Advertisement

ಹಾಲಿ-ಮಾಜಿ ಶಾಸಕ ರಿಂದ ನಾಮಪತ್ರ ಸಲ್ಲಿಕೆ

12:51 PM Apr 20, 2018 | Team Udayavani |

ಹೊನ್ನಾಳಿ: ವಿಧಾನಸಭಾ ಚುನಾವಣೆಗೆ ದಾವಣಗೆರೆ ಜಿಲ್ಲೆ ಹೊನ್ನಾಳಿ-110 ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ 3 ನಾಮಪತ್ರಗಳು ಸಲ್ಲಿಕೆಯಾಗಿವೆ. ಬೆಳಗ್ಗೆ 11ಕ್ಕೆ ಕಾಂಗ್ರೆಸ್‌ ಪಕ್ಷದ ಶಾಸಕ ಡಿ.ಜಿ. ಶಾಂತನಗೌಡ ನಾಲ್ವರು ಬೆಂಬಲಿಗರೊಂದಿಗೆ ತಾಲೂಕು ಕಚೇರಿ
ಚುನಾವಣಾಧಿಕಾರಿಗಳ ಸಭಾಂಗಣಕ್ಕೆ ಆಗಮಿಸಿ ತಮ್ಮ ನಾಮಪತ್ರ ಸಲ್ಲಿಸಿದರು.

Advertisement

ಏ. 23ರಂದು ಅವರು ಮತ್ತೂಂದು ನಾಮಪತ್ರ ಸಲ್ಲಿಸಲಿದ್ದಾರೆ. ಮಧ್ಯಾಹ್ನ 12ರ ನಂತರ ಮಾಜಿ ಸಚಿವ, ಬಿಜೆಪಿ ಪಕ್ಷದ ಎಂ.ಪಿ. ರೇಣುಕಾಚಾರ್ಯ ಅಪಾರ ಕಾರ್ಯಕರ್ತರ ಜತೆ ತಾಲೂಕು ಕಚೇರಿಗೆ ಆಗಮಿಸಿದರು. ನಂತರ ನಾಲ್ಕು ಮಂದಿ ಬೆಂಬಲಿಗರೊಂದಿಗೆ ಚುನಾವಣಾಧಿ ಕಾರಿ ಬಸವನಗೌಡ ಅವರಿಗೆ ನಾಮಪತ್ರ ಸಲ್ಲಿಸಿದರು.

ರೇಣುಕಾಚಾರ್ಯ ಅವರು ಏ. 24ರಂದು ಮತ್ತೂಂದು ನಾಮಪತ್ರ ಸಲ್ಲಿಸಲಿದ್ದಾರೆ. ಇವರಿಬ್ಬರ ನಾಮಪತ್ರಗಳಲ್ಲಿ , ಬಿ ಫಾರಂ, ಆಸ್ತಿ ಘೋಷಣೆ ಇರಲಿಲ್ಲ. ಇನ್ನೊಮ್ಮೆ ನಾಮಪತ್ರ ಸಲ್ಲಿಕೆ ವೇಳೆ ಎಲ್ಲ ದಾಖಲೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಭ್ರಷ್ಟಾಚಾರ ವಿರೋಧಿ ವೇದಿಕೆ ರಾಜ್ಯಾಧ್ಯಕ್ಷ ಗುರುಪಾದಯ್ಯ ಕಬ್ಬಿಣಕಂತಿಮಠ ಆಗಮಿಸಿ ಪಕ್ಷೇತರ ಅಭ್ಯರ್ಥಿಯಾಗಿ
ನಾಮಪತ್ರ ಸಲ್ಲಿಸಿದರು.

ಗುರುಪಾದಯ್ಯ ಕೂಡ ಏ. 20ರಂದು ಸಕಲ ದಾಖಲೆಗಳೊಂದಿಗೆ ಮತ್ತೆ ನಾಮಪತ್ರ ಸಲ್ಲಿಸಲಿದ್ದಾರೆ. ಸಹಾಯಕ ಚುನಾವಣಾಧಿಕಾರಿ ತುಷಾರ್‌ ಬಿ.ಹೊಸೂರು ಇದ್ದರು. ಸಿಪಿಐ ಜೆ. ರಮೇಶ್‌ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. 

