Advertisement

ಗೋಣಿ ಚೀಲದಲ್ಲಿ ತುಂಬಿಸಿ ಅಕ್ರಮ ಮರಳು ದಂಧೆ

05:42 AM May 14, 2019 | mahesh |

ಉಪ್ಪಿನಂಗಡಿ: ನೇತ್ರಾವರಿ ನದಿ ಕಿನಾರೆಯಲ್ಲಿ ಗೋಣಿ ಚೀಲಗಳಲ್ಲಿ ಮರಳು ತುಂಬಿಸಿ ಮಾರಾಟ ಮಾಡುವ ಅಕ್ರಮ ದಂಧೆ ನಿರಂತರವಾಗಿ ನಡೆಯುತ್ತಿರುವ ದೂರುಗಳು ಕೇಳಿ ಬರುತ್ತಿವೆ.

Advertisement

ರಾಷ್ಟ್ರೀಯ ಹೆದ್ದಾರಿ 75ರ ಸನಿಹದಲ್ಲಿರುವ ಮುಗೇರಡ್ಕಕ್ಕೆ ತೆರಳುವ ಹಾದಿಯಲ್ಲಿ ನದಿ ಪಾತ್ರದಿಂದ ದಿನನಿತ್ಯ ಜೀಪು ಹಾಗೂ ಪಿಕಪ್‌ಗ್ಳಲ್ಲಿ ಈ ಮರಳು ಸಾಗಾಟವಾಗುತ್ತಿದೆ. ದಿನನಿತ್ಯ ಹಗಲು-ರಾತ್ರಿ ಎನ್ನದೆ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಗೋಣಿ ಚೀಲಕ್ಕೆ ಮರಳು ತುಂಬಿಸಿ ಸಾಗಾಟ ಮಾಡಲಾಗುತ್ತಿದೆ.

ಈ ದಂಧೆಯ ಮೂಲಕ ನಿತ್ಯ 50ಕ್ಕೂ ಅಧಿಕ ವಾಹನಗಳಲ್ಲಿ ಮರಳು ಸಾಗಾಟವಾಗುತ್ತಿದೆ. ಈ ಗೋಣಿ ಚೀಲಗಳಲ್ಲಿ ತುಂಬಿಸಿದ ಮರಳನ್ನು ಬದಲಿ ಜಾಗದಲ್ಲಿ ಸಂಗ್ರಹಿಸಿ ಬಳಿಕ ಘನ ವಾಹನಗಳಲ್ಲಿ ಸಾಗಿಸಲಾಗುತ್ತಿದೆ. ಇಂತಹ ದಂಧೆಯನ್ನು ಬಜತ್ತೂರು ಗ್ರಾಮದ ವಳಾಲು ಮೂಲದ ವ್ಯಕ್ತಿಯೋರ್ವರು ನಡೆಸುತ್ತಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಚೀಲಗಳಿಗೆ ಮರಳು ತುಂಬಿಸುವ ದೃಶ್ಯ ಕಂಡರೆ ಬಡವರು ಸಣ್ಣಪುಟ್ಟ ಮನೆ ಕಟ್ಟಲು ಮರಳು ಒಯ್ಯುತ್ತಿದ್ದಾರಾ ಎನ್ನುವ ಕನಿಕರ ಹುಟ್ಟಿಕೊಳ್ಳುವಂತೆ ಮಾಡುತ್ತದೆ. ಆದರೆ ಇಲ್ಲಿ ನಡೆಯುತ್ತಿರುವುದು ಅಕ್ರಮ ದಂಧೆ ಎಂಬುದು ಹೆಚ್ಚಿನವರ ಗಮನಕ್ಕೆ ಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next