Advertisement

Rahul Gandhi: ರಾಹುಲ್‌ ಅನರ್ಹತೆ ರದ್ದು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ದಾವೆ ಸಲ್ಲಿಕೆ

10:29 PM Sep 05, 2023 | Team Udayavani |

ನವದೆಹಲಿ: ಕಾಂಗ್ರೆಸ್‌ನಾಯಕ ರಾಹುಲ್‌ ಗಾಂಧಿ ಅವರ ಸಂಸತ್‌ ಸದಸ್ಯ ಸ್ಥಾನದ ಅನರ್ಹತೆ ರದ್ದುಗೊಳಿಸಿ, ಅವರನ್ನು ಸದಸ್ಯರನ್ನಾಗಿ ಮರುಸ್ಥಾಪಿಸುವ ಲೋಕಸಭೆ ಕಾರ್ಯಾಲಯದ ಅಧಿಸೂಚನೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮಂಗಳವಾರ ದಾವೆಯೊಂದು ಸಲ್ಲಿಕೆಯಾಗಿದೆ. ಮಾನನಷ್ಟ ಪ್ರಕರಣವೊಂದರಲ್ಲಿ ದೋಷಿ ಎಂದು ಸಾಬೀತಾಗಿ, 2 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಬಳಿಕ ರಾಹುಲ್‌ ಅವರು ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದರು.

Advertisement

ಸಂಸದನ ವಿರುದ್ಧ ಇರುವ ಆರೋಪ ಖುಲಾಸೆಯಾಗದ ಹೊರತಾಗಿ ಆತನಿಗೆ ಹುದ್ದೆ ಮರಳಿಸಲು ಸಾಧ್ಯವಿಲ್ಲ. ಹೀಗಿರುವಾಗ ಲೋಕಸಭೆ ಕಾರ್ಯಾಲಯವು ಸದ್ಯಸತ್ವ ಮರುಸ್ಥಾಪಿಸಿದ್ದು ಹೇಗೆ , ಅಲ್ಲದೇ, ನಿಗದಿತ ಸಂಸದರ ಅನರ್ಹತೆಯನ್ನು ರದ್ದುಗೊಳಿಸಿ ಸಂಸತ್‌ಗೆ ವಾಪಸ್‌ ಬರಬಹುದು ಎಂದು ನಿರ್ಧರಿಸುವ ಅಧಿಕಾರ ಚುನಾವಣೆ ಆಯೋಗಕ್ಕಗಿದೆಯೋ ಅಥವಾ ಲೋಕಸಭೆಗೆ ಇದೆಯೋ ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಉತ್ತರ ಪ್ರದೇಶದ ಲಕ್ನೋ ಮೂಲದ ವಕೀಲರೊಬ್ಬರು ಈ ಅರ್ಜಿಯನ್ನು ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next