Advertisement
ಅವರು ಪಟ್ಟಣದ ತಾಲೂಕು ಅರಣ್ಯಭೂಮಿ ಹಕ್ಕು ಹೋರಾಟಗಾರರ ಕಾರ್ಯಾಲಯದ ಮಾಹಿತಿ ಕೇಂದ್ರದಲ್ಲಿ ಅರಣ್ಯ ಅತಿಕ್ರಮಣದಾರರನ್ನುದ್ದೇಶಿಸಿ ಮಾತನಾಡುತ್ತಿದ್ದರು. ರಾಜಕೀಯ ಸಂಘಟನೆ, ರಾಜಕೀಯ ಚಟುವಟಿಕೆ ಹೊರತಾಗಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣದಾರರ ಪರ ಸಂಘಟನೆ ಮತ್ತು ಉಚ್ಛ ಮತ್ತು ಸರ್ವೋಚ್ಚ ನ್ಯಾಯಾಲಯಗಳಲ್ಲಿ ಅತಿಕ್ರಮಣದಾರರ ಪರ ಕಾನೂನಾತ್ಮಕ ಹೋರಾಟ ಮಾಡಲು ಒತ್ತು ಮತ್ತು ಸಮಯವನ್ನು ಮೀಸಲಿಡಲಾಗುವುದು ಎಂದು ಹೇಳಿದರು.
Related Articles
Advertisement
ಜಿಲ್ಲೆಯಲ್ಲಿರುವ 1/3 ರಷ್ಟು ಅರಣ್ಯ ಅತಿಕ್ರಮಣದಾರರಿಗೆ ಹಕ್ಕಿಗೆ ಕಾನೂನಾತ್ಮಕ ರಕ್ಷಣೆ ನೀಡುವ ಉದ್ದೇಶದಿಂದ ಹೋರಾಟಗಾರರ ವೇದಿಕೆಯು ಸ್ವಂತ ಖರ್ಚಿನಲ್ಲಿ ಉಚ್ಛ ಮತ್ತು ಸರ್ವೋಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದು ನ್ಯಾಯಾಲಯದಿಂದ ಅತಿಕ್ರಮಣದಾರರಿಗೆ ಹಕ್ಕು ದೊರಕಿಸಿಕೊಡುವಲ್ಲಿ ಪೂರಕವಾದ ಆದೇಶ ಮುಂದಿನ ದಿನಗಳಲ್ಲಿ ಬರಬಹುದೆಂಬ ಆಶಾ ಭಾವನೆ ವ್ಯಕ್ತಪಡಿಸಿದರು.
ಶಾಸಕ ಶಿವರಾಮ ಹೆಬ್ಟಾರ ನಡೆ ತಪ್ಪು: ರಾಜಕೀಯ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಹೆಬ್ಟಾರ ಸಂಪೂರ್ಣ ಸ್ವತಂತ್ರರು. ಆದರೆ ಪಕ್ಷ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಅಧಿಕಾರ ನೀಡಿದ ಪಕ್ಷವನ್ನು ತ್ಯಜಿಸಿ ಕಾರ್ಯಕರ್ತರ ಕನಸಿನ ಅಭಿವೃದ್ಧಿಯ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ರಾಜೀನಾಮೆ ನೀಡಿರುವ ನಡೆ ತಪ್ಪು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಶಿವಾನಂದ ಸ್ವಾಗತಿಸಿದರು. ರಾಮ ಗೌಳಿ ವಂದಿಸಿದರು. ಫಕೀರಪ್ಪ ಚಲವಾದಿ, ಚಿದಾನಂದ, ಸೋಮಪ್ಪ, ಶಂಕರ ವಡ್ಡರ ಮುಂತಾದವರು ಉಪಸ್ಥಿತರಿದ್ದರು.