ಲುಸಾನ್ನೆ: ನೂತನ ಮಾದರಿಯ, ಕೇವಲ ಐದೇ ಆಟ ಗಾರರನ್ನೊಳಗೊಂಡ “ಹಾಕಿ ಫೈವ್ಸ್’ ಪಂದ್ಯಾವಳಿಯಲ್ಲಿ ಭಾರತ ಚಾಂಪಿ ಯನ್ ಆಗಿ ಮೂಡಿಬಂದಿದೆ. ಲುಸಾನ್ನೆ ಯಲ್ಲಿ ನಡೆದ ಫೈನಲ್‌ನಲ್ಲಿ ಭಾರತ 6-4 ಗೋಲುಗಳಿಂದ ಪೋಲೆಂಡ್‌ಗೆ ಸೋಲುಣಿಸಿದೆ.
5 ತಂಡಗಳ ಈ ಪಂದ್ಯಾವಳಿಯ ಲೀಗ್ ಹಂತದಲ್ಲಿ ಭಾರತ 3 ಗೆಲುವು ಹಾಗೂ ಒಂದು ಡ್ರಾ ಸಾಧನೆಯೊಂದಿಗೆ ಅಗ್ರಸ್ಥಾನ ಅಲಂಕರಿಸಿತ್ತು. ಪೋಲೆಂಡ್ 2 ಜಯ ಹಾಗೂ 2 ಸೋಲುಗಳೊಂದಿಗೆ ದ್ವಿತೀಯ ಸ್ಥಾನಿಯಾಗಿ ಫೈನಲ್ ಪ್ರವೇಶಿ ಸಿತ್ತು. ಇದರಲ್ಲೊಂದು ಸೋಲು ಭಾರತ ದೆದುರೇ ಬಂದಿತ್ತು. ಅಂತರ 6-2. ಫೈನಲ್‌ನಲ್ಲಿ ಮತ್ತೆ ಎಡವಿತು.
ಪೋಲೆಂಡ್ ಅತ್ಯಂತ ಆಕ್ರಮಣಕಾರಿ ಯಾಗಿಯೇ ಆಟ ಆರಂಭಿಸಿತ್ತು. ಐದೇ ನಿಮಿಷಗಳಲ್ಲಿ 3 ಗೋಲು ಸಿಡಿಸಿ ಮೇಲುಗೈ ಸಾಧಿಸಿತು. ಆದರೆ 8ನೇ ನಿಮಿಷದಿಂದ ಭಾರತದ ಹೋರಾಟ ತೀವ್ರಗೊಂಡಿತು. ವಿರಾಮದ ವೇಳೆ ಸಂಜಯ್ ಮತ್ತು ಗುರೀಂದರ್ ಸಿಂಗ್ ಸೇರಿಕೊಂಡು ಹಿನ್ನಡೆಯನ್ನು 2-3ಕ್ಕೆ ಇಳಿಸಿದರು. ಬಳಿಕ ಧಾಮಿ ಬಾಬಿ ಸಿಂಗ್ ಮತ್ತು ರಾಹೀಲ್ ಮೊಹಮ್ಮದ್ ಸೇರಿಕೊಂಡು 4-3 ಮುನ್ನಡೆ ತಂದಿತ್ತರು. ಬಳಿಕ ರಹೀಲ್ ಮತ್ತು ಗುರೀಂದರ್ ತಮ್ಮ 2ನೇ ಗೋಲು ಸಿಡಿಸಿದರು. ಈ ನಡುವೆ ಪೋಲೆಂಡ್ ಕೂಡ 2 ಗೋಲು ಬಾರಿಸಿತು. ಅದರ ಸೋಲಿನ ಅಂತರವಷ್ಟೇ ತಗ್ಗಿತು.
ಐದೇ ಮಂದಿ, 20 ನಿಮಿಷ!
ಹಾಕಿ ಫೈವ್ಸ್ ಎಂಬುದು ನೂತನ ಮಾದರಿಯ ಆಟ. ಟಿ20 ಕ್ರಿಕೆಟ್, ರಗಿºà ಸೆವೆನ್ಸ್, 3ಗಿ3 ಬಾಸ್ಕೆಟ್‌ಬಾಲ್‌ನಂತೆಯೇ ಇದು ಹಾಕಿಯ ಕಿರು ರೂಪ. ಒಂದು ತಂಡದಲ್ಲಿ ಕೇವಲ 5 ಆಟಗಾರರಿಗೆ ಅವಕಾಶ. ಇದರಲ್ಲಿ ಓರ್ವ ಗೋಲ್‌ಕೀಪರ್. 4 ಬದಲಿ ಆಟಗಾರರನ್ನು ಬಳಸಬಹುದು. ಆಟದ ಅವಧಿ ಒಟ್ಟು 20 ನಿಮಿಷ. ತಲಾ 10 ನಿಮಿಷಗಳ ಎರಡು ಅವಧಿ. ಗೋಲ್‌ಪೋಸ್ಟ್ ಅಗಲ 3.66 ಮೀ. ಎತ್ತರ 2.14 ಮೀ. ಅಂಗಳದ ವಿಸ್ತೀರ್ಣ ಮಾಮೂಲು ಅಂಗಳದ ಅರ್ಧದಷ್ಟು. ಹಾಕಿ ಟಫ್ì ವಿಸ್ತೀರ್ಣ, ಗರಿಷ್ಠ 55 ಮೀ.ಗಿ42 ಮೀ.; ಕನಿಷ್ಠ 40 ಮೀ.ಗಿ28 ಮೀ. ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ನಿರ್ಧರಿಸಿದೆ.