ಮೊದಲ ಹಂತದಲ್ಲಿ ಹೊನ್ನಾಳಿಗೆ 100 ಜನರ ಸಿಆರ್‌ಪಿಎಫ್‌ ತಂಡ
ಹೊನ್ನಾಳಿ:
ಹೊನ್ನಾಳಿ ವಿಧಾನಸಭಾ ಕ್ಷೇತ್ರ ಅತೀ ಸೂಕ್ಷ್ಮ ಪ್ರದೇಶ ಆಗಿರುವುದರಿಂದ ಈಗಾಗಲೇ ಮೊದಲ ಹಂತದಲ್ಲಿ 100 ಜನರ ಸಿಆರ್‌ಪಿಎಫ್‌ ಪಡೆ ತಾಲೂಕಿಗೆ ಬಂದಿಳಿದಿದೆ ಎಂದು ಸಿಪಿಐ ರಮೇಶ್‌. ಜೆ ತಿಳಿಸಿದರು. ಗುರುವಾರ ತಾಲೂಕು ಕಚೇರಿ ಆವರಣದಲ್ಲಿ ಸ್ಥಳೀಯ ಪೊಲೀಸರೊಂದಿಗೆ ಸಿಆರ್‌ಪಿಎಫ್‌ ಪಡೆಯನ್ನು ಭದ್ರತೆಗೆ ನಿಯೋಜಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

Advertisement

ತಾಲೂಕಿನ ಗಡಿ ಭಾಗಗಳಾದ ಹೊಳೆಹರಳಹಳ್ಳಿ ಗೇಟ್‌, ಸವಳಂಗ, ಗೊಲ್ಲರಹಳ್ಳಿ, ಟಿ.ಗೋಪಗೊಂಡನಹಳ್ಳಿ ಹಾಗೂ ಲಿಂಗಾಪುರ ಬಳಿ ಚೆಕ್‌ಪೋಸ್ಟ್‌ ಪ್ರಾರಂಭಿಸಲಾಗಿದ್ದು, ಅಲ್ಲಿಯೂ ಸಹ ಕೇಂದ್ರ ಮೀಸಲು ಪಡೆಯನ್ನು ನಿಯುಕ್ತಿಗೊಳಿಸಲಾಗಿದೆ ಎಂದು ತಿಳಿಸಿದರು. ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿ ಜೊತೆ ನಾಲ್ವರನ್ನು ಹೊರತುಪಡಿಸಿ ಯಾರಿಗೂ ಸಹ 100 ಮೀಟರ್‌ ಒಳಗೆ ಪ್ರವೇಶ ಇಲ್ಲ. ಯಾರೇ ಕಾರ್ಯಕರ್ತರಿರಲಿ, ಅವರೆಲ್ಲ 100 ಮೀಟರ್‌ ಹೊರಗೆ ಇರಬೇಕು ಎಂದರು.

ನಾಮಪತ್ರ ಸಲ್ಲಿಸುವಾಗ, ಚುನಾವಣೆ ಪ್ರಚಾರದ ವೇಳೆ ಹಾಗೂ ಇನ್ನಿತರ ಸಭೆ ಸಮಾರಂಭಗಳು ನಡೆಸುವಾಗ ಅನಗತ್ಯವಾಗಿ ಗೊಂದಲವನ್ನುಂಟು ಮಾಡುವ ಅಥವಾ ಕಾನೂನು ಭಂಗ ಮಾಡುವ ಯಾರೇ ಆದರೂ ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ತಾಲೂಕಿನಲ್ಲಿರುವ ಸೂಕ್ಷ್ಮ, ಅತೀ ಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಗಳ ಬಗ್ಗೆ ಚುನಾವಣಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದರು  

Advertisement

Udayavani is now on Telegram. Click here to join our channel and stay updated with the latest news.

Next