟರ್ ಆಕ್ಸಿಜನ್ ಪ್ಲಾಂಟ್‌ಇದೆ. ಹಾಸನದಲ್ಲಿ 2 – 3 ಖಾಸಗಿ ಆಕ್ಸಿಜನ್ ಪ್ಲಾಂಟ್‌ಗಳಿದ್ದು, ಹೊರ ಜಿಲ್ಲೆಗಳಿಗೂ ಆಕ್ಸಿಜನ್ ಸರಬ ರಾಜಾ ಗುತ್ತಿದೆ.ಆದರೆ ಈಗ ಆಸ್ಪತ್ರೆಗಳಲ್ಲಿ ಹಾಸಿಗೆಗಳುಕೊರತೆಯಿದ್ದು, ವಿಶೇಷ ವಾಗಿ ಆಕ್ಸಿಜನ್‌ಹರಿವಿನ ಹಾಸಿಗೆಗಳ ಕೊರತೆ ಇರುವುದುಆತಂಕವನ್ನುಂಟು ಮಾಡಿದೆ.ನಗರದ ತಣ್ಣೀರುಹಳ್ಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್‌ಡಿಎಂ)ಆಯುರ್ವೇದ ಕಾಲೇಜು ಆಸ್ಪತ್ರೆಯನ್ನು ಕೊರೊನಾ ಕೇರ್ ಸೆಂಟರ್‌ಮಾಡಲಾಗಿದ್ದು, ಅಲ್ಲಿ 300 ಹಾಸಿಗೆಗಳವ್ಯವಸ್ಥೆ ಮಾಡಲಾಗಿದೆ.
ಅದರೆ ಅಲ್ಲಿಆಕ್ಸಿ ಜನ್ ವ್ಯವಸ್ಥೆ ಇಲ್ಲ. ತುರ್ತು ಚಿಕಿತ್ಸೆಅಗತ್ಯವಿಲ್ಲದ ಸೋಂಕಿತರನ್ನು ಎಸ್‌ಡಿಎಂ ಆಸ್ಪತ್ರೆಯ ಕೊರೊನಾ ಕೇರ್‌ಸೆಂಟರ್‌ಗೆ ಕಳುಹಿಸಲಾಗುತ್ತಿದೆ. ಇನ್ನುಒಂದೆರಡು ದಿನಗಳಲ್ಲಿ ಅಲ್ಲಿಯೂಹಾಸಿಗೆಗಳು ಭರ್ತಿಯಾಗಲಿದ್ದು,ಮುಂದೇನು ಎಂಬ ಚಿಂತೆ ಕಾಡುತ್ತಿದೆ.
200 ಹೆಚ್ಚುವರಿ ಹಾಸಿಗೆ: ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಹಿಮ್ಸ್ ಆಸ್ಪತ್ರೆಯಲ್ಲಿ 400 ಹಾಸಿಗೆಗಳ ಜತೆಗೆ ಹೆಚ್ಚು ವರಿ200 ಹಾಸಿಗೆಗಳನ್ನು ಕೊರೊನಾ ಸೋಂಕಿತರಿಗೆ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ.
ರೆಮ್‌ಡೆಸಿವಿಯರ್ ಇಂಜೆಕ್ಷನ್ ಅಗತ್ಯವಿರುವ ಸೋಂಕಿತರನ್ನುಐವರು ತಜ್ಞರ ಸಮಿತಿ ತೀರ್ಮಾನಿಸಲಿದ್ದು,ಸಮಿತಿ ತೀರ್ಮಾನಿಸಿ ದ ಮರುದಿನದಿಂದಲೇ ಅಗತ್ಯವಿರು ವವ ರಿಗೆಇಂಜೆಕ್ಷನ್ ಕೊಡುವ ವ್ಯವಸ್ಥೆ ಜಾರಿಗೆನಿರ್ಧರಿಸಲಾಯಿತು. ಅಲ್ಲದೇ, ಹಾಸ್ಟೆಲ್‌ಗಳಲ್ಲಿ ಕೊರೊನಾ ಕೇರ್ ಸೆಂಟರ್ ತೆರೆಯಲು ತೀರ್ಮಾನಿಸ ಲಾ ಗಿದೆ ಎಂದುಶಾಸಕ ಪ್ರೀತಂ ಜೆ.ಗೌಡ ಸಭೆಯ ನಂತರಸುದ್ದಿಗಾರರಿಗೆ ತಿಳಿಸಿದರು.