Advertisement
ಮಲಬದ್ಧತೆಯಿಂದ ಮುಕ್ತಿಅಂಜೂರದಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶ ಇರುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುವುದು.ಒಣ ಅಥವಾ ಹಸಿಯಾಗಿ ಇದನ್ನು ಸೇವಿಸಬಹುದು.
ಕಫದಿಂದ ಉಂಟಾಗುವ ಕೆಮ್ಮಿನ ನಿವಾರಣೆಗೂ ಇದು ಸಹಕಾರಿ. ಕಫ ಕರಗಿಸುವ ಶಕ್ತಿ ಅಂಜೂರಕ್ಕೆ ಇದೆ. ತೂಕ ಇಳಿಸಲು ನೆರವು
ಕಡಿಮೆ ತೂಕ ಹೊಂದಿರ ಬೇಕು ಎನ್ನುವ ಹಂಬಲವಿರುವವರು ಅಂಜೂರವನ್ನು ನಿಯಮಿತವಾಗಿ ಸೇವಿಸಬಹುದು. ಇದರಲ್ಲಿರುವ ನಾರಿನಂಶ ಅತಿಯಾದ ತೂಕವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ.
Related Articles
Advertisement
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆಅಂಜೂರದಲ್ಲಿ ಪೆಕ್ಟಿನ್ ಎಂಬ ಕರಗುವ ನಾರಿನಂಶವಿದ್ದು, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡ ನಿಯಂತ್ರಣ
ಕಡಿಮೆ ಪೊಟ್ಯಾಶಿಯಂ ಆಹಾರ ಸೇವನೆ ಮತ್ತು ಹೆಚ್ಚು ಸೋಡಿಯಂ ಸೇವನೆಯಿಂದಾಗಿ ಉಂಟಾಗುವ ರಕ್ತದೊತ್ತಡದ ನಿವಾರಣೆಗೆ ಅಂಜೂರ ಸಹಾಯಕ. ಅಂಜೂರದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಪೊಟ್ಯಾಶಿಯಂ ಅಂಶವಿದ್ದು ಇದು ರಕ್ತದೊತ್ತಡ ನಿವಾರಣೆಗೆ ಸಹಕಾರಿ. ಮೂತ್ರಪಿಂಡದ ಸಮಸ್ಯೆ ನಿವಾರಣೆ
ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತ ಅಂಜೂರ ಸೇವನೆಯಿಂದ ನಿವಾರಣೆ ಪಡೆಯಬಹುದು. ಇದರಲ್ಲಿರುವ ಆಕ್ಸಲೇಟ್ ಅಂಶವೂ ಮೂತ್ರಪಿಂಡದ ಸಮಸ್ಯೆಯನ್ನು ಪರಿಹರಿಸುತ್ತದೆ. ಸೌಂದರ್ಯ ವರ್ಧಕ
ಅಂಜೂರವನ್ನು ಸೌಂದರ್ಯ ವರ್ಧಕವಾಗಿ ಕೂಡ ಬಳಸಬಹುದು. ಅಂಜೂರವನ್ನು ಒಂದು ಗಂಟೆ ನೆನೆಸಿಟ್ಟು ರುಬ್ಬಿ ಪೇಸ್ಟ್ ತಯಾರಿಸಿ ಅದಕ್ಕೆ ಎರಡು ಹನಿ ಬಾದಾಮಿ ಎಣ್ಣೆ ಹಾಕಿ ಮುಖಕ್ಕೆ ಹಚ್ಚಿದರೆ ತ್ವಚೆಯ ಕಾಂತಿ ವೃದ್ಧಿಸುತ್ತದೆ.