ಬಂಟ್ವಾಳ: ಕೆ.ಎಸ್.ಆರ್ .ಟಿ.ಸಿ.ಬಸ್ ನಲ್ಲಿ ಚಿಲ್ಲರೆ ವಿಚಾರಕ್ಕೆ ಕಂಡಕ್ಟರ್ ಓರ್ವ ಮಹಿಳಾ ಪ್ರಯಾಣಿಕೆ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾಗಲಕೋಟೆ ನಿವಾಸಿ ಕೆ.ಎಸ್.ಆರ್‌ಟಿಸಿ ಕಂಡೆಕ್ಟರ್ ರಾಜು ಎಂಬವರ ಮೇಲೆ ದೂರು ನೀಡಲಾಗಿದೆ.
ಘಟನೆಯ ವಿವರ: ಪ್ರೀತಂ ಎಂಬ ಮಹಿಳೆ ಮಂಗಳೂರು ಪಂಪ್ ವೆಲ್ ಎಂಬಲ್ಲಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಹತ್ತಿ ಬಿಸಿರೋಡಿಗೆ ಟಿಕೆಟ್ ಪಡೆಯುತ್ತಾರೆ. ಪ್ರತಿ ದಿನ ಇವರು ಬಸ್ ನಲ್ಲಿ ಪ್ರಯಾಣಿಸುವ ಮಹಿಳೆ ಆ ಕಾರಣಕ್ಕಾಗಿ ಟಿಕೆಟ್ ಬೆಲೆ ಕೂಡ ಗೊತ್ತಿತ್ತು . ಮಂಗಳೂರು- ಬಿಸಿರೋಡು 26 ರೂ. ಟಿಕೆಟ್ ಗಾಗಿ ಅವರ ಬಳಿ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ 106 ರೂ ನೀಡಿದ್ದಾರೆ. ಆದರೆ ಟಿಕೆಟ್ ನೀಡಿದ ಕಂಡಕ್ಟರ್ ಚಿಲ್ಲರೆ ಕೊಡಿ ಎಂದು ಕೇಳಿದಾಗ ನನ್ನ ಬಳಿ ಚಿಲ್ಲರೆ ಇಲ್ಲ ಹಾಗಾಗಿ 106 ನೀಡಿದ್ದೇನೆ ಎಂದು ಸೌಮ್ಯವಾಗಿ ತಿಳಿಸಿದ್ದಾರೆ. ಆದರೆ ಮಹಿಳಾ ಪ್ರಯಾಣಿಕೆಯ ಮಾತಿಗೆ ಬೆಲೆ ಕೊಡದೆ ಚಿಲ್ಲರೆ ಇಲ್ಲದೆ ಯಾಕೆ ಬರುತ್ತೀರಿ ಎಂದು ಇಲ್ಲ ಸಲ್ಲದ ಅವ್ಯಾಚ್ಚ ಶಬ್ದಗಳಿಂದ ಬೈದು ಮಹಿಳಾ ಪ್ರಯಾಣಿಕೆಗೆ ನಿಂದನೆ ಮಾಡಿದ್ದಾನೆ,ಸಾಲದು ಎಂಬುದಕ್ಕೆ ಬಸ್ ನಲ್ಲಿರುವ ಸಹ ಪ್ರಯಾಣಿಕರಲ್ಲಿಯೂ ಈ ವಿಚಾರವಾಗಿ ಅನಗತ್ಯ ಮಾತುಗಳ ಮೂಲಕ ಪ್ರಯಾಣಿಕೆಯನ್ನು ನಿಂದಿಸಿ, ಬಳಿಕ ಪರಂಗಿಪೇಟೆಯಲ್ಲಿ ಬಸ್ ನಿಲ್ಲಿಸಿ ಬಲವಂತವಾಗಿಮಹಿಳಾ ಪ್ರಯಾಣಿಕೆಯನ್ನು ಅಲ್ಲಿರುವ ಪೊಲೀಸ್ ಔಟ್ ಪೋಸ್ಟ್ ಗೆ ಕರೆದುಕೊಂಡು ಹೋಗಿದ್ದಾನೆ. ಆದರೆ ಅಲ್ಲಿ ಹೋಗಿ ನೋಡಿದಾಗ ಯಾರು ಪೊಲೀಸರು ಇಲ್ಲದ ಕಾರಣ ವಾಪಾಸು ಬಸ್ ಮೂಲಕ ಬಿಸಿರೋಡಿಗೆ ಬಂದಿದ್ದಾರೆ.
ಬಿಸಿರೋಡು ವರೆಗೂ ಚಿಲ್ಲರೆ ಕೊಡದೆ ಸತಾಯಿಸಿದ ಕಂಡೆಕ್ಟರ್ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.