Advertisement

ಬಂಡೀಪುರದಲ್ಲಿ ರಾತ್ರಿ ಸಫಾರಿ: ಚಿತ್ರನಟ ಧನ್ವೀರ್ ವಿರುದ್ದ ಪ್ರಕರಣ ದಾಖಲು

06:31 PM Oct 24, 2020 | Mithun PG |

ಹುಣಸೂರು: ನಾಗರಹೊಳೆ ಉದ್ಯಾನದ ಮತ್ತಿಗೋಡು ಸಾಕಾನೆ ಶಿಬಿರದ ಆನೆ ಮಹೇಂದ್ರನ ಮೇಲೆ ಕುಳಿತು ವಿಡಿಯೋ ಮಾಡಿ ವೈರಲ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟ ಧನ್ವಿರ್ ವಿರುದ್ದ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಉದ್ಯಾನದ ಹುಲಿಯೋಜನೆ ನಿರ್ದೇಶಕ ಡಿ ಮಹೇಶ್ ಕುಮಾರ್ ತಿಳಿಸಿದ್ದಾರೆ.

Advertisement

2020ರ ಆಕ್ಟೋಬರ್ 23 ರಂದು ಚಿತ್ರನಟ ಧನ್ವೀರ್ ಸಾಕಾನೆ ಮಹೇಂದ್ರನ ಮೇಲೆ ಕುಳಿತಿರುವ ವಿಡಿಯೋ ವೈರಲ್ ಆಗಿದ್ದು ವನ್ಯಜೀವಿ ಪ್ರೀಯರ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಬಗ್ಗೆ ಮಾಹಿತಿ ಪಡೆದ ಡಿ.ಸಿ.ಎಫ್. ರವರು ಧನ್ವೀರ್. ವಿಶ್ವಾಸ್ ಐಯ್ಯರ್. ದರ್ಶನ್ ಬಿನ್ ನಂದಕುಮಾರ್ ಮತ್ತಿತರ ಮೂವರ ವಿರುದ್ದ ವನ್ಯಜೀವಿ ಸಂರಕ್ಷಾಣಾ ಕಾಯ್ದೆ 1972 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು. ಅನಧಿಕೃತವಾಗಿ ಸರ್ಕಾರಿ ಮೀಸಲು ಅರಣ್ಯದ ಮತ್ತಿಗೋಡು ವಲಯದ ಸಾಕಾನೆ  ಮೇಲೆ ಕುಳಿತುಕೊಳ್ಳಲು ಸಹಕರಿಸಿದ ಬಗ್ಗೆ ಶಿಬಿರದ ಉಸ್ತುವಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನೋಟೀಸ್ ನೀಡಲಾಗಿದ್ದು. ಭಾಗಿಯಾಗಿರುವ ಸಿಬ್ಬಂದಿಗಳ ವಿರುದ್ದ ತನಿಖೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದೆಂದು ಉದಯವಾಣಿಗೆ ಡಿ.ಸಿ.ಎಫ್ ಮಹೇಶ್ ಕುಮಾರ್ ಮಾಹಿತಿ ನೀಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next