Advertisement

Fighter: ವಾಯುಯಾನದ ರೋಚಕ ಜರ್ನಿಯಲ್ಲಿ ರಾರಾಜಿಸಿದ ತಿರಂಗ: ʼಫೈಟರ್‌ʼ ಟ್ರೇಲರ್‌ ಔಟ್

01:28 PM Jan 15, 2024 | Team Udayavani |

ಮುಂಬಯಿ: ಬಾಲಿವುಡ್‌ ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಹೃತಿಕ್‌ ರೋಷನ್‌ ಅವರ ʼಫೈಟರ್‌ʼ ಟ್ರೇಲರ್‌ ರಿಲೀಸ್‌ ಆಗಿದೆ. ಭಾರತೀಯ ವಾಯುಪಡೆಯ ಘಟಕ – ಏರ್ ಡ್ರ್ಯಾಗನ್ ಗಳ ರೋಚಕ ಸವಾರಿ ಝಲಕ್‌ ನ್ನು ಟ್ರೇಲರ್‌ ನಲ್ಲಿ ತೋರಿಸಲಾಗಿದೆ.

Advertisement

ʼಪಠಾಣ್‌ʼ ಬಳಿಕ ನಿರ್ದೇಶಕ ಸಿದ್ದಾರ್ಥ್ ಆನಂದ್‌ ದೇಶ ಪ್ರೇಮ ಸಾರುವ ಮತ್ತೊಂದು ಕಥೆಯನ್ನು ʼಫೈಟರ್‌ʼ ಮೂಲಕ ಹೇಳಲು ಸಿದ್ದರಾಗಿದ್ದಾರೆ.

ವಾಯುಪಡೆಯ ವಿಶೇಷ ಸ್ಕ್ವಾಡ್‌ ಆಗಿ ಹೃತಿಕ್‌, ದೀಪಿಕಾ, ಅನಿಲ್ ಕಪೂರ್ ಕಾಣಿಸಿಕೊಂಡಿದ್ದು, ಪಾಕಿಸ್ತಾನದ ದಾಳಿಯೊಂದಕ್ಕೆ ಪ್ರತಿದಾಳಿಯಾಗಿ ಸೇಡು ತೀರಿಸಿಕೊಳ್ಳುವ ರೋಚಕ ಜರ್ನಿಯನ್ನು ತೋರಿಸಲಾಗಿದೆ. ಯುದ್ದದ ದೃಶ್ಯಗಳ ವಿಎಫ್ ಎಕ್ಸ್‌ ,3D ಮತ್ತು 3D IMAX ಸ್ವರೂಪದಲ್ಲಿರುವ ದೃಶ್ಯಗಳು ನೋಡುಗರ ಗಮನ ಸೆಳೆಯುತ್ತದೆ. ವೈಮಾನಿಕ ಯಾನದಲ್ಲಿ ರಾರಾಜಿಸುವ ದೇಶದ ತಿರಂಗ ಹಾಗೂ ದೇಶ ಪ್ರೇಮವನ್ನು ಸಾರುವ ಸಂಭಾಷಣೆಗಳ ಟ್ರೇಲರ್‌ ನಲ್ಲಿ ಗಮನ ಸೆಳೆಯುತ್ತದೆ.

ಇದನ್ನೂ ಓದಿ: Bigg Boss Tamil 7: ಬಿಗ್‌ ಬಾಸ್‌ ಟ್ರೋಫಿ ಮುಡಿಗೇರಿಸಿಕೊಂಡ ವೈಲ್ಡ್‌ ಕಾರ್ಡ್‌ ಸ್ಪರ್ಧಿ

ಸಿನಿಮಾದಲ್ಲಿ ಸ್ಕ್ವಾಡ್ರನ್ ಲೀಡರ್ ಶಂಶೇರ್ ಪ್ಯಾಟಿ ಪಠಾನಿಯಾ ಆಗಿ ಹೃತಿಕ್‌ ಕಾಣಿಸಿಕೊಳ್ಳಲಿದ್ದು, ದೀಪಿಕಾ ಸ್ಕ್ವಾಡ್ರನ್ ಲೀಡರ್ ಮಿನಲ್  ಮಿನ್ನಿ ರಾಥೋಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ, ಅನಿಲ್ ಕಪೂರ್ ಗ್ರೂಪ್ ಕ್ಯಾಪ್ಟನ್ ರಾಕೇಶ್ ಜೈ ರಾಕಿ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

ಹೃತಿಕ್ ರೋಷನ್, ದೀಪಿಕಾ ಪಡುಕೋಣೆ , ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್, ಸಂಜೀದಾ ಶೇಖ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿರುವ ʼಫೈಟರ್‌ʼ ಇದೇ ಜ.25 ರಂದು ಅದ್ಧೂರಿಯಾಗಿ ತೆರ ಕಾಣಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next