Advertisement

ಆನ್‌ಲೈನ್‌ನಲ್ಲಿ ಬುರ್ಖಾ ಪದ್ಧತಿ ವಿರುದ್ಧ ಹೋರಾಟ

10:24 AM Sep 15, 2019 | sudhir |

ರಿಯಾದ್‌: ಸೌದಿ ಅರೇಬಿಯಾದ ಮಹಿಳೆಯರು ಇದೇ ಮೊದಲ ಬಾರಿಗೆ ಅಂತರ್ಜಾಲದಲ್ಲಿ ವಿಶೇಷವಾದ, ವಿನೂತನ ವಾದ ಪ್ರತಿಭಟನೆಗೆ ಇಳಿದಿದ್ದಾರೆ. ಬಗೆಬಗೆಯ ವೇಷ-ಭೂಷಣಗಳನ್ನು ಧರಿಸಿ, ಬಗೆಬಗೆಯ ವಿನ್ಯಾಸದ ವಸ್ತ್ರಗಳನ್ನು ಧರಿಸಿಕೊಂಡ ಅವರು, ಅದರ ಫೋಟೋ ಗಳನ್ನು ತೆಗೆಯಿಸಿಕೊಂಡು ಅವುಗಳನ್ನು ಅಂತರ್ಜಾಲದಲ್ಲಿ ಹಾಕಲಾ ರಂಭಿಸಿದ್ದಾರೆ.

Advertisement

ಅಸಲಿಗೆ, ಇದು ಸೌದಿಯಲ್ಲಿ ಮಹಿಳೆ ಯರಿಗೆ ಶತಮಾನಗಳಿಂದ ಕಡ್ಡಾಯವಾಗಿರುವ ಬುರ್ಖಾ ವಿರುದ್ಧದ ಅಭಿಯಾನ. ಬದಲಾದ ಕಾಲಘಟ್ಟದಲ್ಲಿ, ಬದಲಾದ ವಿಶ್ವದಲ್ಲಿ ನಾವು ಇತರ ದೇಶಗಳ ಮಹಿಳೆಯರಂತೆ ಸಂಪ್ರದಾಯದ ಉಸಿರುಗಟ್ಟುವ ವಾತಾ ವರಣದಿಂದ ಹೊರಬಂದು ಜೀವನ ನಡೆಸಲು ಬಯಸುತ್ತೇವೆ. ಅಂಥದ್ದೊಂದು ಸ್ವಾತಂತ್ರ್ಯ ನಮಗೆ ಬೇಕಿದೆ ಎಂಬ ಸಂದೇಶವನ್ನು ಈ ಅಭಿಯಾನದಲ್ಲಿ ಸುತ್ತಲಿನ ಸಮಾಜಕ್ಕೆ ನೀಡಲು ಈ ಮಹಿಳೆಯರು ಪ್ರಯತ್ನಿಸಿದ್ದಾರೆ. ಅಭಿಯಾನದಲ್ಲಿ ಪಾಲ್ಗೊಂಡಿರುವ ಮಹಿಳೆ ಯರಲ್ಲಿ ಅನೇಕರು, ಹೈ ಹೀಲ್ಡ್‌ ಶೂಗಳನ್ನು ಧರಿಸಿ, ಮುಖಕ್ಕೆ ಮೇಕಪ್‌, ಲಿಪ್‌ಸ್ಟಿಕ್‌ ಹಾಕಿಕೊಂಡು, ಉಗುರುಗಳಿಗೆ ಬಣ್ಣ ಹಾಕಿಕೊಂಡು ಸಿಂಗರಿಸಿಕೊಂಡಿದ್ದಾರೆ. ಜತೆಗೆ, ತಮ್ಮ ಆಕಾರ, ಅಂದ-ಚೆಂದಕ್ಕೆ ಒಪ್ಪುವಂಥ ಚೂಡಿದಾರ್‌ ಮಾದರಿಯ ಬಟ್ಟೆಗಳನ್ನು ಹಾಕಿಕೊಂಡಿದ್ದಾರೆ. ಒಟ್ಟಾರೆಯಾಗಿ, ಫ್ಯಾಷನಬಲ್‌ ಆಗಿ ಕಾಣಿಸಿಕೊಂಡಿದ್ದಾರೆ.

ಸೌದಿಯ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಕಳೆದ ವರ್ಷ, ಇಸ್ಲಾಂನಲ್ಲಿ ಬುರ್ಖಾ ಕಡ್ಡಾಯವೇನಿಲ್ಲ ಎಂದು ಹೇಳಿದ್ದರಿಂದ ಸ್ಫೂರ್ತಿಗೊಂಡು ಇಂಥ ಅಭಿಯಾನ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next