Advertisement

ಕ್ಯಾರಂಟೈನ್ ನಲ್ಲಿ ಇಡಲಾಗಿದ್ದ ಫಿಜಿ ರಗ್ಬಿ ಆಟಗಾರರು ಪರಾರಿ; ಮತ್ತೆ ಆಸ್ಪತ್ರೆಗೆ

09:02 AM Apr 07, 2020 | keerthan |

ಸುವಾ (ಫಿಜಿ): ಕೋವಿಡ್-19 ಮಹಾಮಾರಿ ಜಗತ್ತನ್ನು ಆವರಿಸಿರುವಾಗ, ಅದನ್ನು ನಿಗ್ರಹಿಸಲು ಪ್ರತಿಯೊಬ್ಬರೂ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ಇಂತಹ ಹೊತ್ತಿನಲ್ಲಿ ಕೆಲವೊಬ್ಬರು ತೋರುವ ಬೇಜವಾಬ್ದಾರಿಯಿಂದ ಒಂದಿಡೀ ಸಮುದಾಯವೇ ಅಪಾಉ ಎದುರಿಸಬೇಕಾಗುತ್ತದೆ. ಅಂತಹದೊಂದು ಬೇಜವಬ್ದಾರಿ ವರ್ತನೆ ತೋರಿದ್ದು ಫಿಜಿ ದೇಶದ ಇಬ್ಬರು ರಗ್ಬಿ ಆಟಗಾರರು.

Advertisement

ಕೋವಿಡ್-19 ಪರೀಕ್ಷೆ ಹಿನ್ನಲೆ ಆ ಇಬ್ಬರು ಆಟಗಾರರನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು. ಆದರೆ ಇಬ್ಬರು ದಿಢೀರನೆ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಒಡಿ ಹೋಗಿದ್ದಾರೆ. ಪೊಲೀಸರು ಜಾಗರೂಕರಾಗಿದ್ದರಿಂದ ಮತ್ತೆ ಹಿಡಿದು ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಇಬ್ಬರ ವಿರುದ್ಧ ಫಿಜಿ ರಗ್ಬಿ ಸಂಸ್ಥೆ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ವಿಶ್ವ ರಗ್ಬಿ ಸಂಸ್ಥೆ ಹೇಳಿದೆ.

ಇಬ್ಬರ ಹೆಸರನ್ನು ಬಹಿರಂಗಪಡಿಸಿಲ್ಲ. ಮಾಧ್ಯಮಗಳು ಮಾತ್ರ ಹಲವು ಊಹಾಪೋಹಗಳನ್ನು ಮಾಡಿದೆ. ಇವರಿಬ್ಬರು ಅಂತಾರಾಷ್ಟ್ರೀಯ  ಆಟಗಾರರು ಎನ್ನಲಾಗಿದೆ. ಫಿಜಿ ರಗ್ಬಿ ತಂಡ ವಿಶ್ವದಲ್ಲಿ ಬಲಿಷ್ಠ ತಂಡ. ಒಲಿಂಪಿಕ್ಸ್ ವಿಜೇತ ತಂಡವದು. ರಗ್ಬಿ ವಿಶ್ವ ಸರಣಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಇಂತಹ ತಂಡದ ಆಟಗಾರರು ಬೇಜವಬ್ದಾರಿ ತೋರಿಸಿದ್ದರಿಂದಲೇ ಈಗ ಇಡೀ ದೇಶ ಅಪಾಯದಲ್ಲಿದೆ ಎಂದು ಅಲ್ಲಿನ ಪ್ರಧಾನ ಮಂತ್ರಿ ಫ್ರಾಂಕ್ ಬೈನಿಮಾರಮ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next